-ಮೂರೇ ದಿನಗಳಲ್ಲಿ ಸೂಪರ್ ಹಿಟ್
-ವೀಕೆಂಡ್ ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ
ನಟ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಸಿನಿಮಾ ಸೂಪರ್ ಹಿಟ್ ಆಗಿದೆ. ಕೊರೊನಾ ನಡುವೆಯೂ ಮೊದಲ ದಿನ ದಾಖಲೆಯ ಗಳಿಕೆ ಮಾಡಿದೆ. ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಮಾಸ್ಟರ್ ಪ್ರೇಕ್ಷಕರನ್ನು ಸೆಳೆದಿದೆ. ಆಸ್ಟ್ರೇಲಿಯಾದಲ್ಲಿ ‘ಮಾಸ್ಟರ್’ ಸಿನಿಮಾ ಮೂರು ದಿನಕ್ಕೆ ದಾಖಲೆ ಮೊತ್ತದ ಕಲೆಕ್ಷನ್ ಪಡೆದಿದೆ.
ಮೂರು ದಿನದಲ್ಲಿ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 3.60 ಕೋಟಿಗೂ ಹೆಚ್ಚು ಹಣ ಗಳಿಸಿದೆ ವಿಜಯ್ ನಟನೆಯ ಮಾಸ್ಟರ್ ಸಿನಿಮಾ. ವೀಕೆಂಡ್ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಹಲವು ದೇಶಗಳಲ್ಲಿ ಮಾಸ್ಟರ್ ಬಿಡುಗಡೆ ಆಗಿದೆ. ನ್ಯೂಜಿಲೆಂಡ್ನಲ್ಲಿ ಮೊದಲ ದಿನ 27 ಲಕ್ಷಕ್ಕೂ ಹೆಚ್ಚು ಹಣ ಗಳಿಸಿತ್ತು ಮಾಸ್ಟರ್. ಅಮೆರಿಕದಲ್ಲಿ ಮಾಸ್ಟರ್ಗೆ ಹೆಚ್ಚು ಚಿತ್ರಮಂದಿರಗಳು ದೊರೆತಿಲ್ಲ ಎನ್ನಲಾಗಿದೆ.
ಬಿಡುಗಡೆ ಆದ ಮೊದಲ ದಿನವೂ ಭಾರತದಲ್ಲಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಮಾಸ್ಟರ್. ಕೊರೊನಾ ನಿಯಮಾವಳಿಗಳ ನಡುವೆಯೇ ಬಿಡುಗಡೆ ಆಗಿಯೂ 40 ಕೋಟಿಗೂ ಹೆಚ್ಚು ಹಣ ಗಳಿಸಿದೆ. ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರ-ತೆಲಂಗಾಣಗಳಲ್ಲಿ ಹೆಚ್ಚು ಗಳಿಸಿದ ಮಾಸ್ಟರ್.