-ಸೆಂಟ್ರಲ್ ವಿಸ್ತಾ: ನಿರ್ಮಾಣ ಕಾರ್ಯ ಶುರು
–ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿಪೂಜೆ
ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದು, ಶುಕ್ರವಾರ ಚಾಲನೆ ನೀಡಲಾಯಿತು. 2022ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 75ನೇ ಸ್ವಾತಂತ್ರ್ಯೋತ್ಸವ ಅದೇ ವರ್ಷ ನಡೆಯಲಿದೆ.ಹಾಗಾಗಿ ಆ ವರ್ಷದ ಚಳಿಗಾಲದ ಅಧಿವೇಶವನ್ನು ನೂತನ ಸಂಸತ್ಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ನಿರ್ಮಾಣ ಕಾರ್ಯವು 35 ದಿನ ತಡವಾಗಿ ಆರಂಭವಾಗಿದ್ದರೂ ನಿಗದಿತ ಅವಧಿಗೂ ಮೊದಲೇ ನೂತನ ಸಂಸತ್ ಭವನವನ್ನು ನಿರ್ಮಿಸಲಾಗುವುದು’ ಎಂದು ಸಂಸ್ಥೆ ಹೇಳಿದೆ.
₹ 971 ಕೋಟಿ ವೆಚ್ಚದ ಈ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಲಿ.ಗೆ ನೀಡಲಾಗಿದೆ.