ಉಡುಪಿಯಲ್ಲಿ ಮೈಂಡ್ ಮಿಸ್ಟರಿ ಜಾದೂ ಪ್ರದರ್ಶನಕ್ಕೆ ಸಜ್ಜು!
– ಡಿಸೆಂಬರ್ 21 ಹಾಗೂ 22ರಂದು ಉಡುಪಿಯಲ್ಲಿ ಕಾರ್ಯಕ್ರಮ
– ಪೋಸ್ಟರ್ ಬಿಡುಗಡೆ ಮಾಡಿದ ಉದ್ಯಮಿ, ನಾಡೋಜ ಡಾ.ಜಿ.ಶಂಕರ್
NAMMUR EXPRESS NEWS
ಉಡುಪಿ: ಜಾದೂಗಾರ ಕುದ್ರೋಳಿ ಗಣೇಶ್ ರವರ ಹೊಸ ಪ್ರಯೋಗ ” ಮೈಂಡ್ ಮಿಸ್ಟರಿ ” ಪ್ರದರ್ಶನದ ಪೋಸ್ಟರ್ ಬಿಡುಗಡೆಯನ್ನು ಪ್ರಸಿದ್ದ ಉದ್ಯಮಿ, ನಾಡೋಜ ಡಾ.ಜಿ.ಶಂಕರ್ ಅವರು ಉಡುಪಿಯಲ್ಲಿ ನೆರವೇರಿಸಿದರು.
ಶ್ಯಾಮಿಲಿ ಸಭಾಂಗಣದಲ್ಲಿ ಜಾದೂ ತಂತ್ರಗಾರಿಕೆಯಿಂದ ಪೋಸ್ಟರ್ ಬಿಡುಗಡೆಗೊಳಿಸಿಲಾಯಿತು. ಡಾ.ಜಿ.ಶಂಕರ್ ರವರು ಮಂತ್ರದಂಡವನ್ನು ತಟ್ಟಿದಾಗ ಬರಿದಾದ ಪೆಟ್ಟಿಗೆಯಲ್ಲಿ ಚಿಮ್ಮಿದ ರಿಬ್ಬನ್ ರಾಶಿಯಲ್ಲಿ ಪೋಸ್ಟರ್ ಮೂಡಿಬಂತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಶಂಕರ್ ಸದಾ ಹೊಸತನಗಳ ಮೂಲಕ ಜನಪ್ರಿಯರಾಗಿರುವ ಕುದ್ರೋಳಿ ಗಣೇಶ್ ಅಂತರರಾಷ್ಟ್ರೀಯವಾಗಿ ಚರ್ಚೆಯಲ್ಲಿರುವ ಮೆಂಟಲಿಸಮ್ ಕಲೆಯಲ್ಲಿ ನಿಪುಣರಾಗಿ ಈ ಕಲೆಯಲ್ಲಿ ಪಳಗಿರುವುದು ಮೆಚ್ಚತಕ್ಕ ವಿಚಾರ.ಈ ಕಲಾ ಪ್ರದರ್ಶನದ ಪ್ರಥಮ ಸಾರ್ವಜನಿಕ ಪ್ರದರ್ಶನವನ್ನು ಉಡುಪಿಯಲ್ಲಿ ಹಮ್ಮಿಕೊಂಡಿದ್ದು ಪ್ರೇಕ್ಷಕರಿಗೆ ಹೊಸ ಅನುಭವ ಸಿಗಲಿ ಎಂದು ಶುಭ ಹಾರೈಸಿದರು. ಜಾದೂಗಾರ ಕುದ್ರೋಳಿ ಗಣೇಶ್ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ವಿವರಿಸಿದರು. ಮೈಂಡ್ ರೀಡಿಂಗ್, ಟೆಲಿಪತಿ , ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್, ಸಮ್ಮೊಹಿನಿ ಮುಂತಾದ ಸುಪ್ತ ಮನಸ್ಸಿನ ಶಕ್ತಿಯ ರಂಗ ರೂಪಾತ್ಮಕ ಪ್ರಯೋಗವೇ ಮೈಂಡ್ ಮಿಸ್ಟರಿ. ಆಷ್ಟ್ರೇಲಿಯಾ, ಕಿನ್ಯಾ,ದುಬಾಯಿ, ಕತಾರ್ ಮುಂತಾದ ದೇಶಗಳಲ್ಲಿ ಈ ಪ್ರಯೋಗ ನೀಡಿದ್ದು ಇದೇ ಮೊದಲ ಪಾಲಿಗೆ ಉಡುಪಿಯಲ್ಲಿ ಸಾರ್ವಜನಿಕ ಪ್ರದರ್ಶನ ನೀಡುತ್ತಿದ್ದೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕುದ್ರೋಳಿ ಗಣೇಶ್ ರವರು ಪ್ರದರ್ಶಿಸಿದ ಮೆಂಟಲಿಸಮ್ ಕಲೆಯ ಹಲವು ಪ್ರಾತ್ಯಕ್ಷಿತೆ ವೀಕ್ಷಿಸಿ ನೆರೆದಿದ್ದ ಪರ್ತಕರ್ತರು ಬೆರಗಾದರು.
ಕಾರ್ಯಕ್ರಮದ ಸಂಯೋಜಕರಾದ ವಿಕ್ರಂ ಶೆಟ್ಟಿ ಸ್ವಾಗತಿಸಿದರು. ಮೈಂಡ್ ಮಿಸ್ಟರಿ ಪ್ರದರ್ಶನ ಡಿಸೆಂಬರ್ 21 ಹಾಗೂ 22 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಮೊದಲನೆ ದಿನ ಸಂಜೆ 6.30 ಕ್ಕೆ ಹಾಗೂ ಎರಡನೇ ದಿನ ಮಧ್ಯಾಹ್ನ 3.30 ಕ್ಕೆ ಹಾಗೂ ಸಂಜೆ 6.30 ಕ್ಕೆ ಹೀಗೆ ಎರಡು ದಿನದಲ್ಲಿ ಮೂರು ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. ಮೆಂಟಲಿಸಮ್ ಕಲೆಯ ವೀಕ್ಷಣೆಗೆ ಬೇಕಾಗಿರುವ ಏಕಾಗ್ರತೆ ಹಾಗೂ ಗಂಬೀರತೆಯನ್ನು ಪರಿಗಣಿಸಿ ಕಾರ್ಯಕ್ರಮದ ಪ್ರವೇಶವು 16 ವರ್ಷ ಮೇಲ್ಪಟ್ಟ ಪ್ರೇಕ್ಷಕರಿಗೆ ಮಾತ್ರ ಇರುತ್ತದೆ ಎಂದು ಸೂಚನೆ ನೀಡಿದರು.