ಬ್ರಹ್ಮಾವರದಲ್ಲಿ ನಡೆದ 3 ದಿನದ ಹಲಸಿನ ಮೇಳ ಸಕ್ಸಸ್!
– ಲಕ್ಷಾಂತರ ಜನ ಭಾಗಿ: ಹಲಸಿನ ಹಣ್ಣಿನ ಖಾದ್ಯ ಸೇವಿಸಿ ಮೆಚ್ಚುಗೆ
– ಅಚ್ಚುಕಟ್ಟಿನ ಆಯೋಜನೆ: ಮಾರಾಟಗಾರರು ಫುಲ್ ಖುಷ್
NAMMUR EXPRESS NEWS
ಬ್ರಹ್ಮಾವರ: ಬ್ರಹ್ಮಾವರದಲ್ಲಿ ನಡೆದ ಮೂರು ದಿನಗಳ ಹಲಸು ಮೇಳ ರಾಜ್ಯದ ಗಮನ ಸೆಳೆಯಿತು. ವಿವಿಧ ಬಗೆಯ ಹಲಸಿನ ಹಣ್ಣಿನ ಪ್ರದರ್ಶನ, ಹಲಸಿನ ಗಿಡದ ಪ್ರದರ್ಶನ, ಹಲಸಿನ ಖಾದ್ಯಗಳ ವಿಶೇಷವಾಗಿ ಗಮನ ಸೆಳೆದವು. ಹಲಸಿನ ಮುಳುಕ, ಹಲಸಿನ ಜ್ಯೂಸ್, ಹಲಸಿನ ಹೋಳಿಗೆ, ಹಲಸಿನ ಚಿಪ್ಸ್ ಹಾಗೂ ಹಲಸಿನ ಕಡುಬು ಹೀಗೆ ವಿಶೇಷವಾದ ಖಾದ್ಯಗಳು ಜನರು ಮುಗಿಬಿದ್ದು ಖರೀದಿಸಿ ಟೇಸ್ಟ್ ಮಾಡಿದರು. ಈ ಮೂಲಕ ಬ್ರಹ್ಮಾವರದಲ್ಲಿ ಮೂರು ದಿನಗಳ ಹಲಸಿನ ಮೇಳ ಗಮನ ಸೆಳೆಯಿತು. ಸುಮಾರು 200ಕ್ಕೂ ಹೆಚ್ಚು ವಿವಿಧ ಭಾಗದ ರಾಜ್ಯದ ಉತ್ಪಾದಕರು ಹಾಗೂ ಹಲಸು ತಿಂಡಿ ತಯಾರಕರು, ಹಲಸು ಗಿಡ ಹಾಗೂ ಹಣ್ಣು ಮಾರಾಟಗಾರರು ಹಾಗೂ ಹಲಸಿನ ವಿವಿಧ ಉತ್ಪನ್ನಗಳ ಮಾರಾಟಗಾರರು ಆಗಮಿಸಿದ್ದರು. ವಿವಿಧ ಕ್ಷೇತ್ರಗಳ ಅಂಗಡಿಗಳು ಇಲ್ಲಿ ಆಗಮಿಸಿದ್ದು.,ಅಚ್ಚು ಕಟ್ಟಿನ ಆಯೋಜನೆ ಗಮನ ಸೆಳೆಯಿತು. ಮೂರು ದಿನಗಳ ಕಾಲ ಸುಮಾರು ಲಕ್ಷಾಂತರ ಮಂದಿ ಹಲಸು ಮೇಳಕ್ಕೆ ಭೇಟಿ ನೀಡಿದ್ದು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಉತ್ಪಾದಕರು ಹಾಗೂ ಸ್ಟಾಲ್ ಮಾಲೀಕರು ಸಂತಸ ಪಟ್ಟರು.
ಹಲಸಿನ ಮೇಳದ ಬಗ್ಗೆ ಮೆಚ್ಚುಗೆ
ಬ್ರಹ್ಮಾವರದ ಎಸ್.ಎಂ.ಎಸ್. ಸಮುದಾಯ ಭವನದಲ್ಲಿ ರೋಟರಿ ಕ್ಲಬ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕೃಷಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಹಲಸು ಮತ್ತು ಹಣ್ಣು ಮೇಳ ಭಾನುವಾರ ಯಶಸ್ವಿಯಾಗಿ ಸಮಾರೋಪಗೊಂಡಿತು. ಹಲಸು ಮತ್ತು ಹಣ್ಣು ಮೇಳದ ಉದ್ಘಾಟನಾ ಕಾಠ್ಯಕ್ರಮದಲ್ಲಿ ಹಿರಿಯ ಕೃಷಿಕ ಶ್ರೀನಿವಾಸ ಹೆಗ್ಡೆ ಜೇನು ಕೃಷಿಕ ಸುರೇಶ್ ಕರ್ಕೇರ ಅವರನ್ನು ಸಮ್ಮಾನಿಸಲಾಯಿತು. ಅತಿಥಿ ಗಣ್ಯರು ಉಪಸ್ಥಿತರಿದ್ದರು. ವೈವಿಧ್ಯಮಯ ಹಣ್ಣು, ಸಸ್ಯ, ತಿಂಡಿ ತಿನಿಸುಗಳಲ್ಲದೆ ಕರಕುಶಲ ವಸ್ತುಗಳು, ಆಯುರ್ವೆದಿಕ್, ಗೃಹ ತಯಾರಿಕೆಯ ಉತ್ಪನ್ನಗಳನ್ನು ಜನರು ಮುಗಿಬಿದ್ದು ಖರೀದಿಸಿದರು.
ನೂರಾರು ಪ್ರಾಡಕ್ಟ್ ಪ್ರದರ್ಶನ!
ವಾರಾಂತ್ಯ ಜತೆಗೆ ಬಿಸಿಲಿನ ವಾತಾವರಣವಿದ್ದುದರಿಂದ ಮೂರು ದಿನವೂ ಜನರು ಹುಮ್ಮಸ್ಸಿನಿಂದ ಪಾಲ್ಗೊಂಡರು. ಸಹಸ್ರಾರು ಮಂದಿ ಭೇಟಿ ನೀಡಿದ್ದರು. ಕೃಷಿಕರಿಗೆ ಹಾಗೂ ಸಣ್ಣ ಉದ್ದಿಮೆದಾರರಿಗೆ ನೇರ ಮಾರುಕಟ್ಟೆ ಕಲ್ಪಿಸುವ, ಜನರಿಗೆ ವಿಭಿನ್ನ ವಸ್ತುಗಳನ್ನು ಪರಿಚಯಿಸುವ ಮೇಳದ ಉದ್ದೇಶ ಈಡೇರಿತು.
ಅಚ್ಚುಕಟ್ಟಿನ ಆಯೋಜನೆ: ಮಾರಾಟಗಾರರು ಫುಲ್ ಖುಷ್
ರೋಟರಿ ಕ್ಲಬ್, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಷನ್, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕೃಷಿ ಕೇಂದ್ರದ ಆಶ್ರಯದಲ್ಲಿ ಈ ಮೇಳ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಆಯೋಜನೆ ಮಾಡಿದ ಗಣೇಶ್ ಶೆಟ್ಟಿ ಸೇರಿದಂತೆ ಎಲ್ಲರ ಸೇವೆ ಇಲ್ಲಿ ಸ್ಮರಿಸಬಹುದು.