ರಾಮಕೃಷ್ಣಪುರದಲ್ಲಿ ಕನ್ನಡ ರಾಜ್ಯೋತ್ಸವದ ರಂಗು!
– ಸಮರ್ಪಣ ತಂಡದ ಕಾರ್ಯಕ್ರಮದಲ್ಲಿ ಗಾಯನ ಸೂಪರ್
– ಸಾಧಕರಿಗೆ ಸನ್ಮಾನ: ಕನ್ನಡದ ಕಲರವದಲ್ಲಿ ಮಿಂದೆದ್ದ ಜನತೆ
NAMMUR EXPRESS NEWS
ತೀರ್ಥಹಳ್ಳಿ: ಸಮರ್ಪಣ ತಂಡ ಮತ್ತು ಗೆಳೆಯರ ಬಳಗ ರಾಮಕೃಷ್ಣಪುರ ಇವರ ಸಹಯೋಗದಲ್ಲಿ ಶನಿವಾರ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ರಾಮಕೃಷ್ಣಪುರ ಗ್ರಾಮ ಪಂಚಾಯತ್ ಆವರಣದ ಕುವೆಂಪು ರಂಗ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಅತ್ಯಂತ ಅಚ್ಚುಕಟ್ಟಿನ ಕಾರ್ಯಕ್ರಮದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣವನ್ನು ರಾಮಕೃಷ್ಣಪುರ ಹೈಸ್ಕೂಲ್ ಮುಖ್ಯ ಉಪಾಧ್ಯಾಯರಾದ ದಿವಾಕರ್ ಈ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರು ಆದಂತಹ ಅಂಬರೀಶ್ ಭಾರದ್ವಾಜ್ ಉಪನ್ಯಾಸ ಮಾಡಿದರು. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ತಂಡಗಳಿಗೆ ವಾಲಿಬಾಲ್ ಕ್ರೀಡಾಕೂಟ ನಡೆಯಿತು. ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗ್ಡೆ, ಧರ್ಮಸ್ಥಳ ಯೋಜನೆ ಅಧಿಕಾರಿ ಮಾಲತಿ ಇದ್ದರು.
ಸಾಧಕರಿಗೊಂದು ಸನ್ಮಾನ ಕಾರ್ಯಕ್ರಮ
ದಿ. ಬಿ. ಎಂ. ನಾಗರಾಜ್ ಅವರಿಗೆ ಮರಣೋತ್ತರವಾಗಿ ಲಲಿತಾ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಂಗಳ, ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಮುಖ್ಯಸ್ಥರಾದ ರಾಘವೇಂದ್ರ ತೀರ್ಥಹಳ್ಳಿ, ನಿವೃತ್ತ ಪಶು ವೈದ್ಯ ಡಾ.ಶ್ರೀನಿವಾಸ್, ಸರ್ಕಾರಿ ಪ್ರೌಢ ಶಾಲೆ ಅಭಿವೃದ್ಧಿ ಮುಖ್ಯ ಪಾತ್ರ ವಹಿಸಿದ ಪ್ರಮುಖರಾದ ನಾಗಭೂಷಣ್, ರಜಿತ್, ವಿಶ್ವಾಸ್, ಸಂತೋಷ್, ಗಿರೀಶ್ ಅವರನ್ನು ಸನ್ಮಾನಿಸಲಾಯಿತು.
ಜನಮನ ಸೆಳೆದ ಸಂಗೀತ ಗಾನ ಸುಧೆ
ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಾಕರಾದ ಶ್ರೀ ಕಂಬದ ರಂಗಯ್ಯ ನೇತೃತ್ವದಲ್ಲಿ ಕನ್ನಡದ ಹಾಡುಗಳು ಜನರ ಮನ ಸೆಳೆದವು. ಗಾಯಕರಾದ ಶಶಿಕುಮಾರ್ ಕಾರಂತ್, ಉಷಾ ಬಾಳೆಬೈಲು, ನಿಧಿ ಸುರೇಶ್ ಅನೇಕ ಹಾಡುಗಳನ್ನು ಹಾಡಿದರು. ವಾಲಿಬಾಲ್ ಪಂದ್ಯದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಫೋಟೋ ಪ್ರದರ್ಶನ ಇತ್ತು