ತೃತೀಯ ಲಿಂಗಿಗಳಿಗೂ ಉದ್ಯೋಗ ನೀತಿ!?
- ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ
- ಅಂಗವಿಕಲ ಮಹಿಳೆ ಫುಡ್ ಡೆಲಿವರಿ: ವಿಡಿಯೋ ವೈರಲ್
NAMMUR EXPRESS NEWS
ದೆಹಲಿ: ತೃತೀಯ ಲಿಂಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. 2014ರಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ತೃತೀಯಲಿಂಗಿಯೊಬ್ಬರಿಗೆ ಅಂದಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಉದ್ಯೋಗ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಸೂಕ್ತ ನೀತಿ ರೂಪಿಸುವ ಮೂಲಕ ಕಾಯಿದೆಯ ನಿಬಂಧನೆಗಳನ್ನು ಅಕ್ಷರ ದಲ್ಲಿ ಜಾರಿಗೊಳಿಸಬೇಕು. ಈ ವಿಚಾರವಾಗಿ ಕೇಂದ್ರ ಸರ್ಕಾರ ನೇತೃತ್ವ ವಹಿಸಿ, ರಾಜ್ಯ ಸರ್ಕಾರಗಳು ಮತ್ತು ಕಾಯ್ದೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳು ಸೇರಿದಂತೆ ಇತರೆ ಎಲ್ಲ ಘಟಕಗಳಿಗೆ ಸ್ಪಷ್ಟವಾಗಿ ಮಾರ್ಗದರ್ಶನ ನೀಡಬೇಕು ಎಂದು ಪೀಠ ಹೇಳಿದೆ.
ನೆಟ್ಟಿಗರ ಮನಸ್ಸು ಗೆದ್ದ ಸ್ವಿಗ್ಗಿ ವೀಲ್ಚೇರ್ ಹುಡುಗಿ
ಕೈ-ಕಾಲು ಗಟ್ಟಿಯಿದ್ದರೂ ಭಿಕ್ಷೆ ಬೇಡಿ ತಿನ್ನುವವರು ಅನೇಕರಿದ್ದಾರೆ. ಹಾಗಿರುವಾಗ ಯುವತಿಯೊಬ್ಬರು ನಡೆದಾಡುವ ಕಾಲಿನಲ್ಲಿ ಶಕ್ತಿಯಿಲ್ಲದಿದ್ದರೂ, ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿಯ ಟಿ-ಶರ್ಟ್ ಧರಿಸಿದ ಯುವತಿ ತಮ್ಮ ವೀಲ್ ಚೇರ್ ನಲ್ಲಿಯೇ ಸ್ವಿಗ್ಗಿ ಬ್ಯಾಗ್ ಇಟ್ಟುಕೊಂಡು ಸವಾರಿ ನಡೆಸುತ್ತಿದ್ದಾರೆ. ಅದನ್ನು ಅವರ ಹಿಂದೆ ಸಂಚರಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಹಂಚಿಕೊಂಡಿದ್ದು, ‘ಜೀವನ ಕಷ್ಟವೇ. ಆದರೆ ನಾವು ಅದನ್ನು ಒಪ್ಪಿಕೊಂಡು ಎದುರಿಸುವುದನ್ನು ಕಲಿಯಬೇಕು’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ. ಈ ವಿಡಿಯೋ ವೀಕ್ಷಿಸಲು ಹೀಗೆ ಸರ್ಚ್ ಮಾಡಿ: swiggy wheelchair