ಬೀದರ್: ತಮ್ಮ ಊರಿನ ಬಸ್ ಕಾದು ಕಾದು ಸುಸ್ತಾದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ತೆಗೆದುಕೊಂಡು ನಿಲ್ದಾಣದಿಂದ ಹೊರಗಿರುವ ಡಿವೈಡರ್ ಮೇಲೆ ಹತ್ತಿಸಿದ ಘಟನೆ ಬೀದರ್ ಜಿಲ್ಲೆ ಔರಾದ ಎಂಬಲ್ಲಿ ಜೂ.5 ನಡೆದಿದೆ.
ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ತನ್ನೊರಿಗೆ ಹೋಗಲು ಬಸ್ ಇರಲಿಲ್ಲ, ಹೀಗಾಗಿ ಬಸ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದರು.
ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದಲ್ಲಿ ಎಂಟ್ರಿ ಮಾಡಿಕೊಂಡು ಹೋಗಿ ಬರುವ ಸಮಯದಲ್ಲಿ ಈ ಘಟನೆ ನಡೆದಿದೆ.
ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಓಡಿ ಹೋಗುವಾಗ ಸಾರ್ವಜನಿಕರ ಸಹಾಯದಿಂದ ಎಎಸ್ಐ ಸುನೀಲ ಕುಮಾರ ಆತನನ್ನು ಹಿಡಿದು ತನ್ನ ಕಾರಿನಲ್ಲಿ ಔರಾದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಯಶಪ್ಪ ಸೂರ್ಯವಂಶಿ ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಗ್ರಾಮಕ್ಕೆ ತೆರಳಲು ಔರಾಗೆ ಬಂದಿದ್ದ ಸಂದರ್ಭ ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿದೆ ಎನ್ನುವುದು ಗ್ರಾಮಸ್ಥರ ಮಾತು.
ಕುಡಿದ ಮತ್ತಿನಲ್ಲಿ ಯಶಪ್ಪ ಈ ರೀತಿಯಾಗಿ ಮಾಡಿದ್ದು, ಬಸ್ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈತ ಬಸ್ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದು ನಂತರ ಡಿವೈಡರ್ ಮೇಲೆ ಹತ್ತಿಸಿದ್ದಾನೆ.
ಸ್ಥಳಕ್ಕೆ ಪಿಎಸ್ಐ ಮಡಿವಾಳಪ್ಪ ಭೇಟಿ ನೀಡಿ ಸಂಚಾರ ದಟ್ಟಣೆ ನಿವಾರಿಸಿದ್ದಾರೆ.
ಅಪಘಾತಕ್ಕೆ ಐವರು ಬಲಿ: 13 ಜನರಿಗೆ ಗಾಯ
ಯಾದಗಿರಿ: ರಾಜ್ಯದಲ್ಲಿ ಅಪಘಾತ ಹೆಚ್ಚಾಗಿ ಸಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ ಯಾದಗಿರಿ ತಾಲೂಕಿನ ಚಕ್ರ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಒಟ್ಟಾರೆ 13 ಜನರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕ್ರೂಸರ್ ವಾಹನವು ಗುಲ್ಬರ್ಗಾ ಕಡೆಗೆ ತೆರಳುತ್ತಿತ್ತು. ವಾಹನದಲ್ಲಿ ಒರೋಬ್ಬರಿ 23 ಜನರನ್ನು ತುಂಬಿಕೊಂಡು ಗುಲ್ಬರ್ಗಾದ ಕಾಜೆ ಬಂದೇ ನವಾಜ್ ದರ್ಗಾ ಊರುಸಿಗೆ ಹೋಗುತ್ತಿದ್ದರು.
ಆದರೆ ಈ ವೇಳೆ ಕ್ರೂಜರ್ ಗಾಡಿಯು ನಿಲ್ಲಿಸಿದ್ದ ಲಾರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ