ಬೈಂದೂರು: ಇಬ್ಬರು ಮೀನುಗಾರರು ಸಮುದ್ರ ಪಾಲು!
– ಕಾರವಾರ: ಅತಿ ದೊಡ್ಡ ಬಂಗುಡೆ ಮೀನು ಪತ್ತೆ!
– ಮಂಗಳೂರು ವಿದ್ಯಾರ್ಥಿ ಹಲ್ಲೆ: 7 ಜನರ ಬಂಧನ
– ಉಳ್ಳಾಲ: ಕಟ್ಟಡದ ಮೇಲಿನಿಂದ ಬಿದ್ದ ಮಗು: ಪಾರು
– ಪುತ್ತೂರು: ಮನೆ ಹೊರಗೆ ಹರಡಿದ್ದ ಅಡಿಕೆ ಕಳವು!
NAMMUR EXPRESS NEWS
ಬೈಂದೂರು ತಾಲೂಕು ಕೈರಂಪಣಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಇಬ್ಬರು ಮೀನುಗಾರರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಜೆ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ. ಶಿರೂರು ಗ್ರಾಮದ ಕೆಸರಕೋಡಿ ನಿವಾಸಿಗಳಾದ ಗಂಗೊಳ್ಳಿ ಮುಸಾಬ್(22) ಹಾಗೂ ನಮಾನ್(24) ಮೃತಪಟ್ಟ ದುದೈವಿಗಳಾಗಿದ್ದಾರೆ. ಕಳೆದ ಹಲವು ಸಮಯದಿಂದ ಇವರ ಕುಟುಂಬ ಮೀನುಗಾರಿಕೆ ಮೂಲಕ ಜೀವನ ನಡೆಸುತ್ತಿದೆ .ಭಾನುವಾರ ಸಂಜೆ ಸ್ಥಳೀಯ ನಾಲ್ವರು ಕೈರಂಪಣಿ ಮೀನುಗಾರಿಕೆಗೆ ತೆರಳಿದ್ದರು.ಸಮುದ್ರ ಪ್ರಕ್ಷುಬ್ದ ಇರುವ ಕಾರಣ ಇಬ್ಬರು ಮೀನುಗಾರರು ಆಯತಪ್ಪಿ ಕಡಲ ಪಾಲಾಗಿದ್ದಾರೆ.ತಕ್ಷಣ ಇಲ್ಲಿನ ಸ್ಥಳೀಯ ಮೀನುಗಾರರು ಶೋಧಕ್ಕಾಗಿ ಪ್ರಯತ್ನಿಸಿದರು ಕೂಡ ಪತ್ತೆಯಾಗಿಲ್ಲ.ಶೋಧ ಕಾರ್ಯ ಮುಂದುವರಿದಿದೆ. ಬೈಂದೂರು ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕಕ್ಕೂ ಅಧಿಕ ಇಂತಹ ಅವಘಡ ಸಂಭವಿಸಿದ್ದು ಅಳ್ವೆಗದ್ದೆ ಪರಿಸರದಲ್ಲಿ ಕಳೆದ ತಿಂಗಳು ದೋಣಿ ಮಗುಚಿ ಕೂದಳೆಯ ಅಂತರದಲ್ಲಿ ಮೀನುಗಾರರು ಪಾರಾಗಿದ್ದರು.
ಯುವಕನ ಅಪಹರಿಸಿ ಹಲ್ಲೆ: 7 ಮಂದಿ ಅರೆಸ್ಟ್.!
ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಆರೋಪದ ಮೇರೆಗೆ 7 ಮಂದಿಯನ್ನು ಮಂಗಳೂರು ಬಂದರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19).ಬಜಾಲ್ ನಂತೂರಿನ ಯುಪಿ ತನ್ನೀರ್ (20),ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ (37) ಎಂದು ಗುರುತಿಸಲಾಗಿದೆ.ವಿದ್ಯಾರ್ಥಿಗಳಾದ ಶಾಮೀರ್ ಮತ್ತು ಇಬ್ರಾಹೀಂ ಫಾಹೀಮ್ ಎಂಬವರನ್ನು ಆ.23ರಂದು ಈ ಆರೋಪಿಗಳು ಕಾರಿನಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.
19 ಇಂಚು ಉದ್ದದ ಅತಿ ದೊಡ್ಡ ಬಂಗುಡೆ ಮೀನು ಪತ್ತೆ!
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತಿ ಉದ್ದದ ಹಾಗೂ ಹೆಚ್ಚು ತೂಕದ ಬಂಗುಡೆ ಮೀನು ಮೀನುಗಾರರ ಬಲೆಗೆ ಬಿದ್ದಿದೆ. ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ಸಿಕ್ಕಿದೆ. ಈ ಮೀನನ್ನು ವಿನಾಯಕ್ ಖರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ. ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು, ಒಂದು ಕೆಜಿ ತೂಕವಿದೆ. ಬಂಗುಡೆ ಮೀನು ಎನ್ನುವುದು ಮೀನುಗಳ 30 ಜಾತಿಗಳನ್ನು ಒಳಗೊಂಡಿರುವಂತಹ ಸಾಮಾನ್ಯ ಪದವಾಗಿದೆ. ಇದರಲ್ಲಿ ಹೆಚ್ಚಿನವುಗಳು ಸ್ಕಾಂಬ್ರಿಡೇಗೆ ಸೇರಿರುವವು. ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಲ್ ಮೀನನ್ನು ಬಂಗುಡೆ ಎಂದು ಕರೆಯಲಾಗುತ್ತದೆ. ಬಂಗುಡೆ ಮೀನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಕಂಡುಬರುತ್ತವೆ.
ಕಟ್ಟಡದ ಮೇಲಿನಿಂದ ಬಿದ್ದ ಮಗು ಉಳಿಯಿತು!
ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಆಟವಾಡುತ್ತಿದ್ದ ಮಗು ಕಟ್ಟಡದ ಮೇಲಿನಿಂದ ಬಿದ್ದ ಘಟನೆ ಆ.25 ರಂದು ನಡೆದಿದೆ. ತಾಯಿ ಜೊತೆ ಬ್ಯಾಂಕ್ ಗೆ ಬಂದಿದ್ದ ಮೂರು ವರ್ಷದ ಗಂಡು ಮಗು, ತಾಯಿ ಬ್ಯಾಂಕ್ ನ ಒಳಗಿರುವಾಗ ಆಟವಾಡುತ್ತಾ ಹೊರಗೆ ಬಂದು ಕಟ್ಟಡದ ಹೊರಗೆ ಹಾಕಿದ್ದ ಕಬ್ಬಿಣದ ಗ್ರಿಲ್ ಹತ್ತಲು ಪ್ರಯತ್ನಿಸಿ ಗ್ರಿಲ್ ಹತ್ತುವಾಗ ಆಯತಪ್ಪಿ ಮೊದಲ ಮಹಡಿಯಿಂದ ಗೌಂಡ್ ಫ್ಲೋರ್ ಗೆ ಬಿದ್ದಿದೆ. ಮಗು ಬಿದ್ದ ರಭಸಕ್ಕೆ ತಲೆ, ಕೈಗೆ ಗಾಯವಾಗಿದೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತಿದ್ದು ಸಧ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ. ಮಗು ಬಿದ್ದ ದೃಶ್ಯ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ
ಪುತ್ತೂರು: 1 ಲಕ್ಷ ಮೌಲ್ಯದ ಅಡಿಕೆ ಕಳವು
ಮನೆಯೊಂದರೊಳಗಿದ್ದ 1 ಲಕ್ಷ ರೂ. ಮೌಲ್ಯದ ಅಡಿಕೆ ಮತ್ತು 10 ಸಾವಿರ ರೂ.ನಗದು ಕಳವು ಮಾಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನೆಕ್ಕರೆ ಕಾರ್ಮಿನ್ ಮಿರಾಂದಾ ಅವರು ದೂರು ನೀಡಿದ್ದಾರೆಆ. 24ರಂದು ಸಂಜೆ 7 ಗಂಟೆಗೆ ಮನೆಯ ಹಿಂದಿನ ಜಾಗದ ವರ್ಕ್ ಏರಿಯಾದಲ್ಲಿ ಇಟ್ಟಿದ್ದ ಆರು ಗೋಣಿಚೀಲ ಅಡಿಕೆ ಮತ್ತು ಬೆಡ್ ರೂಮ್ನ ಕಪಾಟಿನಲ್ಲಿ ಇಟ್ಟಿದ್ದ 10 ಸಾವಿರ ರೂ. ಹಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.