Author: Nammur Express Admin

ತೀರ್ಥಹಳ್ಳಿಯಲ್ಲಿ ಭಾರೀ ಮಳೆ! – ಬಿಸಿಲಿನ ಬೇಗೆಗೆ ತಂಪೆರೆದ ಮಳೆ: ಹಲವೆಡೆ ಮಳೆ ಇಲ್ಲ – ತುಂಗಾ ನದಿ ನೀರು ಕೊಂಚ ಏರಿಕೆ NAMMUR EXPRESS NEWS ತೀರ್ಥಹಳ್ಳಿ: ಬಿಸಿಲಿನ ಬೇಗೆಗೆ ಬಸವಳಿದ ಜನರಿಗೆ ವರುಣದೇವ ಖುಷಿ ನೀಡಿದ್ದಾನೆ. ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿದಿದೆ. ತುಂಗಾ ನದಿ ಸೇರಿ ಹಳ್ಳ, ಕೆರೆ ನೀರು ಕಳೆದೊಂದು ವಾರದಲ್ಲಿ ಕೊಂಚ ಏರಿಕೆ ಆಗಿದೆ. ಶೃಂಗೇರಿ, ಕೊಪ್ಪ ಭಾಗದಲ್ಲಿ ಇತ್ತೀಚಿಗೆ ಉತ್ತಮ ಮಳೆಯಾಗುತ್ತಿದೆ. ಮೇ 18ರ ವರೆಗೆ ಮಳೆ ಸಾಧ್ಯತೆ ಮೇ 18ರವರೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ. ಕೊಡಗು, ಮೈಸೂರು, ಮಂಡ್ಯದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿಮೀ)ಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಾಮರಾಜನಗರದಲ್ಲಿ ಸಾಧಾರಣ…

Read More

ಕೇರಳದಲ್ಲಿ ಹೆಚ್ಚಾದ ವೆಸ್ಟ್ ನೈಲ್ ಜ್ವರ.! – ಮೈಸೂರು ಗಡಿ ಭಾಗದಲ್ಲಿ ಅಲರ್ಟ್ ಆದ ಅಧಿಕಾರಿಗಳು NAMMUR EXPRESS NEWS ಮೈಸೂರು: ಪಕ್ಕದ ರಾಜ್ಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಳ ಬಾಗುತಿದ್ದಂತೆ ಇದೀಗ ಮೈಸೂರು ಗಡಿಭಾಗದಲ್ಲಿ ಆರೋಗ್ಯ ಅಧಿಕಾರಿಗಳು ಅಲರ್ಟ್ ಆಗಿದ್ದು ಕೇರಳದಿಂದ ಮೈಸೂರಿಗೆ ಆಗಮಿಸುವ ವಾಹನಗಳ ತಪಾಸನೆ ಹಾಗೂ ಸವಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಳವಾಗುತ್ತಿದ್ದಂತೆ ಇತ್ತ ಮೈಸೂರು ಗಡಿ ಭಾಗದಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಕೇರಳದಿಂದ ಬರುವ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದು, ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಿಂದ ಮೈಸೂರಿಗೆ ಆಗಮಿಸುವವರ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

Read More

ಮೈಸೂರು ಕರಗಕ್ಕೆ ಶತಮಾನದ ಸಂಭ್ರಮ..! – ಹೇಗಿರಲಿದೆ ಆಚರಣೆ? NAMMUR EXPRESS NEWS ಮೈಸೂರು: ಸಾಂಸ್ಕೃತಿಕ ನಗರಿಯ ಮೆರಗು ಹೆಚ್ಚಿಸಿರುವ ಆಚರಣೆಗಳಲ್ಲಿ ಇಲ್ಲಿನ ಕರಗ ಮಹೋತ್ಸವ ಕೂಡ ಒಂದು. ಇದೀಗ ಈ ಉತ್ಸವವು ಶತಮಾನದ ಸಂಭ್ರಮದಲ್ಲಿದೆ. ಮೂಲತಃ ಮೈಸೂರು ನಗರ ನಿವಾಸಿಗಳೇ ಆದವರಿಗೆ ಐದು ದಿನಗಳ ಕಾಲ ನಡೆಯುವ ಈ ಕರಗದ ಸಂಭ್ರಮದ ನೆನಪು ಅಚ್ಚಳಿಯದೇ ಉಳಿದಿರುತ್ತದೆ. ಅದರಲ್ಲೂ ಇಟ್ಟಿಗೆಗೂಡು, ನಜರಬಾದ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದವರು, ಇರುವವರಿಗೆ ಇದೊಂದು ವಿಶಿಷ್ಟ ಅನುಭವ. ಕರಗ ಹೊತ್ತ ಕರಗಧಾರಿಗಳು ಇಟ್ಟಿಗೆಗೂಡಿನಿಂದ ಆರಂಭಿಸಿ ರಾತ್ರಿಯಿಡೀ ನಗರದ ವಿವಿಧ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರೊಟ್ಟಿಗೆ ನೂರಾರು ಭಕ್ತರು ಜಾಗರಣೆ ಇದ್ದು, ತಾವೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿನ ಕುಣಿತ, ಕಲಾ ತಂಡಗಳ ಪ್ರದರ್ಶನಗಳು ಹೊಸತೊಂದು ಅನುಭವ ಕಟ್ಟಿಕೊಡುತ್ತ ಬಂದಿವೆ. ಶಕ್ತಿ ದೇವತೆಗಳ ಆರಾಧನೆ: ಇಟ್ಟಿಗೆಗೂಡು ಕರಗವು ಚಾಮುಂಡೇಶ್ವರಿ ಹಾಗೂ ಮಾರಿಯಮ್ಮ ಶಕ್ತಿ ದೇವತೆಗಳ ಆರಾಧನೆಗೆ ಮೀಸಲಾದ ಆಚರಣೆ. ದುಷ್ಟಶಕ್ತಿಗಳ ನಿಗ್ರಹಕ್ಕಾಗಿ ಚಾಮುಂಡಿ ಹಾಗೂ ಸಾಂಕ್ರಾಮಿಕ ರೋಗ,…

Read More

ಸಿ.ಬಿ.ಎಸ್. ಇ. ಪರೀಕ್ಷೆಯಲ್ಲೂ ಅಮೃತ ಭಾರತಿ ಸಾಧನೆ – ಅಮೃತ ಭಾರತಿ ವಿದ್ಯಾಕೇಂದ್ರ ಶೇ.100 ಫಲಿತಾಂಶ ದಾಖಲು – 90ರಲ್ಲಿ ,20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ NAMMUR EXPRESS NEWS ಹೆಬ್ರಿ: ಹೆಬ್ರಿಯ ಪ್ರತಿಷ್ಠಿತ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಕೇಂದ್ರ ಸಿ. ಬಿ.ಎಸ್. ಇ. ಪರೀಕ್ಷಾ ಫಲಿತಾಂಶ ದಲ್ಲಿ 100 ಶೇಕಡಾದ ಅಮೋಘ ಸಾಧನೆ ಮಾಡಿದೆ. ಸಂಸ್ಥೆಯ ಅನನ್ಯ ಸಿ.ಕೆ. 96.6 ಶೇಕಡಾ ಸಾಧನೆಯೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆಡಿದ್ದಾಳೆ. ಪ್ರಖ್ಯಾತ ಪೀ. ನಾಯಕ್ ಶೇ.95.6 , ಪ್ರಶುಲ್ ಸಂತೋಷ್ ಶೆಟ್ಟಿ ಶೇ.94 , ಶ್ರೀದತ್ತ ಶೇ.91.4 , .ಪ್ರಾಪ್ತಿ ಶೇ.91 ನಿಹಾಲ್ ಶೇ 90 ಶೇಕಡಾ ಅಂಕ ಗಳನ್ನು ಗಳಿಸಿರುತ್ತಾರೆ. ಪರೀಕ್ಷೆ ಬರೆದ 90 ವಿದ್ಯಾರ್ಥಿಗಳಲ್ಲಿ ,20 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ,(ಡಿಸ್ಟಿಂಕ್ಷನ್) 59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯೊಂದಿಗೆ ಉತ್ತಿರ್ಣರಾಗಿರುತ್ತಾರೆ . ಸಾಧಕ ವಿದ್ಯಾರ್ಥಿ ಗಳಿಗೆ ಆಡಳಿತ ಮಂಡಳಿ , ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು…

Read More

ಪ್ರಜ್ವಲ್ ಪೆನ್‌ಡ್ರೈವ್ ಹಂಚಿಕೆ ಪ್ರಕರಣ..! – 18 ಕಡೆ ಎಸ್‌ಐಟಿ ರೇಡ್ – ಪ್ರೀತಂ ಗೌಡ ಆಪ್ತನ ಮನೆಯಲ್ಲಿ ಸಿಕ್ಕಿದ್ದಾದರೂ ಏನು? NAMMUR EXPRESS NEWS ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ ಸಂಬಂಧ ಮಂಗಳವಾರ ಹದಿನೆಂಟು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಎಸ್‌ಐಟಿ ಮುಂಜಾನೆ 3.30ರವರೆಗೂ ಶೋಧಕಾರ್ಯ ನಡೆಸಿದೆ. ಮಾಜಿ ಶಾಸಕ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ನಿವಾಸದ ಮೇಲೂ ಎಸ್‌ಐಟಿ ತಂಡಗಳು ಪ್ರತ್ಯೇಕವಾಗಿ ದಾಳಿ ನಡೆಸಿದ್ದವು. ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್ ಮೇಲೂ ದಾಳಿ ಮಾಡಿದ್ದ ಎಸ್‌ಐಟಿ ಟೀಂ ಶರತ್ ಅವರ ಐಫೋನ್ ಅನಮಾತುಪಡಿಸಿಕೊಂಡು ಪರಿಶೀಲಿಸಿದೆ. ಆದರೆ ಅವರ ಮನೆಯಲ್ಲಿ ಕೇಸಿಗೆ ಉಪಯುಕ್ತ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್‌ಐಟಿ ಶೋಧನಾ…

Read More

ಹೆಬ್ರಿ ಎಸ್ ಆರ್ ಪಬ್ಲಿಕ್ ಸ್ಕೂಲ್ ಸಾಧನೆ..! – ಸತತ 14ನೇ ವರ್ಷದಲ್ಲಿಯೂ ಸಿ.ಬಿ.ಎಸ್.ಇ 100% ಫಲಿತಾಂಶ NAMMUR EXPRESS NEWS ಹೆಬ್ರಿ: ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲ್ನ ಸಿ.ಬಿ.ಎಸ್.ಇ ವಿಭಾಗವು ಹತ್ತನೇ ತರಗತಿಯಲ್ಲಿ 100% ಫಲಿತಾಂಶವನ್ನು ದಾಖಲಿಸಿಕೊಂಡು ಸತತ 14 ವರ್ಷದಲ್ಲಿಯೂ 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಈ ಬಾರಿಯ ಫಲಿತಾಂಶದಲ್ಲಿ ಸಮನ್ವಿ ಶೆಟ್ಟಿ 474/500 (94.8%)ಅಂಕ ಪಡೆದು ಪ್ರಥಮ ಸ್ಥಾನ, ಬಿ.ಜಿ. ಆದಿತ್ಯ ಗೌಡ 469/500 (93.8%)ಅಂಕ ಪಡೆದು ದ್ವಿತೀಯ ಸ್ಥಾನ, ಅಗಸ್ತ್ಯ ನಾಯಕ್ 467/500(93.4%)ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ 108 ವಿದ್ಯಾರ್ಥಿಗಳಲ್ಲಿ, 25 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 25 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ಶಾಲೆಯು 100% ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಸಾಧಕ ವಿದ್ಯಾರ್ಥಿಗಳನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ, ಕಾರ್ಯದರ್ಶಿಯವರಾದ ಸ್ವಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.

Read More

ಕರಾವಳಿ ಟಾಪ್ ನ್ಯೂಸ್ ಶಿರ್ವದ ಮದ್ರಸದಿಂದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ! – ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು – ಬೈಕ್‌ ಅಪಘಾತದಲ್ಲಿ ಮೆಡಿಕಲ್‌ ವಿದ್ಯಾರ್ಥಿ ಸಾವು NAMMUR EXPRESS NEWS ಉಡುಪಿ ಜಿಲ್ಲೆಯ ಶಿರ್ವದ ಫೈಝಲ್‌ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮಂಗಳವಾರ ಮಧ್ಯಾಹ್ನದಿಂದ ಕಾಣೆಯಾಗಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್‌, ಜಂಶೀದ್‌, ತಂಝೀರ್‌ ಆಲಮ್‌, ಶಾಹಿಲ್‌ ಎಂದು ಗುರುತಿಸಲಾಗಿದೆ. ಈ ಮಕ್ಕಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಮದ್ರಸ ಶಿಕ್ಷಣ ಕಲಿಯುತ್ತಿದ್ದ ನಾಲ್ವರು ಮೇ 14ರಂದು ಮಧ್ಯಾಹ್ನದ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೂ ವಾಪಾಸ್‌ ಬರದೆ ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ಊರಿಗೆ ಹೋಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ನಾಲ್ವರು ಕಾಣೆಯಾಗಿರುವ ಬಗ್ಗೆ ಫೈಝಲ್‌ ಇಸ್ಲಾಂ ಎಜ್ಯುಕೇಷನ್‌ ಟ್ರಸ್ಟ್‌ನ ಫರ್ವೇಝ್‌ ಸಲೀಂ ಅವರು ಶಿರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು! ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಸಂಭವಿಸಿದ…

Read More

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್.! – ಏಕಾಏಕಿ ಖಾತೆಗಳು ಲಾಗೌಟ್‌ – ಬಳಕೆದಾರರ ಪರದಾಟ NAMMUR EXPRESS NEWS ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ.ಇಂಟರ್‌ನೆಟ್ ಟ್ರಾಫಿಕ್ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್ ಓಪನ್ ಮಾಡುವಾಗ Something went wrong. There’s an issue and the page could…

Read More

ಪೋಷಕರೇ ಗಮನಿಸಿ..1ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ! – ಕೇಂದ್ರ ಸರ್ಕಾರ ಆದೇಶ: ಏನಿದು ನಿಯಮ? NAMMUR EXPRESS NEWS ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ, 2009 ಅನ್ವಯ 1 ನೇ ತರಗತಿಗೆ ಮಕ್ಕಳು ಪ್ರವೇಶ ಪಡೆಯಲು ‘ಕನಿಷ್ಠ 6 ವರ್ಷ’ ಕಡ್ಡಾಯ ಗೊಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. 2024-25ರ ಶೈಕ್ಷಣಿಕ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಹೊಸ ಪ್ರವೇಶಗಳು ನಡೆಯಲಿವೆ. 1ನೇ ತರಗತಿಗೆ ಪ್ರವೇಶ ಪಡೆಯಲು ರಾಜ್ಯ /ಕೇಂದ್ರಾಡಳಿತ ಪ್ರದೇಶದಲ್ಲಿ ವಯಸ್ಸನ್ನು ಈಗ 6+ ಗೆ ನಿಗದಿ ಪಡಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವಾಲಯ ಪತ್ರದಲ್ಲಿ ತಿಳಿಸಿದೆ. ಏನಿದು ಆದೇಶ? ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಬರೆದ ಪತ್ರದಲ್ಲಿ, ಶಿಕ್ಷಣ ಸಚಿವಾಲಯದ (ಎಂಒಇ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2020 ರಲ್ಲಿ ಎನ್‌ಇಪಿ ಪ್ರಾರಂಭವಾದಾಗಿನಿಂದ…

Read More