ಧರ್ಮಸ್ಥಳದಲ್ಲಿ ಭಕ್ತರ ಕಾರು ಒಡೆದು ಕಳ್ಳತನ!
– ಭೀಕರ ಅಪಘಾತ: ಓರ್ವ ಮಹಿಳೆ ಗಾಯ
– ಆತ್ಮಹತ್ಯೆ ಯತ್ನ: ಪುತ್ತೂರಿನ ಯುವಕ ಸಾವು
– 3 ವರ್ಷದ ಮಗು ಬಾವಿಗೆ ಬಿದ್ದು ಸಾವು
– ಮಂಗಳೂರು: ಮ್ಯಾಟ್ರಿಮನಿಯಲ್ಲಿ ವಂಚಿಸಿ ವಿಚ್ಛೇದಿತೆಗೆ 64 ಲಕ್ಷ ದೋಖಾ!
NAMMUR EXPRESS NEWS
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದ ಗದಗ ಮೂಲದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು ಮಾಡಿರುವ ಘಟನೆ ಆ.26ರಂದು ಧರ್ಮಸ್ಥಳದಲ್ಲಿ ನಡೆದಿದೆ.
ಗದಗ ಮಾಗಡಿ ಗ್ರಾಮದ ನಿವಾಸಿ ಬಸವರಾಜ ಗುಡಸಲಮನಿ (38) ಎಂಬವರು ಶನಿವಾರ ಬೆಳಗ್ಗೆ ಧರ್ಮಸ್ಥಳಕ್ಕೆ ತಮ್ಮ ಕಾರಿನಲ್ಲಿ ಬಂದಿದ್ದರು. ಕಾರನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಸಮೀಪ ಕಾರು ನಿಲ್ಲಿಸಿ ಲಾಕ್ ಮಾಡಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.
ಭೀಕರ ಅಪಘಾತ: ಓರ್ವ ಮಹಿಳೆ ಗಾಯ
ರಿಕ್ಷಾ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಳ ತಾಲೂಕಿನ ಕೋಟೆಕಣಿ ಎಂಬಲ್ಲಿ ನಡೆದಿದೆ ಸಾಲೆತ್ತೂರಿನಿಂದ ಮೂವರು ಪ್ರಯಾಣಿಕರು ಕೋಟೆಕಣಿ ಸಂಬoಧಿಕರ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಕೋಟೆಕಣಿ ಒಳರಸ್ತೆಯಿಂದ ಮುಖ್ಯರಸ್ತೆಗೆ ಬರುವ ವೇಳೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಪೋಲೀಸರು ಭೇಟಿ ನೀಡಿದ್ದಾರೆ.
ಆತ್ಮಹತ್ಯೆ ಯತ್ನ: ಪುತ್ತೂರಿನ ಯುವಕ ಸಾವು
ಆತ್ಮಹತ್ಯೆಗೆ ಯತ್ನಿಸಿದ ಪುತ್ತೂರಿನ ಕಟ್ಟತ್ತಾರಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಯುವಕನನ್ನು ಕಟ್ಟತ್ತಾರು ನಿವಾಸಿ ನಾಸಿರ್ ಎಂದು ಗುರುತಿಸಲಾಗಿದೆ.
ತಾನು ಡ್ರೈವರ್ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರು ತನ್ನನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ವೀಡಿಯೋ ಮೂಲಕ ಹೇಳಿದ್ದು ತದನಂತರ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮ್ಯಾಟ್ರಿಮನಿಯಲ್ಲಿ ವಂಚಿಸಿ ವಿಚ್ಛೇದಿತೆಗೆ 64 ಲಕ್ಷ ದೋಖಾ!
ವಿವಾಹವಾಗುವುದಾಗಿ ನಂಬಿಸಿ ವಿಚ್ಛೇದಿತೆಯಿಂದ ವ್ಯವಹಾರದ ನೆಪದಲ್ಲಿ 64 ಲಕ್ಷ ರೂ. ಪಡೆದು ಹಿಂದಿರುಗಿಸದೆ ವಂಚನೆಗೈದಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೈದ ವ್ಯಕ್ತಿಯ ಮೇಲೆ ಮಹಿಳೆ ದೂರು ನೀಡಿದ್ದಾರೆ. ಆಕೆ ನೀಡಿರುವ ದೂರಿನಲ್ಲಿ ‘ತನಗೆ ಅಣ್ಣಂದಿರು ಮರು ಮದುವೆ ಮಾಡಲು ತಯಾರಿ ನಡೆಸುತ್ತಿದ್ದರು. ಆದ್ದರಿಂದ ತಾನು ತನ್ನ ಪ್ರೊಫೈಲ್ ಅನ್ನು ಮ್ಯಾಟ್ರಿಮೋನಿಯಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಿದ್ದೆ. ಈ ವೇಳೆ ತಮಿಳುನಾಡು ಪಳ್ಳಪಟ್ಟಿ ಮೂಲದ ಮುಹಮ್ಮದ್ ಫರೀದ್ ಶೇಖ್ ಎಂಬಾತ ಸಂಪರ್ಕಕ್ಕೆ ಬಂದು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆದ್ದರಿಂದ ತಾನು ತನ್ನ ಅಣ್ಣಂದಿರೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದೆ. ಅದೇ ರೀತಿ ಮುಹಮ್ಮದ್ ಫರೀದ್ ಶೇಖ್ ಎಂಬಾತನು ತನ್ನ ಸಹೋದರರು ಎಂಬುವುದಾಗಿ ಸಾದಿಕ್ ಮತ್ತು ಮುಬಾರಕ್ ಎಂಬವರನ್ನು ಪರಿಚಯಿಸಿಕೊಂಡು ಕಂಕನಾಡಿಯಲ್ಲಿರುವ ರೆಸ್ಟೋರೆಂಟ್ಗೆ ಬಂದಿದ್ದಾನೆ.
ಈ ವೇಳೆ ಆತ ಈ ಹಿಂದೆ ಮದುವೆಯಾಗಿರುವುದನ್ನು ಮುಚ್ಚಿಟ್ಟಿದ್ದಾನೆ. ಎರಡು ದಿನದ ಬಳಿಕ ಆತ ತನಗೆ ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಬಳಿಕ ನಾನಾ ಹಂತಗಳಲ್ಲಿ 64 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆಟವಾಡುತ್ತಿದ್ದ 3 ವರ್ಷದ ಮಗು ಬಾವಿಗೆ ಬಿದ್ದು ಸಾವು
ಆಟವಾಡುತ್ತಿದ್ದ ಮೂರು ವರ್ಷದ ಮಗು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಹರಿದೇವ ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸೂರಜ್ ಬಂಟ್ ಎಂಬವರ ಪುತ್ರಿ ಸ್ತುತಿ (3) ಸಾವನ್ನಪ್ಪಿದ ಮಗು ಆಟವಾಡುತ್ತಾ ಸಾರ್ವಜನಿಕ ಬಾವಿ ಹತ್ತಿರ ಹೋಗಿದ್ದು, ಈ ವೇಳೆ ಆಯಾ ತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.