ಮಳೆಗಾಗಿ ಪುಟ್ಟ ಮಕ್ಕಳಿಗೆ ಶಾಸ್ರೋಕ್ತವಾಗಿ ಮದುವೆ ಮಾಡಿದ ಗ್ರಾಮಸ್ಥರು
– ದೊಡ್ಡಬಳ್ಳಾಪುರದಲ್ಲಿ ನಡೆದ ವಿಭಿನ್ನ ಆಚರಣೆ
– ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮದುವೆ ಮಾಡಿ ಮಳೆರಾಯನಿಗೆ ಪ್ರಾರ್ಥನೆ
NAMMUR EXPRESS NEWS
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಹುಡುಗನಿಗೆ ಹುಡುಗಿ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ. ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ ಶಾಸ್ರೋಕ್ತವಾಗಿ ಗ್ರಾಮಸ್ಥರೆ ಮುಂದೆ ನಿಂತು ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ ಎಂಬುವುದು ಈ ಗ್ರಾಮದ ಜನರ ನಂಬಿಕೆ. ಹೀಗಾಗಿ ಗ್ರಾಮಸ್ಥರೆಲ್ಲಾ ಸೇರಿ ಮದುವೆ ಮಾಡಿಸಿದ್ದಾರೆ. ವರ್ಷಧಾರೆ ಕರುಣೆ ತೋರಿಸಿದೆ ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದೆ.
ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ದೇವನಹಳ್ಳಿಯ ಈ ಗ್ರಾಮದ ರೈತರು ಮಳೆಗಾಗಿ ಮಳೆರಾಯನಿಗೆ ಮೊರೆ ಇಟ್ಟಿದ್ದು ವಿಭಿನ್ನ ಆಚರಣೆಯನ್ನು ಮಾಡಿದ್ದಾರೆ. ನಮ್ಮಲ್ಲಿ ಮಳೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆಗಳನ್ನು ಮಾಡುವುದು ಸಾಮಾನ್ಯ, ಇನ್ನೂ ಕೆಲ ಕಡೆ ವಿಭಿನ್ನ ಮಾದರಿಯ ಆಚರಣೆಗಳು ರೂಢಿಯಲ್ಲಿವೆ. ಆದ್ರೆ ದೊಡ್ಡಬಳ್ಳಾಪುರದ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.