– ಹೊನ್ನಾವರ: ಮೀನುಗಾರಿಕೆ ವೇಳೆ ದೋಣಿ ದುರಂತ – ಯುವಕನೋರ್ವ ಸಮುದ್ರಪಾಲು
– ಕುಂದಾಪುರ: ಬದುಕಿ ಬಾಳಬೇಕಾದ ವಿದ್ಯಾರ್ಥಿನಿ ನೇಣಿಗೆ ಶರಣು
– ಬಂಟ್ವಾಳ: ಮಟ್ಕಾ ಅಡ್ಡಕ್ಕೆ ಪೊಲೀಸ್ ದಾಳಿ: ಮೂವರ ಬಂಧನ
– ಮಂಗಳೂರು: ಫುಟ್ಬೋರ್ಡ್ ಪ್ರಯಾಣದ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್
– ಬೆಳ್ತಂಗಡಿ : ಖ್ಯಾತ ಕಬಡ್ಡಿ ಆಟಗಾರ ನೇಣು ಶರಣು..!
– ಬೆಳ್ತಂಗಡಿ :ಕಬಡ್ಡಿ ಆಟಗಾರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್
ಹೊನ್ನಾವರ : ಮೀನುಗಾರಿಕೆ ವೇಳೆ ದೋಣಿ ಮುಳುಗಿ ಯುವಕನೋರ್ವ ಸಮುದ್ರಪಾಲದ ಘಟನೆ ಹೊನ್ನಾವರ ತಾಲೂಕಿನ ಕಾಸರಗೋಡಿನ ಶರಾವತಿ ನದಿ ಸೇರುವ ಸಂಗಮ ಪ್ರದೇಶದಲ್ಲಿ ನಡೆದಿದೆ. ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರ ಪ್ರಜ್ವಲ್ ಮಾಬ್ಲ ಖಾರ್ವಿ(19) ಎಂದು ತಿಳಿದು ಬಂದಿದೆ. ಕಾಸರಕೋಡನ ಇಬ್ಬರು ಮೀನುಗಾರರು ದೋಣಿ ಮೂಲಕ ಮೀನುಗಾರಿಕೆ ತೆರಳಿದಾಗ ಆಕಸ್ಮಿಕವಾಗಿ ದೋಣಿ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಪೈಕಿ ಪ್ರಜ್ವಲ್ ಮಾಬ್ಲ ಖಾರ್ವಿ ನಾಪತ್ತೆಯಾಗಿದ್ದು ಇನೊರ್ವ ಮೀನುಗಾರರಾದ ರಾಜು ಶೇಷಗಿರಿ ತಾಂಡೇಲ್ ಅಪಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾದ ಯುವಕನ ಪತ್ತೆಗಾಗಿ ಅಗ್ನಿಶಾಮಕ ಪೊಲೀಸ್ ಸಿಬ್ಬಂದಿಗಳು ಮತ್ತು ಮೀನುಗಾರರು ಶೋಧ ಕಾರ್ಯ ಮುಂದುವರೆಸಿದ್ದಾರೆ
ಕುಂದಾಪುರ: ಬದುಕಿ ಬಾಳಬೇಕಾದ ವಿದ್ಯಾರ್ಥಿನಿ ನೇಣಿಗೆ ಶರಣು
ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ಕುಂದಾಪುರದ ಪಡುಕೋಣೆ ಎಂಬಲ್ಲಿ ನಡೆದಿದೆ. ಪಡುಕೋಣೆ ನಿವಾಸಿ ಪ್ರಶಾಂತ್, ಸುನಂದಾ ದಂಪತಿ ಪುತ್ರಿ ಸಿಂಧು (16) ಆತ್ಮಹತ್ಯೆಗೆ ಶರಣಾದವರು. ಈ ವರ್ಷದಿಂದ ಸಿಂಧು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿದ್ದು, ಸಮೀಪದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಅನಾರೋಗ್ಯವೆಂದು ತನ್ನ ಮನೆಗೆ ಹೋಗಿದ್ದ ಸಿಂಧುವನ್ನು ಬುಧವಾರ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗುರುವಾರ ಶಾಲೆಗೆ ಬರಬೇಕಿದ್ದರಿಂದ ತಂದೆ ಕುಂದಾಪುರಕ್ಕೆ ಬಿಡುವುದಾಗಿ ಹೇಳಿದ್ದು ಆದರೆ ಆಕೆ ತಾನು ಬಸ್ಸಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಮನೆಯವರು ಗಮನಿಸಿದಾಗ ನೇಣು ನೇಣು ಬಿಗಿದ ಸ್ಥಿತಿಯಲ್ಲಿ ಸಿಂಧು ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಪೊಲೀಸರು ಮೃತದೇಹ
ಮಟ್ಕಾ ಅಡ್ಡೆಗೆ ದಾಳಿ: ಮೂವರ ಬಂಧನ
ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಸೆನ್ ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದವರು ಪರಾರಿಯಾಗಿದ್ದಾರೆ ಮಂಜೇಶ್ವರ ಹೊಸಂಗಡಿ ನಿವಾಸಿ ಶ್ರೀಧರ ಎಂ.ಎಸ್., ಅಮ್ಮುಂಜೆಯ ಥಾಮಸ್ ಹಾಗೂ ನೀರುಮಾರ್ಗದ ಜಾಕೀರ್ ಹುಸೈನ್ ಬಂಧಿತರು. ದಾಳಿಯ ವೇಳೆ ಆರೋಪಿಗಳ ಜತೆಗೆ ದಂಧೆಗೆ ಬಳಸಲಾದ ಪುಸ್ತಕಗಳು, 250 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಪಡೆದ ಸೆನ್ ಪೊಲೀಸ್ ಠಾಣೆಯ ಪಿಎಸ್ಐ ನೇತೃತ್ವದ ತಂಡ ದಾಳಿ ನಡೆಸಿದೆ.
ಫುಟ್ಬೋರ್ಡ್ ಪ್ರಯಾಣದ ವಿರುದ್ಧ ಮಂಗಳೂರಿನಲ್ಲಿ ಪೊಲೀಸರ ಅಭಿಯಾನ; 123 ಕೇಸ್ !
ಮಂಗಳೂರು: ಬಸ್ ಕಂಡಕ್ಟರ್ ಒಬ್ಬರು ಏಕಾಏಕಿ ಬಸ್ ನಿಂದ ಹೊರ ಬಿದ್ದು ಸಾವನ್ನಪ್ಪಿದ್ದ ಬೆನ್ನಲ್ಲೇ ಗುರುವಾರ ಪೊಲೀಸರು ಬಸ್ಗಳ ವಿರುದ್ಧ ವಿಶೇಷ ಅಭಿಯಾನ ನಡೆಸಿ ಫುಟ್ಬೋರ್ಡ್ ಪ್ರಯಾಣದ 123 ಪ್ರಕರಣಗಳನ್ನು ದಾಖಲಿಸಿದ್ದಾರೆ. ಮತ್ತೊಂದು ಸುತ್ತಿನ ಸಭೆಯಲ್ಲಿ ಬಸ್ ನಿರ್ವಾಹಕರು ಬಾಗಿಲು ಇಲ್ಲದ ಫುಟ್ಬೋರ್ಡ್ನಲ್ಲಿ ನಿಂತಿರುವುದು ಕಂಡುಬಂದರೆ ಬಸ್ ಚಲಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೆ ಬಾಗಿಲು ಹೊಂದಿರುವ ಬಸ್ಗಳು ಇನ್ನೂ ಕಟ್ಟುನಿಟ್ಟಾಗಿ ಬಾಗಿಲುಗಳನ್ನು ಅಳವಡಿಸಿಕೊಳ್ಳಬೇಕು. ಬಾಗಿಲು ಹೊಂದಿರದ ಹಳೆಯ ಸಿಟಿ ಬಸ್ಗಳು ಫುಟ್ಬೋರ್ಡ್ ಖಾಲಿಯಾಗುವ ವರೆಗೆ ಬಸ್ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ನಂತೂರು ಸರ್ಕಲ್ ಬಳಿ ಬುಧವಾರ ಬಸ್ ನ ಫುಟ್ ಬೋರ್ಡ್ ನಲ್ಲಿದ್ದ ಈರಯ್ಯ(ಗುರು) ಎನ್ನುವ 23 ವರ್ಷದ ಕಂಡಕ್ಟರ್ ಆಯತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು.
ಖ್ಯಾತ ಕಬಡ್ಡಿ ಆಟಗಾರ ನೇಣು ಶರಣು..!
ಬೆಳ್ತಂಗಡಿ : ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ಖ್ಯಾತ ಕಬಡ್ಡಿ ಆಟಗಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಬಡ್ಡಿ ಆಟಗಾರ ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ಎಂದು ತಿಳಿದು ಬಂದಿದೆ. ಸ್ವರಾಜ್ ಪ್ರಮುಕ್ತ ಧರ್ಮಸ್ಥಳದಲ್ಲಿ ವಾಸವಗಿದ್ದು ಇಂದು ಪಯಣಿಗಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ವರಾಜ್ ಕಬಡ್ಡಿಯಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದರು, ಸ್ಥಳೀಯ ಕೂಟಗಳಲ್ಲಿ ಸಾಕಷ್ಟು ಆಕರ್ಷಣೆ ಹೊಂದಿದ್ದರು. ಉಜಿರೆಯ ಸಾನಿಧ್ಯ ಖಾಸಗಿ ಕಂಪೆನಿಯಲ್ಲಿ ಸ್ವರಾಜ್ ಉದ್ಯೋಗಿಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಧರ್ಮಸ್ಥಳ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಕಬಡ್ಡಿ ಆಟಗಾರ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್
– ಸ್ವರಾಜ್ ಆತ್ಮಹತ್ಯೆ ಹಿಂದೆಯಿದ್ದಿಯ ಲೋನ್ ಆಪ್ ಕಿರುಕುಳ
ಮಂಗಳೂರು: ಜಿಲ್ಲಾ ಮಟ್ಟದ ಕಬ್ಬಡ್ಡಿ ಆಟಗಾರ ಸ್ವರಾಜ್ – ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಲೋನ್ ಆಪ್ ಕಿರುಕುಳ ತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಮಾಡಿಕೊಂಡ ಪುದುವೆಟ್ಟು ನಿವಾಸಿ ಸ್ವರಾಜ್ (24) ಲೋನ್ ಆಪ್ ಮೂಲಕ ಸಾಲ ಪಡೆದಿದ್ದರು. ಆ.30 ಆಪ್ ಲೋನ್ ಸಾಲಕ್ಕೆ ಸಂಬಂಧಿಸಿ 30 ಸಾವಿರ ಹಣ ಕಟ್ಟಿದ್ದರು. ಬಳಿಕ ಆ.31ರಂದು ಆಪ್ ನ ಕ್ರಿಮಿನಲ್ ಗಳು ಮತ್ತೊಮ್ಮೆ ಹಣ ನೀಡುವಂತೆ ಡೆಡ್ ಲೈನ್ ನೀಡಿದ್ದರು. ಇದರಿಂದ ಸ್ವರಾಜ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಈ ವಾಟ್ಸಪ್ ಡಿಪಿಪಿಯಲ್ಲಿ ಸ್ವರಾಜ್ ತನ್ನ ಅಕ್ಕನ ಮಗಳ ಫೋಟೋವನ್ನು ಹಾಕುವುದನ್ನೇ ದುರ್ಬಳಕೆ ಮಾಡಿಕೊಂಡ ಆಪ್ ಕ್ರಿಮಿನಲ್ಗಳು ಹಣ ನೀಡುವಂತೆ ಒತ್ತಡ ಹೇರಲು ಆಫೋಟೋವನ್ನೇ ಬಳಸಲಾಗಿದೆ. ಫೋಟೋವನ್ನು ಬೇಬಿ ಫಾರ್ ಸೇಲ್’ ಎಂದು ಎಡಿಟ್ ಮಾಡಿ ಸ್ವರಾಜ್ ಸ್ನೇಹಿತರು, ಕಾಂಟ್ಯಾಕ್ಟ್ ಲಿಸ್ಟ್ ಇರುವವರಿಗೆ ಪಾರ್ವರ್ಡ್ ಮಾಡಿದ್ದಾರೆ. ಎಂದು ತಿಳಿದು ಬಂದಿದೆ. ಇದನ್ನುತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ