– ಮಂಗಳೂರು : ಯುವವೈದ್ಯ ಸಮುದ್ರಪಾಲು
– ಬೆಳ್ತಂಗಡಿ : ಕಾರು-ಬೈಕ್ ನಡುವೆ ಅಪಘಾತ ಸವಾರನ ಮೃತ್ಯು
– ಮಂಗಳೂರು : ಯುವಕನಿಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು..!!
– ಉಡುಪಿ: ಶ್ರೀಕೃಷ್ಣ ಮಠಕ್ಕೆ ನಟ ರಿಷಬ್ ಶೆಟ್ಟಿ ಬೇಟಿ
– ಮಂಗಳೂರು: ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಯುವತಿ ಅರೆಸ್ಟ್.
ಮಂಗಳೂರು: ಉಳ್ಳಾಲ ಸೋಮೇಶ್ವರದ ರುದ್ರಪಾದೆಗೆ ಸಮುದ್ರ ವಿಹಾರಕ್ಕೆ ಬಂದ ವೈದ್ಯ ಸಮುದ್ರಪಾಲು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತರಬೇತಿ ನಡೆಸುತ್ತಿರುವ ಡಾ. ಆಶೀಕ್ ಗೌಡ (30) ತನ್ನ ಐವರು ಸ್ನೇಹಿತರರೊಂದಿಗೆ ಭಾನುವಾರ ರಾತ್ರಿ ಉಳ್ಳಾಲ ಸೋಮೇಶ್ವರ ರುದ್ರಪಾದಕ್ಕೆ ಸಮುದ್ರವಿಹಾರ ಮಾಡಲು ಬಂದಿದ್ದರು.
ಈ ಸಮಯದಲ್ಲಿ ಜೊತೆಗಿದ್ದ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಬಿದ್ದಿದರು ಇವರ ರಕ್ಷಣೆಗೆ ಪ್ರಯತ್ನಿಸಿದ್ದ ಡಾ.ಆಶೀಶ್ ಗೌಡ ಕಾಲುಜಾರಿ ಸಮುದ್ರಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಆದರೆ ಕಲ್ಲುಗಳ ಆಸರೆ ಪಡೆದಿದ್ದ ಡಾ. ಪ್ರದೀಪ ಮೇಲೆ ಬಂದಿದ್ದಾರೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು-ಬೈಕ್ ನಡುವೆ ಅಪಘಾತ ಸವಾರನ ಮೃತ್ಯು
ಬೆಳ್ತಂಗಡಿ : ಇನೋವಾ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಸಿದೆ. ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ಕಾಪಿನಡ್ಕದಲ್ಲಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಈದು ಗ್ರಾಮದ ಸುಧೀರ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಹಾಗೂ ಅಳದಂಗಡಿ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದರು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಯುವಕನಿಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು..!!
ಮಂಗಳೂರು: ಆಟವಾಡಿ ಮನೆಗೆ ಹಿಂತಿರುಗುತ್ತಿದ್ದ ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ಭಾನುವಾರ ಸಂಜೆ ವರದಿಯಾಗಿದೆ. ಬಜ್ಜೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಾನ್(23) ಗಾಯಗೊಂಡಿದ್ದು, . ಇರಿತದ ಪರಿಣಾಮ ಅಬ್ದುಲ್ ಸಫ್ಘಾನ್ ಕೈಗೆ, ಕುತ್ತಿಗೆಗೆ ಗಾಯಗಳಾಗಿವೆ. ಗಾಯಾಳುವನ್ನು ಬಜ್ಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಬಳಿ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಬ್ದುಲ್ ಸಫ್ಘಾನ್ ಗೆ ಚೂರಿ ಇರಿದ ಅಪರಾಧಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವಾರಿನ ಪ್ರಶಾಂತ್ @ ಪಚ್ಚು (28), ಧನರಾಜ್ (23), ಯಾಜ್ಞೆಶ್ (22) ಎಂದು ಗುರುತಿಸಲಾಗಿದೆ. ಅಬ್ದುಲ್ ಸಫ್ಘಾನ್ (23) ಚೂರಿ ಇರಿತಕ್ಕೊಳಗಾದವರು. ಆರೋಪಿಗಳೆಲ್ಲರೂ ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ಈ ಹಲ್ಲೆಯನ್ನು ನಡೆಸಿದ್ದಾರೆ ಎನ್ನಲಾಗಿದ್ದು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಕೃಷ್ಣ ಮಠಕ್ಕೆ ನಟ ರಿಷಬ್ ಶೆಟ್ಟಿ ಬೇಟಿ
ಉಡುಪಿ: ಶ್ರೀಕೃಷ್ಣಮಠಕ್ಕೆ ಕಾಂತಾರ ಖ್ಯಾತಿಯ ಚಿತ್ರನಟರಾದ ರಿಷಬ್ ಶೆಟ್ಟಿ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಯುವತಿ ಅರೆಸ್ಟ್.
ಮಂಗಳೂರು: ಡ್ರಗ್ಸ್ ಜಾಲದ ಕಿಂಗ್ ಪಿನ್ ನೈಜೀರಿಯಾ ಮೂಲದ ಮಹಿಳೆಯನ್ನು ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ . ಬಂಧಿತ ಮಹಿಳೆಯನ್ನು ನೈಜಿರಿಯಾ ಮೂಲದ ಅಡೆವೊಲೆ ಅಡೆಟುಡು ಆನು(33) ಎಂದು ಗುರುತಿಸಲಾಗಿದೆ. ಈಕೆಯನ್ನು ಬೆಂಗಳೂರಿನ ಯಲಹಂಕದ ಚೊಕ್ಕನ ಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ. ಇವಳೇ ಡ್ರಗ್ಸ್ ಜಾಲಕ್ಕೆ ಇವಳೇ ಕಿಂಗ್ ಪಿನ್ ಎಂದು ಎಲ್ಲ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಮಹಿಳೆಯ ಬೆಂಗಳೂರಿನ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಲಾಗಿತ್ತು. ದಾಳಿ ವೇಳೆ 400 ಗ್ರಾಂ ತೂಕದ 20 ಲಕ್ಷ ರೂಪಾಯಿ ಮೌಲ್ಯದ MDMA ಮತ್ತು ನಗದು, ಐಫೋನ್ ಮೊಬೈಲ್ ಸೇರಿದಂತೆ ಒಟ್ಟು 20 ಲಕ್ಷ ಮೌಲ್ಯದ 52 ಸಾವಿರ ಮೌಲ್ಯದ ಸೊತ್ತುಗಳ ವಶಕ್ಕೆ ಪಡೆಯಲಾಗಿದೆ.
ಈ ಬಂಧಿತ ಮಹಿಳೆ ನೈಜೀರಿಯಾ ದೇಶದಿಂದ ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದಿದ್ದರು. ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ. ಬಳಿಕ ಈ 7 ದಂಧೆಗೆ ಇಳಿದಿದ್ದಾರೆ. ಇನ್ನು ಆರೋಪಿಯ ವಿರುದ್ಧ ಈಗಾಗಲೇ ಮಂಗಳೂರಿನಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದೆ. ಇನ್ನು ಇದುವರೆಗೂ ಪೊಲೀಸರು ಬಂಧಿಸಿದ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಕೂಡ ಈಕೆಯಿಂದಲೇ ಮಾದಕ ವಸ್ತು ಖರೀದಿ ಮಾಡಿದ್ದರಂತೆ. ಸದ್ಯ ಆರೋಪಿ ಮಹಿಳೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.