ಅಕ್ಷರ, ಬದುಕು ಕಲಿಸಿದ ಗುರುಗಳಿಗೆ ನಮಸ್ಕಾರ!
– ಶಿಕ್ಷಕರ ದಿನದಂದು ಎಲ್ಲೆಡೆ ಗುರುಗಳಿಗೆ ನಮನ
– ಏನಿದು ವಿಶೇಷ… ಜಗತ್ತಿನ ಶಕ್ತಿ ಗುರುಗಳೇ ಹೇಗೆ?
NAMMUR EXPRESS NEWS :
ಗುರುರ್ಬ್ರಹ್ಮ ಗುರುರ್ವಿಷ್ಣು
ಗುರುರ್ದೇವೋ ಮಹೇಶ್ವರಃ
ಗುರು: ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
ಗುರುವಿನಲ್ಲಿ ದೇವರನ್ನು ಕಾಣುತ್ತೇವೆ ಎಂಬುದಕ್ಕೆ ನಿದರ್ಶನವೆ ಈ ಶ್ಲೋಕ.
ದೇಶದ ಸಮೃದ್ಧಿಗೆ ಹಾಗೂ ಭದ್ರತೆಗೆ ತನ್ನದೆ ಆದ ಕೊಡುಗೆಯನ್ನೂ ಕೊಡುವ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು.
“ಮುಂದೆ ಗುರಿ ಇರಬೇಕು ಹಿಂದೆ ಗುರು ಇರ್ಬೇಕು”ಏಷ್ಟು ಅರ್ಥ ಪೂರ್ಣಾವಾದ ಮಾತು ಅಲ್ವಾ?. ಏನೇ ಒಂದು ಸಾಧನೆ ಮಾಡ್ಬೇಕು ಆಂದರೆ ಗುರಿಯ ಜೊತೆ ಗುರುವಿನ ಪಾಲು ಬಹು ದೊಡ್ಡದು. ಸೆ.5ಗುರುಗಳನ್ನು ನೆನೆಯುವ ದಿನ. ದೇಶದಲ್ಲಿ ಎಲ್ಲೆಡೆ ಗುರುಗಳನ್ನು ನೆನೆಯುವ ಕೆಲಸ ನಡೆಯುತ್ತಿದೆ. ಆದರೆ ಈ ಗುರು ನಮನ ಒಂದು ದಿನಕ್ಕೆ ಸೀಮಿತವಾಗಬಾರದು.
ಸೆ.5 ಏಕೆ ಶಿಕ್ಷಕರ ದಿನ ಆಚರಣೆ ಮಾಡ್ತಾರೆ?
ಶಿಕ್ಷಕರ ದಿನವನ್ನು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ. ಇವರು ಸೆಪ್ಟೆಂಬರ್ 5, 1888 ರಂದು ತಿರುತ್ತಾನಿ ಪಟ್ಟಣದಲ್ಲಿ ಜನಿಸಿದರು. ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ ಮತ್ತು ರಾಜ್ಯಪಾಲರೂ ಆಗಿದ್ದ ಇವರ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನ ಆಚರಿಸಲಾಗುತ್ತದೆ.
ಒಬ್ಬ ಗುರುವಿನ ಪ್ರೇರಣೆಯೇ ಸಾಧನೆಗೆ ದಾರಿ
ಒಬ್ಬ ಗುರುವಿನಿಂದ ಎಂತಹ ವ್ಯಕ್ತಿಯನ್ನು ಸೃಷ್ಟಿ ಮಾಡುವ ಶಕ್ತಿಯು ಉಂಟು. ದೇಶ ಪ್ರೇಮದ ಸೆಳೆತದ ಗಡಿಯಲ್ಲಿ ಎದುರಾಳಿಗಳನ್ನು ಸದೆ ಬಡಿಯುವ ಸೈನಿಕರನ್ನು ಸೃಷ್ಟಿಸುವ , ದೇಶಕ್ಕೆ ಕೊಡುವ ಎಲ್ಲಾ ರಂಗದ ಶ್ರೇಷ್ಠರನ್ನು ನಮ್ಮ ಗುರುಗಳು ತಯಾರು ಮಾಡಿದ್ದಾರೆ. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಆಧುನಿಕ ಯುಗದ ಶಿಕ್ಷಣದವರೆಗೂ ಗುರುಗಳು ತಮ್ಮ ಜೀವನವನ್ನೂ ವಿದ್ಯಾರ್ಥಿ ಜೀವನ ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಜೊತೆಗೆ ಬದುಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಮತ್ತು ಜವಾಬ್ದಾರಿ ಬಗ್ಗೆ ನಮಗೆ ಕಲಿಸುತ್ತಾರೆ. ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿರಲಿ ಎಂದು ಹಾರೈಸುವ ಅವರ ಪ್ರಯತ್ನಗಳನ್ನು ಗುರುತಿ ಸಿ ಅವರಿಗೆ ಗೌರವವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಇತ್ತೀಚಿಗೆ ಗುರುಗಳ ಬಗ್ಗೆ ಶಿಷ್ಯರಿಗೆ ಗೌರವ ಇಲ್ಲದಿರುವುದು ಎಲ್ಲಾ ಕಡೆ ಕಾಣುತಿದೆ. ಇದು ಸಂಸ್ಕೃತಿ, ಜೀವನದ ಅಧಪತನ ಎಂದ್ರೆ ತಪ್ಪಾಗಲಾರದು. ಒಬ್ಬ ಗುರುವಿಗೆ ಗೌರವ ಕೊಡದವರು ಏನನ್ನೂ ಸಾಧಿಸಲಾರ.
ಏನೇ ಇರಲಿ, ಅಕ್ಷರ ಬದುಕು ಕಲಿಸಿದ ಎಲ್ಲಾ ಗುರುಗಳಿಗೂ ನಮನಗಳು. ಕಷ್ಟದಲ್ಲಿರುವ ಗುರುಗಳಿಗೆ ಶಿಷ್ಯರು ಸಹಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ.
ಗುರುಗಳಿಗೆ ನಮಸ್ಕಾರಗಳು
– ನಮ್ಮೂರ್ ಎಕ್ಸ್ ಪ್ರೆಸ್ ಕರ್ನಾಟಕ