ಬಂಟ್ವಾಳ: ಶಾಲೆಯ ಗೋಡೆ ಮೇಲೆ ಅಶ್ಲೀಲ ಬರಹ
– ಕಾಡಬೆಟ್ಟು : ರಿಕ್ಷಾ ಮತ್ತು ಕಾರಿನ ನಡುವೆ ಪರಸ್ಪರ ಡಿಕ್ಕಿ
– ಉಡುಪಿ: ರಾಷ್ಟ್ರಮಟ್ಟದ ಕ್ರೀಡಾಪಟು ಆತ್ಮಹತ್ಯೆ
– ಮಂಗಳೂರು: ಗಾಂಜಾ ಸಿಗದೆ ಜಿಗುಪ್ಸೆಯಿಂದ ಸಾವು
– ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ರೆ ಡಿಎಲ್ ರದ್ದು!
NAMMUR EXPRESS NEWS
ಬಂಟ್ವಾಳ : ಶಾಲೆ ಗೋಡೆಯ ಮೇಲೆ ಅಶ್ಲೀಲ ಬರಹಗಳನ್ನು ಬರೆದಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳು ಶಾಲೆಯ ಎಲ್ಲ ತರಗತಿ ಕೊಠಡಿಯ ಬಾಗಿಲ ಬಳಿ ಮೊಟ್ಟೆ ಒಡೆದಿದ್ದಾರೆ. ಅಲ್ಲದೇ ಒಂದು ಕೊಠಡಿಯ ಕಿಟಕಿಯ ಗಾಜನ್ನು ಒಡೆದಿರುವುದಲ್ಲದೇ, ಮಕ್ಕಳ ಸೃಜನಾತ್ಮಕತೆಗೆ ಒದಗಿಸಿದ ಸೂಚನಾ ಫಲಕದ ಗಾಜು, ಜೊತೆಗೆ ಶಾಲೆಯ ಟ್ಯೂಬ್ ಲೈಟ್ಗಳನ್ನು ಒಡೆದು ಹಾಕಿದ್ದಾರೆ. ಪ್ರಾಥಮಿಕ ಶಾಲೆಯ ಗೇಟ್ ಮತ್ತು ಅಡುಗೆ ಕೋಣೆಯ ಬಾಗಿಲಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ವಿದ್ಯಾರ್ಥಿಗಳು ಬಿಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಹರಿದು ಹಾಕಿದ್ದಾರೆ. ಅಲ್ಲದೆ ಶಾಲೆ ಗೋಡೆ ಮೇಲೆ ಅಶ್ಲೀಲ ಬರಹಗಳನ್ನು ಬರೆದಿದ್ದಾರೆ.
ರಿಕ್ಷಾ ಮತ್ತು ಕಾರಿನ ನಡುವೆ ಪರಸ್ಪರ ಡಿಕ್ಕಿ
ಕಾಡಬೆಟ್ಟು ರಿಕ್ಷಾದಲ್ಲಿದ್ದ ಬಾಲಕಿ ಸಹಿತ ನಾಲ್ವರು ಗಾಯಗೊಂಡ ಘಟನೆ ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ಎಂಬಲ್ಲಿ ನಡೆದಿದೆ. ಶ್ರೀನಿತ ಪದ್ಮಲತಾ, ಅಪ್ಪಿಪೂಜಾರಿ ಮತ್ತು ಚಾಲಕ ಸಂಜೀವ ಪೂಜಾರಿ ಗಾಯಗೊಂಡಿದ್ದಾರೆ. ಕಾರು ಚಾಲಕ ಮಹಮ್ಮದ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮಂಗಳೂರಿನಿಂದ ಬೆಳ್ತಂಗಡಿ ಮಾರ್ಗವಾಗಿ ಬೆಂಗಳೂರುಕಡೆಗೆ ಹೋಗುತ್ತಿದ್ದ ಕಾರಿಗೆ ಕಾಡಬೆಟ್ಟು ಕ್ರಾಸ್ ನಲ್ಲಿ ಏಕಾಏಕಿ ರಿಕ್ಷಾ ಹೆದ್ದಾರಿಗೆ ನುಗ್ಗಿಸಿದ ಪರಿಣಾಮ ವಾಗಿ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದುಕಾರು ಚಾಲಕ ಮಹಮ್ಮದ್ ರಿಕ್ಷಾ ಚಾಲಕನ ಮೇಲೆ ದೂರು ನೀಡಿದ್ದಾರೆ. ಮೆಲ್ಕಾ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಷ್ಟ್ರಮಟ್ಟದ ಕ್ರೀಡಾಪಟು ಆತ್ಮಹತ್ಯೆಗೆ ಶರಣು.
ಉಡುಪಿ: ಮಲ್ಪೆ ಸಮೀಪದ ಶಾಂತಿನಗರದ ರಾಷ್ಟ್ರಮಟ್ಟದ ಬಾಕ್ಸಿಂಗ್ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿರಾಜ್ ಎಂದು ಗುರುತಿಸಲಾಗಿದೆ. ಅವರು ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಇವರು ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು,
ಮಲ್ಪೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಗಾಂಜಾ ಸಿಗದೆ ಜಿಗುಪ್ಸೆಯಿಂದ ಯುವಕ ಸಾವು
ಮಂಗಳೂರು: ಪೈಝಲ್ ಎಂಬಾತ ಆತ್ಮಹತ್ಯೆಗೆ ಶರಣಾದ ಘಟನೆ ತಲಪಾಡಿಯ ನಾರ್ಲಾದಲ್ಲಿ ನಡೆದಿದೆ
ಈತ ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ. ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಪೈಝಲ್ ಸೇದಲು ಗಾಂಜಾ ಸಿಗದೆ ಜಿಗುಪ್ಪೆಗೊಂಡು ನೇಣು ಬಿಗಿದು ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದರೆ ಡಿಎಲ್ ರದ್ದು!
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಆ.21ರಿಂದ ಸೆ.3ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 207 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಡಿಎಲ್ ರದ್ದುಗೊಳಿಸುವಂತೆ ಸಾರಿಗೆ ಪ್ರಾಧಿಕಾರಕ್ಕೆ ಪೊಲೀಸರು ಮನವಿ ಸಲ್ಲಿಸಿದ್ದಾರೆ
ಈ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಮಾಹಿತಿ ನೀಡಿದ್ದಾರೆ.
ಅತೀವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ 59, ಮದ್ಯಸೇವಿಸಿವಾಹನ ಚಲಾಯಿಸಿದ 8, ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿರುವ 34, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ 4 ಟ್ರಿಪಲ್ ರೈಡಿಂಗ್ ನಡೆಸಿದ 4, ಹೆಲ್ಮಟ್ ಧರಿಸದೆ ಸವಾರಿ ಮಾಡಿದ 79, ಸೀಟ್ ಬೆಲ್ಟ್ ಹಾಕದಿರುವ 6, ಏಕಮುಖ ಸಂಚಾರ, ನೋ ಎಂಟ್ರಿ ನಿಯಮ ಉಲ್ಲಂಘಿಸಿದ 13 ಹೀಗೆ ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿರುವ ಪ್ರಕರಣಗಳು ಸೇರಿವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇನ್ನುಳಿದಂತೆ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವಿರುದ್ಧ 407, ಕರ್ಕಶ ಹಾರ್ನ್ ಬಳಕೆ ವಿರುದ್ಧ 45, ಟಿಂಟ್ ಗ್ಲಾಸ್ ಹಾಕಿರುವುದರ ವಿರುದ್ಧ 50 ಮತ್ತು ಬಸ್ಗಳ ಫುಟ್ಬೋರ್ಡ್ನಲ್ಲಿ ಸಂಚಾರ ಮಾಡಿದವರ ವಿರುದ್ಧ 174 ಪ್ರಕರಣಗಳನ್ನು ದಾಖಲಿಸಲಾಗಿದೆ ಕಮಿಷನರ್ ಅವರು ಮಾಹಿತಿ ನೀಡಿದ್ದಾರೆ.