ಪುತ್ತೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆ.!
– ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ದರೋಡೆ
– ಬೆಳ್ತಂಗಡಿ : ನೀರಿಲ್ಲದೆ ಕಂಗೆಟ್ಟಿದ್ದ ಕೃಷಿರಿಗೆ ಕೊಂಚ ನಿರಾಳ
– ಪುತ್ತೂರು: ಶಾಲೆ, ಸರಕಾರಿ ಕಚೇರಿಗಳೆ ಈತನ ಟಾರ್ಗೆಟ್
– ಸುಳ್ಯ: ಪಿಕಪ್ ವಾಹನ ಅಪಘಾತ
NAMMUR EXPRESS NEWS
ಪುತ್ತೂರು: ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಭಯಾನಕ ಘಟನೆ ಬಡಗನ್ನೂರಿನಲ್ಲಿ ನಡೆದಿದೆ.
ಬಡಗನ್ನೂರು ಕುಡ್ಯಾಡಿ ನಿವಾಸಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯರನ್ನು ಕಟ್ಟಿಹಾಕಿ ಚಿನ್ನಾಭರಣವನ್ನು ದೋಚಿದ್ದಾರೆನ್ನಲಾಗಿದೆ. ಗುರುಪ್ರಸಾದ್ ರೈ ಹಾಗೂ ಅವರ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಕಳ್ಳತನ ಮಾಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ನೀರಿಲ್ಲದೆ ಕಂಗೆಟ್ಟಿದ್ದ ಕೃಷಿರಿಗೆ ಕೊಂಚ ನಿರಾಳ
ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರು ಕೊಂಚ ನಿರಾಳರಾಗಿದ್ದಾರೆ ಮುಂದೆ ನಿರಂತರ ಮಳೆ ಸುರಿದರೆ ಮಾತ್ರ ಕೃಷಿಗೆ ಸಹಕಾರಿಯಾಗುವ ಜತೆಗೆ ಅಂತರ್ಜಲ ವೃದ್ಧಿಗೆ ನೆರವಾಗಲಿದೆ ಎನ್ನಲಾಗಿದೆ.
ಕೆಲವು ಕಡೆಗಳಲ್ಲಿ ಮಳೆಯನ್ನು ನಂಬಿ ಬಹುತೇಕ ಕೃಷಿಕರು ಈಬಾರಿ ರಬ್ಬರ್ ಕೃಷಿ ಕಡಿದು ಅಡಿಕೆ ಕೃಷಿ ಮಾಡಿದ್ದು ಆದರೆ ಬಿಸಿಲಿನ ಬೇಗೆಗೆ ಹೆಚ್ಚಿನ ಕಡೆ ಅಡಿಕೆ ಸಸಿ ಹಳದಿ ಬಣ್ಣಕ್ಕೆ ತಿರುಗಿದೆ. ಮಳೆ ಮಾಯವಾಗಿದೆ ಎಂದು ಕಂಗಾಲಾದ ಜನತೆಗೆ ವರುಣ ಮತ್ತೆ ಕೃಪೆ ತೋರಿದ್ದರಿಂದ ಕೃಷಿಕರು ಕೊಂಚ ನಿರಾಳವಾಗಿದ್ದಾರೆ. 3 ದಿನ ಎಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯು ಕರಾವಳಿಯಲ್ಲಿ ಮೂರು ದಿನಗಳ ಕಾಲ “ಎಲ್ಲೋ ಅಲರ್ಟ್’ ಘೋಷಿಸಿದೆ. ಸೆ.9ರ ವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶಾಲೆ, ಸರಕಾರಿ ಕಚೇರಿಗಳೆ ಈತನ ಟಾರ್ಗೆಟ್!
ಪುತ್ತೂರು: ಕುಂಬ್ರದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.ಒಳಮೊಗ್ರು ಗ್ರಾ.ಪಂ. ಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕಳ್ಳರು ಬಾಗಿಲು ಒಡೆದು ಒಳ ನುಗ್ಗಿದ್ದಾರೆ. ಗ್ರಾ.ಪಂ ಕಚೇರಿಯಲ್ಲಿದ್ದ 7 ಸಾವಿರ ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದಿದ್ದಾರೆ. ಗ್ರಾಮ ಕರಣಿಕ ಕಚೇರಿಯ ಪೀಠೋಪಕರಣಗಳಿಗೆ ಹಾನಿ ಎಸಗಿದ್ದಾರೆ. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ನುಗ್ಗಿರುವ ಕಳ್ಳರು ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಮೂರು ಆಲ್ಮೆರಾಗಳ ಬಾಗಿಲು ತೆರೆದಿದ್ದು 10 ಸಾವಿರ ನಗದು ಹಾಗೂ 15 ಸಾವಿರ ಮೌಲ್ಯದ 3 ಡಿಎಅರ್ಗಳನ್ನು ಕಳವು ಮಾಡಿದ್ದಾರೆ. ಕೆಪಿಎಸ್ ಪ್ರಾಥಮಿಕ ಶಾಲೆಯ ಏಳು ಅಲ್ಮೀರಾ, ಟೇಬಲ್ಗಳನ್ನು ಜಾಲಾಡಿದ್ದಾರೆ.ಶ್ವಾನದಳ ಹಾಗೂ ಬೆರಳಚ್ಚು ತಜ್ಞ ಸಚಿನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಸಂಪ್ಯ ಠಾಣೆ ಎಸ್ಐ ಧನಂಜಯ ಮತ್ತು ಸಿಬಂದಿ ಪರಿಶೀಲಿಸಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಕಪ್ ವಾಹನಗುದ್ದಿ ತಪ್ಪಿದ ಅನಾಹುತ
ಸುಳ್ಯ: ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಢಿಕ್ಕಿಯಾಗಿ ಕಂಬ ಮುರಿದು ಪಿಕಪ್ ಮೇಲೆ ಬಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜಾಲ್ಕೂರು ಗ್ರಾಮದ ಕದಿಕಡ್ಕದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಪುತ್ತೂರಿನಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್ ಕದಿಕಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಮುರಿದು ಪಿಕಪ್ ವಾಹನದ ಮೇಲೆ ಬಿದ್ದ ಪರಿಣಾಮವಾಗಿ ಕೆಲಕಾಲ ಘನ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಯಿತು. ವಿದ್ಯುತ್ ಕಂಬ ಮುರಿದು ಪಿಕಪ್ ಮೇಲೆ ಬಿದ್ದುದರಿಂದ ಪಿಕಪ್ನ ಮುಂಭಾಗ ಜಖಂಗೊಂಡಿದೆ.