- ಕುಟುಂಬದ 8 ಮಂದಿಗೆ ಕರೋನಾ ರೋಗ
- ಮಗನಿಗೆ ಗಂಭೀರ: ಆದರೂ ಜನರ ಟೀಕೆ
- ಡಿಸಿಎಂ ಗೋವಿಂದ ಕಾರಜೋಳ ನೋವಿನ ಪತ್ರ
ನ್ಯೂಸ್ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್
ಬೆಂಗಳೂರು: ಕುಟುಂಬದ 8 ಮಂದಿಗೆ ಕರೋನಾ…ಅದರ ನಡುವೆ ಮಗನ ಸ್ಥಿತಿ ಗಂಭೀರ…ಇತ್ತ ಮಳೆಯ ಆರ್ಭಟಕ್ಕೆ ಜನರ ಬದುಕು ಬೀದಿಪಾಲು…ಉಪ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಖಾತೆಯ ಸಚಿವ ಗೋವಿಂದ ಕಾರಜೋಳಗೆ ಛೀಮಾರಿ…ಟೀವಿಯಲ್ಲಿ ಲೈವ್ ಶೋ..!.
ಪಾಪ, ಪ್ರಕೃತಿ, ದೇವರ ಸೃಷ್ಟಿಗೆ ಇವರೇನ್ ಮಾಡ್ತಾರೆ..?. ಅಂತಹ ಮನಕಲಕುವ ಪತ್ರವನ್ನು ಸಚಿವರೊಬ್ಬರು ಬರೆದಿರುವುದು ಇದೀಗ ಇಡೀ ವ್ಯವಸ್ಥೆಯ ಹತಾಶಭಾವಕ್ಕೆ ನಿದರ್ಶನವಾಗಿದೆ. ಯಾರಾದಾರೂ..ಎಷ್ಟಿದ್ದರೂ..ಆರೋಗ್ಯ, ನೆಮ್ಮದಿ ಮುಖ್ಯ. ಪ್ರೀತಿಯೇ ಶಾಶ್ವತ ಇದು ಕಾರಜೋಳ ಫೇಸ್ಬುಕ್ ಪೋಸ್ಟ್ ಇಡೀ ನಾಯಕರಿಗೆ ಮಾದರಿಯಾಗಿದೆ. ಇತ್ತ ಅವರ ಕ್ಷೇತ್ರದ ಜನ ಮಳೆ, ಕರೋನಾದಿಂದ ಬದುಕು ಕಳೆದುಕೊಂಡರೆ ಅತ್ತ ಕಾರಜೋಳ ಕುಟುಂಬವೇ ಜೀವನ್ಮರಣದ ನಡುವೆ ಹೋರಾಡುತ್ತಿದೆ.
ಬಿಜೆಪಿ ನಾಯಕರ ಆಜ್ಞೆ ಮೇರೆಗೆ ಶಿರಾ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಡಾ.ರಾಜೇಶ್ ಗೌಡ ನಾಮಪತ್ರ ಸಲ್ಲಿಕೆಯ ವೇಳೆ ಹಾಜರಾಗಿದ್ದ ಕಾರಜೋಳ ಅವರಿಗೆ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದೇ ಇರುವ ಆಪಾದನೆ ಎದುರಾಗಿದೆ. ಈ ಸಂದರ್ಭದಲ್ಲಿ ಕಾರಜೋಳ, ಫೇಸ್ ಬುಕ್ ನಲ್ಲಿ ಪೆÇೀಸ್ಟ್ ಒಂದನ್ನು ಹಾಕಿದ್ದಾರೆ. ನನ್ನ ಪುತ್ರ ಡಾ. ಗೋಪಾಲ ಕಾರಜೋಳ ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನನ್ನ ಧರ್ಮ ಪತ್ನಿ ಕೂಡಾ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಆಸ್ಪತ್ರೆಯಿಂದ ಹಿಂದಿರುಗಿದ್ದಾರೆ.
ನಾನೂ ಕೂಡಾ ಕೋವಿಡ್ 19ಕ್ಕೆ ಒಳಗಾಗಿ ಗುಣಮುಖನಾಗಿ ಹಿಂದಿರುಗಿದ್ದೇನೆ. ನಮ್ಮ ಕುಟುಂಬದ ಒಟ್ಟಾರೆ 8 ಮಂದಿಗೆ ಕೊರೊನಾ ಸೋಂಕು ನಮ್ಮ ಕುಟುಂಬದಲ್ಲಿ ಒಟ್ಟಾರೆ 8 ಮಂದಿ ಕೊರೊನಾ ಸೋಂಕಿನಿಂದ ಒಳಗಾಗಿದ್ದೇವೆ. ಈ ಸಂದರ್ಭದಲ್ಲಿ ನಾನು ಎಲ್ಲೂ ಹೊರಗಡೆ ಹೋಗುವುದು ಸೂಕ್ತವಲ್ಲ. ವೈದ್ಯರ ಸಲಹೆ ಇದೆ. ದೂರದ ಪ್ರಯಾಣ ನಿಷಿದ್ಧ ಎಂಬುದು ವೈದ್ಯರು ಕೊಟ್ಟಿರುವ ಎಚ್ಚರಿಕೆ. ಈ ಎಲ್ಲಾ ಅಂಶಗಳು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಗಮನದಲ್ಲಿದೆ. ಅವರೂ ಕೂಡಾ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸೂಚಿಸಿದ್ದಾರೆ ಎಂದು ಬರೆದಿದ್ದಾರೆ.