ಸಹೋದರರಿಬ್ಬರು ಆತ್ಮಹತ್ಯೆಗೆ ಯತ್ನ!
– ವಿಟ್ಲದ ಕುದ್ದುಪದವು ಸಮೀಪ ಘಟನೆ
ಕಾರ್ಕಳ : ಮಹಿಳೆಯ ಬ್ಯಾಗ್ ಕಸಿದು ಕಳ್ಳ ಪರಾರಿ!
ಉಡುಪಿ: ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಜ್ಜು
ಮಂಗಳೂರು: ದ.ಕ. ಜಿಲ್ಲೆಯಲ್ಲಿ 19ರಂದು ಚೌತಿ ರಜೆ
ಕುಂದಾಪುರ: ಗಂಗೊಳ್ಳಿ ಅಕ್ರಮ ಮರಳುಗಾರಿಕೆ ಅಡ್ಡೆ
NAMMUR EXPRESS NEWS
ವಿಟ್ಲ: ವಿಷ ಸೇವಿಸಿ ಸಹೋದರರಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಟ್ಲದ ಕುದ್ದುಪದವು ಸಮೀಪ ನಡೆದಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಕುದ್ದುಪದವು ನಿವಾಸಿ ಸಂಜೀವ ಬೆಳ್ಳಡರವರ ಪುತ್ರ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಕಳ : ಮಹಿಳೆಯ ಬ್ಯಾಗ್ ಕಸಿದು ಕಳ್ಳ ಪರಾರಿ!
ಕಾರ್ಕಳ: ಅಡುಗೆ ಕೆಲಸದ ಮಹಿಳೆ ಒಬ್ಬರು ಕೆಲಸ ಮುಗಿಸಿ ಹಿಂದಿರುಗುವಾಗ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಅವರ ಹ್ಯಾಂಡ್ ಬ್ಯಾಗ್ ಕಸಿದು ಪರಾರಿಯಾದ ಘಟನೆ ನಗರದ ಬಂಗ್ಲೆಗುಡ್ಡೆ ಸಮೀಪ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಚಟ್ನಳ್ಳಿ ಹಳ್ಳೂರಿನ ಮಹಿಳೆ ಪಕೀರಮ್ಮ ನಗರದ ಖಾಸಗಿ ಸಂಸ್ಥೆಯ ಸಿಬ್ಬಂದಿಗೆ ಅಡುಗೆ ತಯಾರು ಮಾಡಿ
ಕೊಟ್ಟು ತನ್ನ ಸ್ನೇಹಿತೆ ವೀಣಾರೊಂದಿಗೆ ಮನೆಯತ್ತ ನಡೆದುಕೊಂಡು ಬರುತ್ತಿದ್ದಾಗ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿ ಕಪ್ಪು ಬಣ್ಣದ ಸ್ಕೂಟರ್ನಲ್ಲಿ ಹಿಂದೆಯಿಂದ ಬಂದು ಹ್ಯಾಂಡ್ ಬ್ಯಾಗ್ ಎಳೆದೊಯದ್ದಿದ್ದಾನೆ. ಬ್ಯಾಗ್ನಲ್ಲಿ 15 ಸಾವಿರ ಮೌಲ್ಯದ ಮೊಬೈಲ್ ಹಾಗೂ 5 ಸಾವಿರ ನಗದು ಇತ್ತು ಎನ್ನಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.15ಕ್ಕೆ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ
ಉಡುಪಿ: ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಸೆ.15ರಂದು ಹಮ್ಮಿಕೊಳ್ಳಲಾಗಿದೆ. ತಾಲೂಕುಮಟ್ಟದ ಕ್ರೀಡೆಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ಪುರುಷರಿಗೆ: ತ್ರೋಬಾಲ್, ವಾಲಿಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಟೇಬಲ್ ಟೆನ್ನಿಸ್, ಹ್ಯಾಂಡ್ ಬಾಲ್, ಕುಸ್ತಿ, ಹಾಕಿ, ಯೋಗ ಪಂದ್ಯಾಟಗಳಿವೆ.
ಮಹಿಳೆಯರಿಗೆ: ಥೋಬಾಲ್, ವಾಲಿಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಟೇಬಲ್ ಟೆನಿಸ್, ಹ್ಯಾಂಡ್ ಬಾಲ್, ಕುಸ್ತಿ, ಹಾಕಿ, ಯೋಗ ಪಂದ್ಯಾಟಗಳಿವೆ. 15ರಂದು ನೆಟ್ ಬಾಲ್ ಟೆನ್ನಿಸ್ ಹಾಗು ಈಜು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ, ಸಹಾಯಕ ನಿರ್ದೇಶಕರ ಕಚೇರಿ(0824-2521324) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ದ.ಕ. ಜಿಲ್ಲೆಯಲ್ಲಿ 19ರಂದು ಚೌತಿ ರಜೆಗೆ ಸೂಚನೆ
ಮಂಗಳೂರು: ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬಕ್ಕೆ ಸೆ.18ರಂದು ರಜೆ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 19ರಂದು ರಜೆ ನೀಡುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಈ ಕುರಿತು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಸಚಿವರು, ಮಂಗಳವಾರದಂದು ರಜೆ ಘೋಷಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ
ಗಂಗೊಳ್ಳಿ ಅಕ್ರಮ ಮರಳುಗ ಅಡ್ಡೆ ಮೇಲೆ ದಾಳಿ: ಅರೆಸ್ಟ್
ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋವಾಡಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಕಾರ್ಮಿಕರನ್ನು ಬಂಧಿಸಿದ್ದಾರೆ. ಮೋವಾಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಡ್ಡೆಯ ಮೇಲೆ ಗಂಗೊಳ್ಳಿ ಠಾಣೆ ಪಿ.ಎಸ್.ಐ ಹರೀಶ್ ಆರ್. ಹಾಗೂ ಸಿಬ್ಬಂದಿ ತಂಡ ಈ ದಾಳಿ ನಡೆಸಿದೆ.ದಾಳಿಯಲ್ಲಿ ಉತ್ತರಪ್ರದೇಶದ ಮೈನೇಜರ್ (30), ಗುದ್ದು ಕುಮಾರ (20), ಜಿತೇಂದ್ರ ಕುಮಾರ್ (25), ದಿನೇಶ (22), ಮತ್ತು ಸ್ಥಳೀಯ ನಿವಾಸಿ ಆಲ್ಟನ್ (42) ಎಂಬವರನ್ನು ಬಂಧಿಸಲಾಗಿದೆ.