ಕರಾವಳಿಯಲ್ಲಿ ಗೌರಿ ಗಣೇಶ ಹಬ್ಬದ ರಂಗು!
– ಖರೀದಿ ಜೋರು: ಎಲ್ಲೆಡೆ ಹಬ್ಬದ ಸಂಭ್ರಮ
– ಹಲವೆಡೆ ಮದ್ಯ ಮಾಂಸ ಮಾರಾಟದ ಮೇಲೆ ನಿಷೇಧ
– ಇಂದು ಗೌರಿ, ನಾಳೆ ಗಣೇಶ ಹಬ್ಬದ ಆಚರಣೆ
NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ಗಣೇಶ ಚತುರ್ಥಿ ಸಂಭ್ರಮಕ್ಕೆ ಸಿದ್ಧತೆ ತರಾತುರಿಯಿಂದ ನಡೆಯುತ್ತಿದೆ.
ಗೌರಿ ಹಬ್ಬ ಹಾಗೂ ಮಂಗಳವಾರ ಗಣೇಶ ಹಬ್ಬ ಆಚರಣೆಯಾಗಲಿದೆ. ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ವೈಭವದಿಂದ ಗಣೇಜೋತ್ಸವ ಆಚರಣೆಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಹಾಗೂ ಕೊಡಗು ಜಿಲ್ಲೆಯಾದ್ಯಂತ ತಯಾರಿ ನಡೆಯುತ್ತಿದ್ದು, ವ್ಯಾಪಾರ ಚಟುವಟಿಕೆ ಕೂಡ ಬಿರುಸುಗೊಂಡಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ಗಳಿಂದ ಗಣೇಶೋತ್ಸವ ಆಚರಣೆ ಪೆಂಡಾಲ್ ನಿರ್ಮಾಣವಾಗಿದೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಯ ವಿವಿಧ ಕಡೆ ಹೊರ ಜಿಲ್ಲೆಯ ಹೂವಿನ ವ್ಯಾಪಾರಿಗಳು ಬೀಡುಬಿಟ್ಟಿದ್ದು ಹೂವಿನ ವ್ಯಾಪಾರ ರವಿವಾರವೇ ಬಿರುಸಿನಿಂದ ನಡೆಯಿತು. ಕಬ್ಬು ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹೊರ ಜಿಲ್ಲೆಗಳ ಕಬ್ಬು ಬೆಳೆಗಾರರು ಉಡುಪಿ, ಮಂಗಳೂರು ನಗರದ ವಿವಿಧೆಡೆ ಕಟ್ಟು ಮಾರಾಟದಲ್ಲಿ ತೊಡಗಿದ್ದಾರೆ.
ಮದ್ಯ ಮಾರಾಟ ನಿಷೇಧ
ಉಡುಪಿ: ಚೌತಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕೋರಿಕೆಯಂತೆ ಜಿಲ್ಲೆಯಲ್ಲಿ ಸೆ. 19, ಉಡುಪಿ ನಗರದಲ್ಲಿ ಸೆ. 21 ಮತ್ತು ಸೆ. 23ರಂದು ಡ್ರೈ ಡೇ ಘೋಷಿಸಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ ವಿ ಕುಮಾರಿ ಅದೇಶ ಹೊರಡಿಸಿದ್ದಾರೆ.