ಆನ್ಲೈನ್ ಗೇಮ್ ನೋಡಿ ಕೈ ಕೊಯ್ದುಕೊಂಡ ಹುಡುಗಿಯರು!
– ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ವಿಚಿತ್ರ ಘಟನೆ
– ಮೀನು ತಿಂದು ಅಂಗಾಂಗವನ್ನೇ ಕಳೆದುಕೊಂಡಳು!
– ಅಮೇರಿಕಾದಲ್ಲಿ ನಡೆದ ಈ ಘಟನೆ ಈಗ ಭಾರೀ ಚರ್ಚೆ
NAMMUR EXPRESS NEWS
ದಾಂಡೇಲಿ: 9ನೇ ತರಗತಿಯ 10 ವಿದ್ಯಾರ್ಥಿಗಳು ಒಂದೇ ರೀತಿ ಕೈ ಕುಯ್ದುಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ನಗರದ ಜನತಾ ವಿದ್ಯಾಲಯದಲ್ಲಿ ನಡೆದಿದ್ದು ಪೋಷಕರಲ್ಲಿ ಆತಂಕ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪಬ್ ಜೀಯಂತಹ ಗೇಮ್ ಆಡಿ ಅವುಗಳ ಪ್ರೇರಣೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ಈ ಘಟನೆ ನಾಲೈದು ದಿನಗಳ ಹಿಂದೆಯೇ ನಡೆದಿದೆ. ಈ ವಿಷಯ ಪಾಲಕರ ಗಮನಕ್ಕೆ ಬಂದಿರಲಿಲ್ಲ. ಕೆಲ ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಶಾಲೆಗೆ ಬಂದು ಶಿಕ್ಷಕರನ್ನು ವಿಚಾರಿಸಿದ್ದಾರೆ. ಈ ವೇಳೆ ಶಿಕ್ಷಕರು ಪಾಲಕರೆದುರೇ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದ್ದಾರೆ. ಹೂವು ಕೀಳುವ ವೇಳೆ ಮುಳ್ಳು ತಗುಲಿದೆ, ತಾಯಿ ಬೈದಿದ್ದರಿಂದ, ಸ್ನೇಹಿತೆ ಕೈ ಕುಯ್ದುಕೊಂಡಿದ್ದರಿಂದ ನಾನು ಮಾಡಿಕೊಂಡೆ ಎಂದು ಕೆಲವರು ಹೇಳಿದ್ದಾರೆ. ಆಗ ಶಿಕ್ಷಕರು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ಸುಮ್ಮನಾಗಿದ್ದಾರೆ. ಈ ವಿಷಯ ಪೊಲೀಸರು ಹಾಗೂ ಉಳಿದ ಪಾಲಕರಿಗೂ ಗೊತ್ತಾಗಿದೆ.
ಮೀನು ತಿಂದು ಅಂಗಾಂಗವನ್ನೇ ಕಳೆದುಕೊಂಡಳು!
ನ್ಯೂಯಾರ್ಕ್: ಮಹಿಳೆಯೊಬ್ಬರು ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ವಿಚಿತ್ರ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಲಾರಾ ಬರಾಜಾಸ್ (40) ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಬ್ಯಾಕ್ಟಿರಿಯಾ ಸೋಂಕಿನಿಂದ ಮಹಿಳೆ ಅಂಗಾಂಗ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಬ್ಯಾಕ್ಟಿರಿಯಾದ ಮಾರಣಾಂತಿಕ ಸೈನ್ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆಯಿಂದ ಉಂಟಾಗುತ್ತದೆ ಎನ್ನಲಾಗಿದೆ. ಬರಾಜಸ್ ಅವರು ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ಖರೀದಿಸಿದ್ದಾರೆ. ಆ ಮೀನಿನ ಸಾಂಬರ್ ತಿಂದ ಬಳಿಕ ಅವರು ಅಸ್ವಸ್ಥಗೊಂಡಿದ್ದಾರೆ. ಬಹುತೇಕ ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದ ಬರಾಜಸ್ ನನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಕ್ರಮೇಣ ಅವರ ಬೆರಳುಗಳು, ಪಾದಗಳು, ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತಾ ಬಂದವು. ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿವೆ ಎಂದು ಮೆಸ್ಸಿನಾ ಮಾಹಿತಿ ನೀಡಿದ್ದಾರೆ.