ಬಂಟ್ವಾಳ: ತೀವ್ರ ಜ್ವರಕ್ಕೆ ಬಿಜೆಪಿ ಕಾರ್ಯಕರ್ತ ಬಲಿ!
– ಆಸ್ಪತ್ರೆಗೆ ಬಂದಾಗಲೇ ಕುಸಿದು ಬಿದ್ದು ದುರ್ಮರಣ
– ಬಂಟ್ವಾಳ: ಪೊಲೀಸರ ಭರ್ಜರಿ ಬೇಟೆ
– ಕಾಸರಗೋಡು: ಮೊಬೈಲ್ ಆಪ್ ಮೂಲಕ ಯುವಕನ 1.50 ಲಕ್ಷ ರೂ. ಕದ್ದ ಕಳ್ಳರು!
ಉಡುಪಿ: ಕೋಡಿ ಬೀಚ್ ನಲ್ಲಿ ಗಮನ ಸೆಳೆದ ಗಣಪನ ಮರಳು ಶಿಲ್ಪ
– ಬಂಟ್ವಾಳ ನಗರದಲ್ಲಿ ಇಬ್ಬರು ಕಳ್ಳರು ಅರೆಸ್ಟ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ :
ಬಂಟ್ವಾಳ: ಅಮ್ಮಾಡಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಆಸ್ಪತ್ರೆಯಲ್ಲೇ ಕುಸಿದು ಬಿದ್ದು ಸಾವನ್ನು ಕಂಡಿರುವ ಘಟನೆ ನಡೆದಿದೆ. ಔಷಧಿಗೆಂದು ಅವರು ಬೆಳಿಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು ಎಂದು ಹೇಳಲಾಗಿದೆ. ಈ ವೇಳೆ ವೈದ್ಯರು ಪರೀಕ್ಷೆ ಮಾಡುವ ಮೊದಲೇ ಆಸ್ಪತ್ರೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಜ್ವರದಿಂದ ಬಳಲುತ್ತಿದ್ದ ಪ್ರಕಾಶ್ ಅವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಾಜೇಶ್ ನಾಯ್ಕ ಸಹಿತ ಅನೇಕ ಬಿಜೆಪಿ ಪ್ರಮುಖರು ಬಂಟ್ವಾಳ ಆಸ್ಪತ್ರೆಗೆ ಧಾವಿಸಿ
ಮೊಬೈಲ್ ಆಪ್ ಮೂಲಕ ಯುವಕನ 1.50 ಲಕ್ಷ ರೂ. ಕದ್ದ ಕಳ್ಳರು!
ಕಾಸರಗೋಡು: ಮೊಬೈಲ್ ಅಪ್ಲಿಕೇಶನ್ ಮೂಲಕ ಯುವಕನ ಒಂದೂವರೆ ಲಕ್ಷ ರೂ. ಲಪಟಾಯಿಸಿರುವುದಾಗಿ ದೂರಲಾಗಿದೆ. ತಾಯನ್ನೂರು ಎಣ್ಣಪ್ಪಾರ ಕುಟ್ಟಿಯಡ್ಕದ ಟಿ.ಕೆ. ಧನೇಶ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ತಂಡ 1,41,522 ರೂ. ಲಪಟಾಯಿಸಿದ್ದಾಗಿ ದೂರಲಾಗಿದೆ. ವರ್ಕ್ ಫ್ರಂ ಹೋಂ ಮೂಲಕ ಕಮಿಷನ್ ನೀಡುವುದಾಗಿ ತಿಳಿಸಿ ಮೋಸ ಮಾಡಲಾಗಿದೆ. ತಂಡಕ್ಕೆ ಮೊಬೈಲ್ ಅಪ್ಲಿಕೇಶನ್ ಮೂಲಕ ಹಣ ಕಳುಹಿಸಿಕೊಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೋಡಿ ಬೀಚಿನಲ್ಲಿ ಗಮನ ಸೆಳೆದ ಗಣಪ!
ಗೌರಿ- ಗಣೇಶನ ಹಬ್ಬದಂದು 15 ಮಂದಿ ವಿದ್ಯಾರ್ಥಿಗಳು ಸೇರಿ ರಚಿಸಿದ ಗಣೇಶನ ಮರಳು ಶಿಲ್ಪ ಎಲ್ಲರ ಗಮನ ಸೆಳೆಯುತ್ತಿದೆ. ಕೋಡಿ ಕಡಲ ಕಿನಾರೆಯಲ್ಲಿ ಈ ಮರಳು ಕಲಾಕೃತಿ ಮೂಡಿ ಬಂದಿದೆ. 4 ಅಡಿ ಎತ್ತರ ಮತ್ತು 9 ಅಡಿ ಅಗಲದ ಬಣ್ಣದ ಕಲಾಕೃತಿ ಇದೆ, ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಶಿಕ್ಷಕಿ ಚೇತನಾ ಜಿ. ಸಂತೋಷ ಹಾಲಾಡಿ ಸಹಕಾರದೊಂದಿಗೆ ವಿನಾಯಕ’ ಎಂಬ ಶೀರ್ಷಿಕೆಯಡಿಯಲ್ಲಿ ತ್ರಿವರ್ಣ ಕಲಾ ಕೇಂದ್ರದ ಕಿರಿಯರ ವಿಭಾಗದ ಆಯ್ದ ವಿದ್ಯಾರ್ಥಿಗಳು ರಚಿಸಿದ್ದಾರೆ.
ಕಾರ್ಕಳ ನಗರದಲ್ಲಿ ಬೀದಿ ನಾಯಿಗಳ ಕಾಟ!
ಕಾರ್ಕಳ ನಗರದ ವಿವಿಧೆಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ ಹಿಂಡು ಹಿಂಡಾಗಿ ನಾಯಿಗಳು ಅಡ್ಡಾದಿಡ್ಡಿ ಓಡಾಡುತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ಸವಾರರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾರ್ಕಳ ಬಸ್ ನಿಲ್ದಾಣ, ಸ್ವರಾಜ್ ಮೈದಾನ, ಬಂಡಿಮಠ, ಸಾಲ್ಮರ, ತಾಲೂಕು ಕಚೇರಿ ಜಂಕ್ಷನ್ ಹೀಗೆ ನಗರದೆಲ್ಲೆಡೆ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಇವುಗಳ ಉಪಟಳದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ದ್ವಿಚಕ್ರ ಸವಾರರನ್ನು ಬೀದಿನಾಯಿಗಳ ಅಟ್ಟಿಸಿ ಹಲವು ಬಾರಿ ದ್ವಿಚಕ್ರಗಳು ಅಪಘಾತಕ್ಕೀಡಾಗಿದೆ.
ಬಂಟ್ವಾಳ ನಗರದಲ್ಲಿ ಇಬ್ಬರು ಕಳ್ಳರು ಅರೆಸ್ಟ್!
ಬಂಟ್ವಾಳ ನಗರ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ ಹಗಲು ವೇಳೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಹಗಲಿನ ವೇಳೆ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ್ದು, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಬೆಂಗ್ರೆ ಭದ್ರಪಳ್ಳಿ ನಿವಾಸಿ ಫರಾಜ್ (27) ಮತ್ತು ಸುರತ್ಕಲ್ ತಾಲೂಕು ಚೊಕ್ಕಬೆಟ್ಟು ಕೃಷ್ಣಾಪುರ 4ನೇ ಬ್ಲಾಕ್ ನ ನಿವಾಸಿಯಾಗಿರುವ ತೌಸಿಫ್ ಅಹಮ್ಮದ್ (34) ಬಂಧಿತ ಆರೋಪಿಗಳು, ಬಂಧಿತರಿಂದ 12,23,000 ಮೌಲ್ಯದ 223ಗ್ರಾಂ ಚಿನ್ನಾಭರಣ ಮತ್ತು ರೂ 3,000 ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000ಮೌಲ್ಯದ ಮಹೀಂದ್ರ ಕೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.