ವೈದ್ಯಾಧಿಕಾರಿ ಹುದ್ದೆಯಿಂದ ಡಾ. ಎಲ್ಡೋಸ್ ಅಮಾನತು!
– ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ಪ್ರಕರಣ
– ಎನ್.ಆರ್.ಪುರ ವೈದ್ಯಾಧಿಕಾರಿಯ ಕಿರಿಕ್ ಪುರಾಣ!
NAMMUR EXPRESS NEWS
ಎನ್.ಆರ್ ಪುರ ತಾಲೂಕಿನ ವೈದ್ಯಾಧಿಕಾರಿ ಡಾ. ಎಲ್ಡೋಸ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವೈಧ್ಯಾಧಿಕಾರಿ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿದೆ.
ನರಸಿಂಹರಾಜಪುರ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ. ಪೊಲೀಸರ ಕ್ರಮದ ನಂತರ ಉಳಿದ ಇಲಾಖಾ ಕ್ರಮ ವಹಿಸಲಾಗುವುದು ಎಂದು ಡಿ ಎಚ್ಓ ಆಸ್ವತ್ ಬಾಬು ತಿಳಿಸಿದ್ದಾರೆ. ಡಿ ಗ್ರೂಪ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದ ವೇಳೆ ಬಾಳೆಹೊನ್ನೂರು ವೈದ್ಯರ ವಸತಿಗೃಹದಲ್ಲಿ ಬುಧವಾರ ಬೆಳಗ್ಗೆ ಮಹಿಳೆಯ ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದು ಕುಟುಂಬದವರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 ಅನ್ವಯ ಕೇಸ್ ದಾಖಲಾಗಿದ್ದು ಆರೋಪಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.