ಕರಾವಳಿ ಕಂಬಳ ಸಂಭ್ರಮ!
– ಉಡುಪಿ, ದಕ್ಷಿಣ ಕನ್ನಡ ಕಾಸರಗೋಡು ಜಿಲ್ಲೆಯ ದಿನಾಂಕ ಪ್ರಕಟ
– ರಾಜಧಾನಿಯಲ್ಲೂ ಈ ಬಾರಿ ಕಂಬಳ ಸಡಗರ!
NAMMUR EXPRESS NEWS
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ದೇವಿಪ್ರಸಾದ್ ಶೆಟ್ಟಿ ಬೆಳಪು ಕಂಬಳಗಳ ದಿನಾಂಕವನ್ನು ಜಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಬಿಡುಗಡೆ ಮಾಡಿದ್ದು, ಯಾವತ್ತು ಎಲ್ಲೆಲ್ಲಿ ಕಂಬಳ ಇದೆ. ಇಲ್ಲಿದೆ ವಿವರ.
ದಿನಾಂಕ ಸ್ಥಳ
ನ. 11 – ಸುರತ್ಕಲ್.
ನ. 18 – ಕಕ್ಕೆಪದವು.
ನ. 25 – ಬೆಂಗಳೂರು ಕಂಬಳ
ಡಿ.2 – ಮೂಡುಬಿದಿರೆ
ಡಿ. 17 – ನರಿಂಗಾನ
ಡಿ. 24 – ಮೂಲ್ಕಿ
ಡಿ. 30 – ಮಂಗಳೂರು
ಜ. 6 – ಮೀಯಾರು
ಜ. 7 – ಬಳ್ಳಮಂಜ
ಜ. 13 – ಹೊಕ್ಕಾಡಿಗೋಳಿ
ಜ. 20 – ಅಡ್ವ
ಜ. 27 – ಪುತ್ತೂರು
ಫೆ. 3 – ಐಕಳ
ಫೆ. 17 – ವಾಮಂಜೂರು
ಫೆ. 24 – ಕಟಪಾಡಿ
ಮಾ. 2 – ಬಂಟ್ವಾಳ
ಮಾ. 9 – ಬಂಗಾಡಿ
ಮಾ. 23 – ಉಪ್ಪಿನಂಗಡಿ
ಮಾ. 30 – ಪಣಪಿಲ
ಎ. 6 – ಬಳ್ಳುಂಜೆ
ಎ. 13 – ಗುರುಪುರ
ರಾಜಧಾನಿಯಲ್ಲಿ ಮೊದಲ ಬಾರಿಗೆ ಕಂಬಳಕ್ಕೆ ಸಜ್ಜು
ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭವಾಗಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ನಿಯೋಗ ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಿದರು. ತುಳುನಾಡಿನ ಜನಪದ ಕಲೆಯಾದ ಕಂಬಳವು ಈ ಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರು ಜನತೆ ಸೇರಿದಂತೆ ಹಲವು ಕಡೆಗಳಿಂದ ಜನತೆ ಆಗಮಿಸಲಿದ್ದಾರೆ . ಕಂಬಳವನ್ನು ಆಯೋಜನೆ ಮಾಡುವ ಮೂಲಕ ಅಶೋಕ್ ಕುಮಾರ್ ರೈಯವರು ಈ ಬಾರಿ ರಾಜ್ಯದ ರಾಜಧಾನಿಯಲ್ಲೇ ತುಳುನಾಡಿನ ಜನಪದ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷರಾದ ಸುಂದರ್ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಅಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್ಕುಮಾರ್ ರೈ, ರಾಕೇಶ್ ರೈ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ಕರುಣಾಕರ ಸಾಮಾನಿ, ಶರತ್ , ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ , ದೀಕ್ಷಿತ್ ರ ಮೊದಲಾದವರು ಉಪಸ್ಥಿತರಿದ್ದರು.