ಪುತ್ತೂರು ಬಿಜೆಪಿ ಕಾರ್ಯಕರ್ತನ ಫೋಟೋ ವೈರಲ್!
– ಹಿರೇಬೆಟ್ಟು: ಸೌಜನ್ಯ ಪ್ರಕರಣ ಮರುತನಿಖೆಗೆ ಮೋದಿಗೆ ಪತ್ರ
ಬೆಳ್ತಂಗಡಿ: ಕಾರಿಗೆ ಟೆಂಪೋ ಡಿಕ್ಕಿ: ಚಾಲಕನಿಗೆ ಹಲ್ಲೆ
ಕಾಪು: ಮರ ಬಿದ್ದು ಕಾರ್ಮಿಕ ಸಾವು
ಮಣಿಪಾಲ: ಚೂರಿ ಇರಿತ ನಾಲ್ಕು ಮಂದಿಯ ಬಂಧನ
ಕುಂದಾಪುರ: ಬುಲೆಟ್ ಢಿಕ್ಕಿ: ಬೈಕ್ ಸವಾರನಿಗೆ ಗಾಯ
ಮಂಗಳೂರಲ್ಲಿ: ಸರಣಿ ಅಪಘಾತ: ಗಾಯ
NAMMUR EXPRESS NEWS
ಪುತ್ತೂರು: ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆ ಜೊತೆ ಇರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನಲೆ ನವೀನ್ ರೈ ಕೈಕಾರ ಸೆನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ತನ್ನ ಫೋಟೋವನ್ನ ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಪುತ್ತಿಲ ಪರಿವಾರ ಗ್ರೂಪಿನಲ್ಲಿ ನನ್ನ ಫೋಟೋ ಮತ್ತು ಬೇರೆ ಹುಡುಗಿಯ ಫೋಟೋವನ್ನು ಒಟ್ಟಿಗೆ ಸೇರಿಸಿ ನನ್ನ ಮಾನಕ್ಕೆ ಧಕ್ಕೆ ಬರುವಂತೆ ಮಾಡಿದ್ದು ಫೋಟೋವನ್ನು ದಿನೇಶ್ ಪುತ್ತೂರು ಎಂಬವರು ಪುತ್ತಿಲ ಪರಿವಾರ -1ಎಂಬ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಮಾಡಿರುವುದಾಗಿ ದೂರು ದಾಖಲಿಸಿದ್ದು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣ ಮರುತನಿಖೆಗೆ ಪ್ರಧಾನಿಗೆ ಪತ್ರ
ಹಿರೇಬೆಟ್ಟು: ಸೌಜನ್ಯ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಸಮಯದಿಂದ ಹೋರಾಟ ನಡೆಯುತ್ತಿದ್ದು, ಹಿರೇಬೆಟ್ಟು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ ಹಾಗೂ ಸೌಜನ್ಯ ತಾಯಿ ಸಭೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಧರ್ಮಸ್ಥಳ ಪರಿಸರದಲ್ಲಿ ಇದುವರೆಗೆ ನಡೆದ ಎಲ್ಲಾ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ವಿಸ್ತ್ರತ ತನಿಖೆ ನಡೆಸುವಂತೆ ಮನವಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದೆ.
ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ
ಬೆಳ್ತಂಗಡಿ: ಉಜಿರೆ ಮೀನು ತರುವ ಟೆಂಪೋ ಕಾರಿಗೆ ಡಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿರು ವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್ ಅಲಿ (24) ಹಲ್ಲೆಗೆ ಒಳಗಾದವರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾನು ಟೆಂಪೊವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ನಾಗೇಶ, ಪ್ರವೀಣ, ಹರಿ, ವಿನಯ್ ಹಾಗೂ ಇತರರು ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು ನೀಡಿರುವ ನ್ಯಾಯತರ್ಪು ಗ್ರಾಮದ ನಿವಾಸಿ, ಉಜಿರೆಯ ಮಾರುಕಟ್ಟೆಯಲ್ಲಿ ಮೀನು ಕ್ಲೀನಿಂಗ್ ಕೆಲಸ ಮಾಡುವ ಗಿರಿಜಾ, ಮೀನು ಸಾಗಾಟದ ಟೆಂಪೋ ಚಾಲಕ ಕಾರಿಗೆ ಟೆಂಪೋವನ್ನು ತಾಗಿಸಿ ಜಮುಂಗೋಳಿ ಸಿದ್ದಾರೆ. ಬಳಿಕ ಮಾರುಕಟ್ಟಿಗೆ ನುಗ್ಗಿ ಕತ್ತಿಯನ್ನು ತೆಗೆಯಲು ಪ್ರಯತ್ನಿಸಿದ್ದನ್ನು ವಿರೋಧಿಸಿದಾಗ ನನ್ನನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬೆಳ್ತಂಗಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮರ ಬಿದ್ದು ಕಾರ್ಮಿಕ ಸಾವು
ಕಾಪು: ಮಜೂರು ಕರಂದಾಡಿಯ ನಾಗಬನದ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಬಿಹಾರ ಮೂಲದ ಕಾರ್ಮಿಕನೋರ್ವ ಮರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂಬಾಡಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಕಾರ್ಮಿಕ ಸುಧೀರ್ ಮಾಂಝಿ (50) ಮೃತಪಟ್ಟಿದ್ದು, ಆತನ ಜತೆಗಿದ್ದ ಸಹ ಕಾರ್ಮಿಕರಾದ ರಾಮು ಮತ್ತು ಪ್ರಮೋದ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರದಡಿ ಸಿಲುಕಿದ್ದ ಕಾರ್ಮಿಕರು
ಗ್ರೆಗೊರಿ ಲೂವಿಸ್ ಕೋಡ ಅವರ ಜತೆಗೆ ಕೆಲಸ ಮಾಡುತ್ತಿದ್ದ ಏಳು ಬಿಹಾರ ಮೂಲದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಮರ ಉರುಳಿ ಬಿದ್ದಾಗ ಮೂವರು ಕಾರ್ಮಿಕರು ಮರದಡಿಯಲ್ಲಿ ಸಿಲುಕಿಕೊಂಡಿದ್ದರು. ಅದರಲ್ಲಿ ಇಬ್ಬರನ್ನು ಜತೆಗಿದ್ದ ಕಾರ್ಮಿಕರು ರಕ್ಷಿಸಿ, ತತ್ ಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೆಲವು ಗಂಟೆಗಳ ಕಾರ್ಯಾಚರಣೆ
ಮರ ಮತ್ತು ನೆಲದಡಿಯಲ್ಲಿ ಸಿಲುಕಿದ್ದ ಸುಧೀರ್ ಮಾಂಝಿ ಹೊರಗೆ ಬರಲಾಗದೇ ಮರದ ಅಡಿಯಲ್ಲಿ ಸಿಲುಕಿ ಒದ್ದಾಡುವಂತಾಯಿತು ಸ್ಥಳೀಯರು ಮತ್ತು ಕಾರ್ಮಿಕರು ಮರ ತೆರವು ಮತ್ತು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.
ಚೂರಿ ಇರಿತ ನಾಲ್ಕು ಮಂದಿಯ ಬಂಧನ
ಮಣಿಪಾಲ: ಬ್ರಹ್ಮಾವರ ಮೂಲದ ಯುವಕನಿಗೆ ತಂಡವೊಂದು ಚೂರಿ ಇರಿದ ಘಟನೆ ಭಾನುವಾರ ತಡರಾತ್ರಿ ಮಣಿಪಾಲದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟಾ’ಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ ಬಂಧಿತರು.ಬ್ರಹ್ಮಾವರದ ನಿವಾಸಿ ಪ್ರತಾಪ್ ಅವರು ಗೆಳೆಯರಾದ ತಿಲಕ್ ಮತ್ತು ಹರ್ಷಿತ್ ಅವರೊಂದಿಗೆ ಮಣಿಪಾಲದಲ್ಲಿ ರಾತ್ರಿ ತಿರುಗಾಡಲು ಹೋಗಿದ್ದಾಗ ಘಟನೆ ನಡೆದಿದೆ ಎಂದು ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದೇ ರೀತಿ ಉದಾಫ್ , ತನ್ನ ಮೇಲೆ ಪ್ರತಾಪ್ ಮತ್ತವರ ತಂಡ ಕೈ ಹಾಗೂ ನಮಗೆ ಕಲ್ಲಿನಿಂದ ಹಲ್ಲೆ ನಡೆಸಿದೆ ಎಂದು ಪ್ರತಿದೂರು ನೀಡಿದ್ದಾರೆ. ಅದರಂತೆ ಈ ಎರಡೂ ಪ್ರಕರಣಗಳು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ
ಬುಲೆಟ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ
ಕುಂದಾಪುರ: ಬುಲೆಟ್ ಢಿಕ್ಕಿಯಾಗಿ ಬೈಕ್ ಸವಾರ ಫಿಲಿಪ್ ಡಿ’ಸೋಜಾ ಅವರು ಗಾಯಗೊಂಡ ಘಟನೆ ಇಲ್ಲಿನ ಸಂತೆ ಮಾರುಕಟ್ಟೆ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ಅಕ್ರಮ ಮರಳುಗಾರಿಕೆ: ಕೇಸ್
ಅಕ್ರಮ ಗಣಿಗಾರಿಕೆ ಯ ವಿರುದ್ಧ ಕಠಿಣ ಕ್ರಮ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ,ಅಕ್ರಮ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಮುಲಾಜಿಲ್ಲದೇ ಕೇಸ್ ದಾಖಲಿಸುತ್ತಿದ್ದಾರೆ. ಉಡುಪಿ ಎಸ್ಪಿಯವರ ಖಡಕ್ ಸೂಚನೆ ಹಿನ್ನಲೆಯಲ್ಲಿ ಪೊಲೀಸರು ಅಕ್ರಮ ದಂಧೆಕೋರರಿಗೆ ಬಿಸಿಮುಟ್ಟಿಸುತ್ತಿದ್ದು, ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಮಾತಿಬೆಟ್ಟು ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಮಾತಿಬೆಟ್ಟು ಪೆರ್ಮಾನು ಎಂಬಲ್ಲಿ ರತ್ನಾಕರ ಪೂಜಾರಿ ಎಂಬವರು ಹೊಳೆಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1 ಯೂನಿಟ್ ಮರಳನ್ನು ವಶಪಡಿಸಿಕೊಂಡು ರತ್ನಾಕರ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗಡಿ ಬೀಗ ಮುರಿದು ಕಳ್ಳತನ
ವಿಟ್ಲ: ಜಿನಸು ಅಂಗಡಿಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ನಗದು ಕಳುವಾಗಿರುವ ಘಟನೆ ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಮಂಗಳಪದವು ಎಂಬಲ್ಲಿ ನಡೆದಿದೆ. ವೀರಕಂಭ ಗ್ರಾಮ ಮಂಗಳಪದವು ಎಂಬಲ್ಲಿ ಅಬ್ದುಲ್ ಸಲಾಂ ಎಂಬವರ ಜಿನಸು ಅಂಗಡಿಯ ಬಾಗಿಲಿನ ಬೀಗವನ್ನು ರಾತ್ರಿ ವೇಳೆ ಕಳ್ಳರು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಒಟ್ಟು 80,000/-ರೂ ನಗದು ಹಣವು ಕಳವಾಗಿದ್ದು, ಘಟನೆ ಸಂಬಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 174/2023 ಕಲಂ: 457,380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ