ಯಶಸ್ವಿನಿ ದೇವಾಡಿಗ ವಿಶ್ವ ಮಟ್ಟದ ಮಾಡೆಲ್!
– ಮಂಗಳೂರಿನ ಬೆಡಗಿಗೆ ದೊರೆತ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ ಕಿರೀಟ
– ಕರಾವಳಿಯ ಪ್ರತಿಭೆಗೆ ಮೊದಲ ಯತ್ನದಲ್ಲೇ ಗೆಲುವು
NAMMUR EXPRESS NEWS
ಮಂಗಳೂರು: ಕರಾವಳಿ ಪ್ರತಿಭೆಗಳ ತವರೂರು. ಅದರಲ್ಲೂ ಸಿನಿಮಾ, ಮಾಡೆಲಿಂಗ್, ಕ್ರಿಯೇಟಿವ್ ಕ್ಷೇತ್ರದಲ್ಲಿ ಇಲ್ಲಿಯವರ ಕೊಡುಗೆ ಎಂದಿಗೂ ಮೇಲುಗೈ. ಇದೀಗ ಮಂಗಳೂರಿನ ಸುರತ್ಕಲ್ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಎಂಬ 16 ವರ್ಷದ ಬಾಲಕಿ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಪ್ರಥಮ ಪಿಯುಸಿ ಮುಗಿದು ರಜೆಯ ಸಂದರ್ಭದಲ್ಲಿ ಮಿಸೆಸ್ ಟೀನ್ ಮಂಗಳೂರು ಸ್ಪರ್ಧೆಯ ವಿವರ ನೋಡಿದ ಅವರು ಆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.ಆ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಫ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಬಳಿಕ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿದ್ದರು. ಅಲ್ಲಿಂದ ವಿಶ್ವ ಮಟ್ಟಕ್ಕೆ ಆಯ್ಕೆಯಾಗಿ ಮಿಸ್ಟರ್ ಮತ್ತು ಮಿಸ್ ಟೀನ್ ಸೂಪರ್ ಗ್ಲೋಬ್ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಕಿರೀಟ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯ15ರಿಂದ 19 ವರ್ಷದೊಳಗಿನ ಕೆಟಗರಿಯಲ್ಲಿ ಅವರು ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸ್ಪರ್ಧೆಗೆ 15ಕ್ಕೂ ಅಧಿಕ ದೇಶಗಳಿಂದ 50ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧಾರ್ಥಿಗಳಿದ್ದರು. ನಾಲ್ಕು ದಿನಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳು ಅವರವರ ದೇಶದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಪ್ರದರ್ಶಿಸಿದ್ದರು. ಜೊತೆಗೆ ಸಾಂಪ್ರದಾಯಿಕ ಆಹಾರವನ್ನು ಪ್ರದರ್ಶಿಸಬೇಕಿತ್ತು. ಜೊತೆಗೆ ತಮ್ಮಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಬೇಕಿತ್ತು. ನಾಲ್ಕನೇ ದಿನ ಫೈನಲ್ ಹಂತದ ಸ್ಪರ್ಧೆ ನಡೆದಿತ್ತು. ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ದೇವಾಡಿಗ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ.
ಇನ್ನು ಪಿಯುಸಿ ವಿದ್ಯಾರ್ಥಿನಿ
ಮಂಗಳೂರಿನ ಕುಳಾಯಿ ನಿವಾಸಿಯಾಗಿರುವ ಯಶಸ್ವಿನಿ ದೇವಾಡಿಗ ದೇವದಾಸ ದೇವಾಡಿಗ – ಮೀನಾಕ್ಷಿ ದೇವಾಡಿಗ ದಂಪತಿಯ ಪುತ್ರಿ. ಸುರತ್ಕಲ್ ಗೋವಿಂದದಾಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.ಮಿಸ್ ಯಶಸ್ವಿನಿ ದೇವಾಡಿಗ ಕುಳಾಯಿ ಅವರು ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ 2023 ಕಿರೀಟ ಮುಡಿಗೇರಿಸಿಕೊಂಡರು. 16 ವರ್ಷ ವಯಸ್ಸಿನ ಯಶಸ್ವಿನಿ ದೇವಾಡಿಗ ಅವರಿಗೆ ಇನ್ನು 18 ವರ್ಷದ ಬಳಿಕವು ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಮಿಸ್ ಇಂಡಿಯಾ, ಮಿಸ್ ಯುನಿವರ್ಸ್ ಮಿಸ್ ವಲ್ರ್ಡ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದ್ದು ಆ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.