ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡ ಮಹಿಳೆ!
– 20.41 ಲಕ್ಷ ರೂ. ಮೌಲ್ಯದ ಚಿನ್ನ ಇಟ್ಟುಕೊಂಡಿದ್ದಳು
– ಮಂಗಳೂರು ವಿಮಾನ ನಿಲ್ದಾಣದಲ್ಲಿ ಘಟನೆ
– ಹೆಬ್ರಿ: ಫ್ಯಾಕ್ಟರಿಯಿಂದ ಗೇರು ಬೀಜ ಕಳವು
– ಪುತ್ತೂರು: ಅಪರಿಚಿತ ಶವ ಪತ್ತೆ
– ಉಡುಪಿ: ಗೋವುಗಳ ಸರಣಿ ಹತ್ಯೆ ಖಂಡಿಸಿ ಬಜರಂಗದಳದಿಂದ ಪ್ರತಿಭಟನೆ
– ಮಂಗಳೂರು: ತಪ್ಪಿದ ದುರಂತ
NAMMUR EXPRESS NEWS
ಮಂಗಳೂರು: ಗುದದ್ವಾರದಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 20.41 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅ.4 ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಹಿಳೆಯ ತಪಾಸಣೆ ವೇಳೆ ಡಿಟೆಕ್ಟರ್ ನಲ್ಲಿ ಬೀಪ್ ಶಬ್ದ ಬಂದಿದ್ದು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಧೃಡಪಟ್ಟಿದೆ. ಎರಡು ಗೋಳಾಕಾರದ ಕ್ಯಾಪ್ಸುಲ್ ಮಾದರಿಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದು, 24 ಕ್ಯಾರೆಟ್ನ 345 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 20,41,650 ರೂ. ಎಂದು ಅಂದಾಜಿಸಲಾಗಿದೆ.
ಫ್ಯಾಕ್ಟರಿಯಿಂದ ಗೇರು ಬೀಜ ಕಳವು!
ಹೆಬ್ರಿ : ವರಂಗ ಗ್ರಾಮದ ಮುನಿಯಾಲಿನಲ್ಲಿರುವ ಗುರುರಾಜ್ ಎಕ್ಸ್ಪೋರ್ಟ್ ಗೇರು ಬೀಜ ಫ್ಯಾಕ್ಟರಿಯಿಂದ 24 ಲಕ್ಷ ರೂ. ಮೌಲ್ಯದ ಗೇರು ಬೀಜ ಕಳವು ಸಂಸ್ಥೆಯ ಪಾಲುದಾರ ಎಂ.ಅರವಿಂದ ಮಲ್ಯ ಸೆ. 18ರಂದು ಸಂಜೆ 7 ಗಂಟೆಗೆ ಫ್ಯಾಕ್ಟರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಸೆ. 20ರಂದು ಬೆಳಗ್ಗೆ ಫ್ಯಾಕ್ಟರಿಗೆ ಬಂದು ನೋಡಿದಾಗ ಗೇರುಬೀಜದ ಬಾಕ್ಸ್ಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ, ಸಂಶಯ ಬಂದು ಪರಿಶೀಲಿಸಿದಾಗ ಸುಮಾರು 3570 ಕೆಜಿ (1 ಟನ್ 10 ಕೆಜಿ ಗೇರು ಬೀಜ) ಗೇರು ಬೀಜ ಕಳವು ಆಗಿದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪುತ್ತೂರಿನಲ್ಲಿ ಅಪರಿಚಿತ ಶವ ಪತ್ತೆ!
ಪುತ್ತೂರು : ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಸುಮಾರು 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಸವರಾಜ ಕಲ್ಲಪ್ಪ ಜಂಲಾಳಿ ಮೃತ ವ್ಯಕ್ತಿ. ಇವರು ಗದಗ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.
ಗೋವುಗಳ ಸರಣಿ ಹತ್ಯೆ ಖಂಡಿಸಿ ಪ್ರತಿಭಟನೆ!
ಉಡುಪಿ: ಜಿಲ್ಲೆಯ ಕೊಲ್ಲೂರಿನ ಬೆಳ್ಳಾಲ ಸಮೀಪ ನಾಲ್ಕು ದಿನಗಳ ಹಿಂದೆ ನಡೆದ ಗೋವುಗಳ ಸರಣಿ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಆರೋಪಿ ನರಸಿಂಹ ಕುಲಾಲ್ ನನ್ನನ್ನು ತಕ್ಷಣ ಬಂಧಿಸಲು ಕೊಲ್ಲೂರು ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿ, ಠಾಣಾಧಿಕಾರಿ ಮನವಿ ಸಲ್ಲಿಸಿದ್ದಾರೆ. ನಂತರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದ ಗೋವುಗಳನ್ನು ಕಳೆದುಕೊಂಡ ಸಂತ್ರಸ್ತ ಮನೆಗಳಿಗೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.
ತಪ್ಪಿದ ದುರಂತ ಬಾರಿ ದೊಡ್ಡ ಅವಘಡ!
ಮಂಗಳೂರು : ಮಂಗಳೂರಿನ ತುಂಬೆ ಬಳಿ ಲಾರಿಯೊಂದಕ್ಕೆ ವಿದ್ಯುತ್ ತಂತಿ ಸಿಲುಕಿ, ವಿದ್ಯುತ್ ಕಂಬವೊಂದು ಕಿತ್ತು ರಸ್ತೆಗೆ ವಾಲಿದ ಘಟನೆ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಅಪಾಯವಿಲ್ಲದೇ ಹಲವು ವಾಹನ ಸವಾರರು ಪಾರಾಗಿ ಹೋಗಿದ್ದಾರೆ. ಬೆಂಗಳೂರಿನಿಂದ ಎಚ್ಪಿಸಿಎಲ್ಗೆ ತೆರಳುತ್ತಿದ್ದ ಲಾರಿಯ ಚಾಲಕ ತನ್ನ ತುಂಬೆ ಬಳಿ ಲಾರಿಯ ಹಿಂಭಾಗದಲ್ಲಿ ಲೋಡ್ ಆಗಿದ್ದ ಕೆಲವು ವಸ್ತುಗಳಿಗೆ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿಗಳು ಸಿಲುಕಿದೆ. ಈ ಬಗ್ಗೆ ಅರಿವಿಲ್ಲದೇ ಚಾಲಕ ಮುಂದಕ್ಕೆ ಚಲಿಸಿದಾಗ ವಿದ್ಯುತ್ ತಂತಿಗಳು ಏಳಿದಾಡಿದಂತಾಗಿ ಕಂಬವು ರಸ್ತೆಗೆ ವಾಲಿಕೊಂಡಿದ್ದು, ಜೊತೆಗೆ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದವು. ಹಲವು ವಾಹನ ಸಂಚರಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.