ಡಾ.ಶ್ರೀಕರ ಕೊಳಿಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹುದ್ದೆ
– ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯ ಸಂಸ್ಥೆಗೆ ಕಾರ್ಯಕಾರಿ ಸದಸ್ಯ ಸ್ಥಾನ
NAMMUR EXPRESS NEWS
ನವ ದೆಹಲಿ: ಕೇಂದ್ರ ಸರ್ಕಾರದ ಸಮಾಜ ಅಭಿವೃದ್ಧಿ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎಂಪವರ್ಮೆಂಟ್ ಪರ್ಸನಲಿಟಿಸ್ ಇಂಟೆಲೆಕ್ಚ್ಯಲ್ ಡಿಸಬಲೀಸ್ ಸಂಸ್ಥೆಯ ಕಾರ್ಯಕಾರಿ ಕಮಿಟಿ ಸದಸ್ಯರಾಗಿ ಯುವ ಉದ್ಯಮಿ, ತೀರ್ಥಹಳ್ಳಿ ಮೂಲದ ಡಾ.ಶ್ರೀಕರಗೌಡ ನೇಮಕಗೊಂಡಿದ್ದಾರೆ.
ನರೇಂದ್ರ ಮೋದಿ ವಿಕಾಸ್ ಮಿಷನ್ ರಾಜ್ಯ ಉಪಾಧ್ಯಕ್ಷರಾಗಿರುವ ಯುವ ಉದ್ಯಮಿ ಡಾ. ಶ್ರೀಕರ ಗೌಡ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಗೌರವ ಸಿಕ್ಕಿದೆ.
ಈಗಾಗಲೇ ಕೇಂದ್ರ ಸರ್ಕಾರದ ರೈಲ್ವೆ ಸಮಿತಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ.
ನಿರ್ದೇಶಕ ಸ್ಥಾನ ಎರಡು ವರ್ಷದ ಅವಧಿ ಇದ್ದು ರಾಷ್ಟ್ರಮಟ್ಟದಲ್ಲಿ ಡಿಸಾಬಲಿಟೀಸ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ.