ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಪ್ರವೇಶ ಇಲ್ಲ!
– ಅ.9ರಿಂದ ನವೆಂಬರ್ ತಿಂಗಳ ಕೊನೆಯವರೆಗೆ ತಾತ್ಕಾಲಿಕವಾಗಿ ನಿಷೇಧ
– ಕುಂದಾಪುರ: ಸ್ಕೂಟರ್ನಲ್ಲಿ ಗೋ ಮಾಂಸ ಸಾಗಾಟ!
– ಮೂಡುಬಿದಿರೆ: ಬೈಕ್ಗೆ ಟಿಪ್ಪರ್ ಡಿಕ್ಕಿ: ಓರ್ವನ ಸಾವು
– ಕೋಟಾ: ದಲಿತ ಮಹಿಳೆ ಮೇಲೆ ಪೊಲೀಸ್ ದೌರ್ಜನ್ಯ
– ಸುಳ್ಯ: ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕು ಯರ್ಲ ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಮ್ ಪಾರ್ಕ್ಗೆ ಹಾಗೂ ಸಾರ್ವಜನಿಕರ ಪ್ರವೇಶವನ್ನು ಅ.9 ರಿಂದ ನವೆಂಬರ್ ತಿಂಗಳ ಕೊನೆಯವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಕಾರ್ಕಳ ತಹಶೀಲ್ದಾರ್ ಅವರು ಅದೇಶ ಹೊರಡಿಸಿದ್ದಾರೆ. ಈ ಥೀಮ್ ಪಾರ್ಕ್ ಕಳೆದ ಜನವರಿ 27 ರಂದು ಉದ್ಘಾಟನೆಗೊಂಡು ಸಾರ್ವಜನಿಕರು ಹಾಗೂ ಭದ್ರತಾ ಭೇಟಿಗೆ ತೆರೆದುಕೊಂಡಿತು, ಆದರೆ ಥೀಮ್ ಪಾರ್ಕ್ ಬಾಕಿ ಉಳಿದಿರುವ ಕಾಮಗಾರಿಯಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ ಮತ್ತು ಮೂರ್ತಿಗೆ ತುಕ್ಕು ನಿರೋಧಕ ಲೇಪನ ಮತ್ತು ಇತರ ಮುಕ್ತ ಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನಕೂಲವಾಗುವಂತೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಇದೀಗ ಕಾಮಗಾರಿ ಪೂರ್ಣಗೊಳ್ಳುವ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ಮಾಣ ಕೇಂದ್ರದವರು ಈ ಕಾಲಾವಕಾಶವನ್ನು ಕೋರಿದ್ದಾರೆ, ಅದರಂತೆ ಅ.9 ರಿಂದ ನವೆಂಬರ್ ಕೊನೆಯವರೆಗೆ ಪರಶುರಾಮ ಥೀಮ್ ಪಾರ್ಕ್ಗೆ ಯಾವುದೇ ಸಾರ್ವಜನಿಕರ ಹಾಗೂ ಸಂಪರ್ಕದ ಭೇಟಿಯನ್ನು ನಿಷೇದಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರ ಪ್ರಕಟಣೆಗೆ ಸೂಚನೆ ನೀಡಲಾಗಿದೆ.
ಸ್ಕೂಟರ್ನಲ್ಲಿ ಗೋ ಮಾಂಸ ಸಾಗಾಟ!
ಕುಂದಾಪುರ: ಸ್ಕೂಟರ್ನಲ್ಲಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣವನ್ನು ಕುಂದಾಪುರ ಪೊಲೀಸರು ಆನಗಳ್ಳಿ ಸಮೀಪ ಪತ್ತೆ ಮಾಡಿದ್ದಾರೆ. ಆನಗಳ್ಳಿ ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿ ಎಸ್ಐ ಪ್ರಸಾದ್ ಕುಮಾರ್ ನೇತೃತ್ವದ ಕುಂದಾಪುರ ಪೊಲೀಸರ ತಂಡ ತಪಾಸಣೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ಬರುತ್ತಿದ್ದ ನಿಲ್ಲಿಸಲು ಹೇಳಿದಾಗ ಆತ ಪರಾರಿಯಾಗಿದ್ದು, ತಪಾಸಣೆ ನಡೆಸಿದಾಗ ಸ್ಫೋಟರ್ನಲ್ಲಿ ಸುಮಾರು 10 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ. ಆತ ಎಲ್ಲಿಂದಲೋ ಕಳವು ಮಾಡಿ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗ ಪ್ರಭಾಕರ ಎಂಬುವರ ಮನೆಯ ಬಳಿ ಕೈ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೈಕ್ಗೆ ಟಿಪ್ಪರ್ ಡಿಕ್ಕಿ: ಓರ್ವ ಸಾವು
ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಗಂಜಿಮಠದ ಮುಚ್ಚಾರು ಕ್ರಾಸ್ ಬಳಿ ಅ. 6ರಂದು ಸಂಜೆ 6.45ಕ್ಕೆ ಮೂಡುಬಿದಿರೆಯಿಂದ ಕೈಕಂಬದ ಕಡೆಗೆ ಬರುತ್ತಿದ್ದ ಟಿಪ್ಪರ್ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ, ಗುರುಪುರ ಹೊಸಮನೆ ನಿವಾಸಿ ಸಚಿನ್ ಕುಮಾರ್ ಆಚಾರ್ಯ (33) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಚಿನ್ ಕುಮಾರ್ ಎಚ್ಡಿಎಫ್ಸಿ ಬ್ಯಾಂಕಿನ ಉದ್ಯೋಗಿಯಾಗಿದ್ದು, ಅವಿವಾಹಿತರಾಗಿದ್ದರು. ಸಂಜೆ ಕೆಲಸ ಮುಗಿಸಿ ಗುರುಪುರಕ್ಕೆ ಬರುತ್ತಿದ್ದಾಗ ಇವರ ಬೈಕನ್ನು ಓವರ್ಟೇಕ್ ಮಾಡುವ ಭರದಲ್ಲಿ ಟಿಪ್ಪರ್ ಢಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಸಚಿನ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.
ದಲಿತ ಮಹಿಳೆಯ ಮೇಲೆ ಪೊಲೀಸ್ ದೌರ್ಜನ್ಯ?
ಕೋಟ: ಈ ಹಿಂದೆ ಕೊರಗರ ವಿಚಾರದಲ್ಲಿ ಸುದ್ದಿಯಾಗಿದ್ದ ಕೋಟ ಪೊಲೀಸ್ ಠಾಣೆ ಇದೀಗ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ಮತ್ತೊಮ್ಮೆ ಪೋಲಿಸ್ ದೌರ್ಜನ್ಯದ ಮೇಲೆ ಸುದ್ದಿಯಾಗಿದೆ. ಕೋಟ ಠಾಣೆಯ ಮಹಿಳಾ ಸಬ್ ಇನ್ಸಪೆಕ್ಟರ್ ಸುಧಾ ಪ್ರಭು ಅವರು ಕಿರಣ್ ಶೆಟ್ಟಿ ಎಂಬವರು ನೀಡಿದ ಕಳ್ಳತನದ ಸುಳ್ಳು ದೂರಿನ ಮೇರೆಗೆ ದಲಿತ ಬೋವಿ ಜಾತಿಯ ಮಹಿಳೆ ಆಶಾ ಮತ್ತು ಕುಲಾಲ ಜಾತಿಯ ಸುಜಾತಾ ಅವರನ್ನು ಕಳೆದ 3ರಂದು ಪೋಲಿಸ್ ಠಾಣೆಗೆ ಕರೆಸಿ ಲಾಠಿಯಿಂದ ಹೊಂದು, ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿರುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಹಲ್ಲೆಗೊಳಗಾದ ಸುಜಾತ ಮತ್ತು ಆಶಾ ಅವರು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಒಳರೋಗಿಯಾಗಿ ದಾಖಲಾಗಿದ್ದಾರೆ. ಬೂಟು ಕಾಲಿನ ಒಡೆತದಿಂದ ಎದೆ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು ಎಕ್ಸರೇ ಮಾಡಿದಾಗ ಮೂಳೆ ಮುರಿತ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು
ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಮನೆಗೆ ಅಳವಡಿಸಿದ್ದ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಘಟನೆ ವರದಿಯಾಗಿದೆ ಲಲಿತಾ ಮೃತ ದುರ್ದೈವಿ ಮಲಗುವ ವೇಳೆಯಲ್ಲಿ ಇನ್ವರ್ಟ್ರಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.