ಕನ್ನಡ ಪುಸ್ತಕ ಲೋಕಕ್ಕೆ ಹೊಸ ಭರವಸೆ “ಪುಸ್ತಕ ಮನೆ”!
– ಶೀಘ್ರದಲ್ಲಿ ರಾಜ್ಯದ ಬೃಹತ್ ಶೈಕ್ಷಣಿಕ, ಸಾಹಿತ್ಯ, ಪುಸ್ತಕ ಸಂಗ್ರಹ
– ಅ.16ರಂದು ಉಡುಪಿಯ ಕಾರ್ಕಳದಲ್ಲಿ ಲೋಕಾರ್ಪಣೆ
– ಆಫ್ ಲೈನ್, ಆನ್ಲೈನ್ ಅಲ್ಲಿ ಪುಸ್ತಕ ಖರೀದಿಗೆ ಅವಕಾಶ
– ಎಲ್ಲಾ ಪುಸ್ತಕಗಳು ಒಂದೇ ಸೂರಿನಡಿ ಲಭ್ಯ
NAMMUR EXPRESS :
ಕಾರ್ಕಳ: ಒಂದೇ ಸೂರಿನಡಿ ಎಲ್ಲಾ ರೀತಿಯ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಬೃಹತ್ ಪುಸ್ತಕ ಮಳಿಗೆ “ಪುಸ್ತಕ ಮನೆ” ಕರಾವಳಿಯ ಕಾರ್ಕಳದಲ್ಲಿ ಶೀಘ್ರದಲ್ಲಿ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಆರಂಭವಾಗಲಿದೆ. ರಾಜ್ಯ ಮಟ್ಟದಲ್ಲಿ ಈ ಪುಸ್ತಕ ಮನೆ ಇದೀಗ ಓದುಗರ ಗಮನ ಸೆಳೆದಿದ್ದು, ಆಫ್ ಲೈನ್ ಹಾಗೂ ಆನ್ಲೈನ್ ಎರಡು ವಿಭಾಗದಲ್ಲಿ ನೂರಾರು ಬಗೆಯ ಪುಸ್ತಕಗಳನ್ನು ಒದಗಿಸಲಿದೆ. ಅದರಲ್ಲಿಯೂ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕ ಸಂಗ್ರಹ ಇಲ್ಲಿರಲಿದೆ. ರಾಜ್ಯದ ಪುಸ್ತಕ ಲೋಕಕ್ಕೆ ಹೊಸ ಭರವಸೆ ಮೂಡಿಸಿರುವ “ಪುಸ್ತಕ ಮನೆ” ಅ.16ರಂದು ಕಾರ್ಕಳದಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯದ ಬೃಹತ್ ಪುಸ್ತಕ ಮಳಿಗೆ ಹಾಗೂ ಸಂಗ್ರಹ ಇದಾಗಲಿದೆ.
ವಿಶೇಷ ಏನು?:
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿದ್ಯಾಭ್ಯಾಸದ ಪುಸ್ತಕ, ಸಾಹಿತ್ಯ ಪುಸ್ತಕ, ಮಕ್ಕಳ ಪುಸ್ತಕ, ಕಥೆ, ಕಾವ್ಯ, ತರಬೇತಿ, ಉದ್ಯಮ, ಬಯೋಗ್ರಫಿ ಸೇರಿ ಎಲ್ಲಾ ರೀತಿಯ ಪುಸ್ತಕಗಳು ಇನ್ಮುಂದೆ “ಪುಸ್ತಕ ಮನೆ” ಮಳಿಗೆ ಮತ್ತು ಪುಸ್ತಕ ಮನೆ ಆನ್ಲೈನ್ ಅಲ್ಲಿ ಸಿಗಲಿದೆ. ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಓದುಗರು ಪುಸ್ತಕಕ್ಕಾಗಿ ಬೆಂಗಳೂರು ಅಥವಾ ಮಂಗಳೂರನ್ನು ಆಶ್ರಯಿಸಬೇಕಾಗಿದೆ. ಅದಕ್ಕಾಗಿ ಕರಾವಳಿ ಹಾಗೂ ಮಲೆನಾಡನ್ನು ಕೇಂದ್ರವಾಗಿರಿಸಿ ಕಾರ್ಕಳದಲ್ಲಿ ಪುಸ್ತಕ ಮನೆಯನ್ನು ವಿದ್ಯಾರ್ಥಿಗಳು ಸಾಹಿತ್ಯಾಭಿಮಾನಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕ ಮನೆ ಆರಂಭಗೊಳ್ಳುತ್ತಿದೆ.
ಆನ್ಲೈನ್ ನಲ್ಲಿ ಲಭ್ಯ
ಸಾಹಿತ್ಯ ಪುಸ್ತಕಗಳು ಆನ್ಲೈನ್ ಅಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಆನ್ಲೈನ್ ನಲ್ಲಿ ಕೂಡ ಪಡೆಯಬಹುದು. ಅದರ ಜೊತೆಗೆ ವಿಶೇಷವಾಗಿ ಅಫರ್ ಕೂಡ ಲಭ್ಯವಿದೆ.
ಶೈಕ್ಷಣಿಕ, ಸಾಹಿತ್ಯ ಸದಭಿರುಚಿ ಉಳಿಸಿಕೊಳ್ಳಲು ಸಣ್ಣ ಪ್ರಯತ್ನವಿದು. ಯುವ ಲೇಖಕರಿಗೆ ಸಾಹಿತಿಗಳಿಗೆ ಪುಸ್ತಕ ಓದಲು ಸಕಲ ವ್ಯವಸ್ಥೆ ಕಲ್ಪಿಸುವುದು ನಮ್ಮ ಈ ಯೋಜನೆಯ ಉದ್ದೇಶ. ದೇಶದ ವಿವಿದೆಡೆಗಳಿಂದ ಕನ್ನಡ ಇಂಗ್ಲಿಷ್ ಹಿಂದಿ ಸೇರಿದಂತೆ ವಿವಿಧ ಸಾಹಿತ್ಯ ಪುಸ್ತಕ ಗಳು ಇಲ್ಲಿ ಲಭ್ಯವಿದೆ. ಓದಲು ಲೈಬ್ರೆರಿ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಪುಸ್ತಕ ಮನೆಯ ರೂವಾರಿಗಳಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್.
ಪುಸ್ತಕ ಪ್ರೇಮಿಗಳಿಗೆ ಅವರಿಷ್ಟದ ಪುಸ್ತಕ ಲಭ್ಯ
ಪುಸ್ತಕಗಳ ಮೂಲಕ ವಿವಿಧ ಲೋಕಗಳನ್ನು ಅರಿಯಲು ಸಾಧ್ಯ ವಾಗುತ್ತದೆ. ಪುಸ್ತಕಗಳು ವ್ಯಕ್ತಿತ್ವವನ್ನು ಅರಳಿಸಿಕೊಳ್ಳಲು ಸಹಕಾರಿ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಅತ್ಯುತ್ತಮ ಹವ್ಯಾಸ. ಆದರೆ ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗಿರುವ ಕಾರಣ ಪುಸ್ತಕ ಓದುವ ಅಭಿರುಚಿ ಮೂಲೆಗುಂಪಾಗಿದೆ. ಈ ನಡುವೆಯೂ ಪುಸ್ತಕ ಪ್ರೇಮಿಗಳಿದ್ದಾರೆ.
ಉತ್ತಮವಾದ, ಅಧ್ಯಯನ, ಕ್ರಿಯಾಶೀಲ ಪುಸ್ತಕಗಳನ್ನು ಅವರ ಕೈಗಿಡಬೇಕು. ಓದುಗರಿಗೆ ಸುಲಭವಾಗಿ ಪುಸ್ತಕ ಸಿಗಬೇಕು ಎಂಬ ಮಹಾದಾಸೆಯಿಂದ ಕರಾವಳಿ ಮಲೆನಾಡನ್ನು ಕೇಂದ್ರೀಕರಿಸಿ ಕಾರ್ಕಳದಲ್ಲಿ ಪುಸ್ತಕ ಮನೆ ನಿರ್ಮಾಣವಾಗಲಿದೆ.
ಕ್ರಿಯೇಟಿವ್ ಸಂಸ್ಥೆಯ ಮೂಲಕ “ಪುಸ್ತಕ ಮನೆ ” ಉಡುಪಿ ಜಿಲ್ಲೆ ಕಾರ್ಕಳ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎರಡುವರೆ ಸಾವಿರ ಚದರ ಅಡಿಯ ವಾಣಿಜ್ಯ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿದೆ.
ಏನೇನಿರಲಿದೆ?.. ನೀವೂ ಬುಕ್ ಕೊಡಬಹುದು
ಪುಸ್ತಕ ಮನೆಯಲ್ಲಿ ಸಾಹಿತ್ಯದ ಪುಸ್ತಕಗಳು, ಪಠ್ಯ ಪುಸ್ತಕಗಳು ದೊರಕಲಿವೆ. ಓದಲು ಯೋಗ್ಯವಾಗುವಂತೆ ಹಿರಿದಾದ ಹಾಲ್ ನಿರ್ಮಿಸಲಾಗುತ್ತಿದೆ. ತಮ್ಮ ಬಳಿ ಇರುವ ಸಾಹಿತ್ಯ ಪುಸ್ತಕಗಳನ್ನು ಇಲ್ಲಿ ತೆಗೆದುಕೊಂಡು ಓದಲು ನೀಡಬಹುದಾಗಿದೆ. ಪುಸ್ತಕ ಮನೆ ಎಲ್ಲ ಸಾಹಿತ್ಯ ಪುಸ್ತಕಗಳು ಸೇರಿದಂತೆ ಪಠ್ಯ ಪುಸ್ತಕಗಳು ಕೂಡ ಇಲ್ಲಿ ದೊರಕಲಿವೆ.
ಬುಕ್ ಪಬ್ಲಿಕೇಷನ್ ಕನಸು!
ಪುಸ್ತಕ ಮನೆಯಲ್ಲಿ ಸಾಹಿತ್ಯಾಭಿಮಾನಿಗಳು, ಯುವ ಲೇಖಕರು ಬರೆಯಲು ಬಯಸುವ ಪುಸ್ತಕಗಳನ್ನು ತಾವೇ ಮುದ್ರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಯುವ ಸಾಹಿತ್ಯಾಭಿಮಾನಿಗಳಿಗೆ ಪುಸ್ತಕ ಮುದ್ರಣ ಸೇರಿದಂತೆ ಎಲ್ಲವು ಪುಸ್ತಕ ಮನೆ ಸಹಾಯವಾಗಲಿದೆ.
ವಿದ್ಯಾರ್ಥಿಗಳಿಗೆ ಪುಸ್ತಕ ಪೋಷಕ ಯೋಜನೆ
ಸಾಹಿತ್ಯ ಪುಸ್ತಕ ಜೊತೆಗೆ ವಿದ್ಯಾರ್ಥಿಗಳು ಓದಿ ಕಲಿತು ಮುಗಿಸಿರುವ ಪುಸ್ತಕಗಳನ್ನು ಇಲ್ಲಿ ನೀಡಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಇದಕ್ಕಾಗಿ “ಅಮೃತ ಪುಸ್ತಕ ಯೋಜನೆ ” ಎಂದು ಹೆಸರಿಡಲಾಗಿದೆ.
ಕ್ರಿಯೇಟಿವ್ ಫೌಂಡೇಶನ್ ಹೊಸ ಹೆಜ್ಜೆ
ಕ್ರಿಯೇಟಿವ್ ಫೌಂಡೇಶನ್ ಪುಸ್ತಕ ಮನೆ ಈ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಪುಸ್ತಕ ಸೇವೆ ಮೂಲಕ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲಿದೆ. ಸಂಸ್ಥೆಯ 7 ಮಂದಿ ಈ ಕನಸಿನ ಯೋಜನೆಗಾಗಿ ಶ್ರಮಿಸುತ್ತಿದ್ದಾರೆ. ಪುಸ್ತಕ ಮನೆಯನ್ನು ಓದುಗರ ಕೈಗಿಡಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.
ಪುಸ್ತಕ ಮನೆ ರೂವಾರಿಗಳು
- ವಿದ್ವಾನ್ ಗಣಪತಿ ಭಟ್
- ಡಾ.ಗಣನಾಥ ಶೆಟ್ಟಿ
- ಅಮೃತ್ ರೈ
- ಆದರ್ಶ ಎಂ.ಕೆ
- ಅಶ್ವಥ್ ಎಸ್.ಎಲ್
- ವಿಮಲ್ ರಾಜ್ ಜಿ
- ಗಣಪತಿ ಕೆ. ಎಸ್