ಅಯ್ಯೋ ಕ್ರೂರಿ ಉಗ್ರರು..!
– ಹಮಾಸ್ ಉಗ್ರರಿಂದ 40 ಮಕ್ಕಳ ಶಿರಚ್ಛೇಧ
– 1000 ಮಂದಿ ಇಸ್ರೇಲಿಗರ ಕಗ್ಗೊಲೆ
– ಇಸ್ರೇಲ್ ಬಂದಿಳಿದ ಅಮೆರಿಕ ಪಡೆ!
ಇಸ್ರೇಲ್ ಮೇಲಿ ದಾಳಿಯನ್ನು ಹಮಾಸ್ ಉಗ್ರರು ತೀವ್ರಗೊಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡಾ ಗಾಜಾ ಪಟ್ಟಿಯಲ್ಲಿ ನಿರಂತರ ಏರ್ಸ್ಟೈಕ್ ನಡೆಸುತ್ತಿದ್ದು, ಹಮಾಸ್ ಉಗ್ರರ ಬಿಲಗಳನ್ನು ಹುಡುಕಿ ಹುಡುಕಿ ಧ್ವಂಸ ಮಾಡುತ್ತಿದೆ.
ಇಸ್ರೇಲ್ ಹೆಜ್ಜೆ ಹೆಜ್ಜೆಗೂ ಹಮಾಸ್ ಉಗ್ರರ ಸಂಹಾರ ನಡೆಸುತ್ತಿದೆ, ಆದರೆ ಇಡೀ ಜಗತ್ತೇ ಹಮಾಸ್ ಉಗ್ರರ ಕ್ರೂರಿ ವರ್ತನೆ ಇದೀಗ ಉಗ್ರ ರೂಪ ತಾಳಿದೆ. ಇಸ್ರೇಲ್’ನ ನಿರಂತರ ಪ್ರತಿದಾಳಿಯಿಂದ ಕುದಿಯುತ್ತಿರುವ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಈ ಕುರಿತು ವಿಡಿಯೋಗಳು ಬಹಿರಂಗವಾಗಿದೆ. ಹಮಾಸ್ ಉಗ್ರರು ಇಸ್ರೇಲ್ ಒಳ ನುಗ್ಗಿ ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ 40 ಮಕ್ಕಳ ಶಿರಚ್ಛೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಇಸ್ರೇಲ್ ಸೈನಿಕರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಕಂಡು ಬಂದ ವಿಷಯವೆನೆಂದರೆ ಹಮಾಸ್ ಉಗ್ರರು ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವು ತಿಳಿದು ಬಂದಿದೆ.
ಹಮಾಸ್ ಉಗ್ರರು ಎಳೆ ಹಸಗೂಸು ಸಹಿತ ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಇನ್ನು ಹೆಣ್ಣು ಮಕ್ಕಳು, ಮಹಿಳೆಯರು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾವೇ ಹಮಾಸ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಇಲ್ಲಿಯವರೆಗೆ ಸುಮಾರು 900 ಇಸ್ರೇಲ್ ನಾಗರೀಕರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದು 2,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್ ಉಗ್ರರು ನಡೆಸಿದ ಭೀಕರತೆಯಿಂದ ಕೆರಳಿದ ಅಮೆರಿಕ, ಆಪರೇಶನ್ ಫೋರ್ಸ್ ಇದೀಗ ಇಸ್ರೇಲ್ಗೆ ಬಂದಿಳಿದಿದೆ.