ಯಕ್ಷಿಣಿ ವಿದ್ಯೆ ಹೆಸರಲ್ಲಿ ಹಣ, ಚಿನ್ನ ದೋಚಿದ ಜ್ಯೋತಿಷಿ!
– ಬೆಂಗಳೂರು ಮೂಲದ ಮಹಿಳೆಗೆ ವಂಚನೆ: ಕೇಸ್
ಬೆಳ್ತಂಗಡಿ : ಕಾರು-ಲಾರಿ ಅಪಘಾತ
ಮಲ್ಪೆ: ತಲೆ ಸುತ್ತು ಬಂದು ಮೀನುಗಾರ ಸಾವು
ಉಳ್ಳಾಲ: ವಿವಾಹಿತೆ ಪುಣೆಯಲ್ಲಿ ನಿಗೂಢ ಸಾವು
ಮಂಗಳೂರು : 61 ಲಕ್ಷ ಮೌಲ್ಯದ ಚಿನ್ನ ವಶ!
ಕದ್ರಿ: ಬಸ್ಸಿನಲ್ಲಿ ಮಹಿಳೆಗೆ ನಿಂದನೆ: ಅರೆಸ್ಟ್
ಬೈಲೂರು: ಗೂಡ್ಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ
NAMMUR EXPRESS NEWS
ಉಡುಪಿ: ಯಕ್ಷಿಣಿ ವಿದ್ಯೆಯ ಮೂಲಕ ಸಂಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ. ಬೆಂಗಳೂರು ಮೂಲದ ಪ್ರತಿಭಾ ಅವರಿಗೆ ಆರೋಪಿ ಪ್ರವೀಣ್ ತಂತ್ರಿ ಎಂಬಾತ 5-6 ತಿಂಗಳ ಹಿಂದೆ ಪರಿಚಯವಾಗಿದ್ದಆಕೆಯ ಸಮಸ್ಯೆಗಳನ್ನು ಯಕ್ಷಿಣಿ ವಿದ್ಯೆಯ ಮುಖಾಂತರ ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಹಂತ-ಹಂತವಾಗಿ ಒಂದು ಲಕ್ಷರೂ, ಪಡೆದುಕೊಂಡಿದ್ದಾನೆ. ಬಳಿಕ ಪ್ರತಿಭಾ ಮತ್ತು ಆಕೆಯ ಮಕ್ಕಳು ಹಾಕಿಕೊಳ್ಳುವ ಆಭರಣಗಳನ್ನು ಪೂಜೆ ಮಾಡಿಸಬೇಕೆಂದು ಹೇಳಿ ಮೇ 24ರಂದು ಕಾಸರಗೋಡು ಜಿಲ್ಲೆಯ ದೇವಸ್ಥಾನವೆಂದರಲ್ಲಿ ಸುಮಾರು 20 ಲ.ರೂ. ಮೌಲ್ಯದ ಒಟ್ಟು 340 ಗ್ರಾಂ ತೂಕದ ಚಿನ್ನಾಭರಣಗಳನ್ನು ಮಹಿಳೆಯಿಂದ ಪಡೆದು ಅವುಗಳನ್ನು ವಾಪಸು ಕೊಡದೆ ನಂಬಿಕೆದ್ರೋಹ ಎಸಗಿ ಮೋಸ ಮಾಡಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಚಾರ್ಮಾಡಿ ಘಾಟಿಯಲ್ಲಿ ಅಪಘಾತ
ಬೆಳ್ತಂಗಡಿ : ಚಾರ್ಮಾಡಿ ಘಾಟಿಯ ಎರಡು ಹಾಗೂ ಮೂರನೇ ತಿರುವಿನ ನಡುವೆ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಹಲವು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಘಾಟಿಯಲ್ಲಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಲೆ ಸುತ್ತು ಬಂದು ಮೀನುಗಾರ ಸಾವು
ಮಲ್ಪೆ: ಮೀನು ಗಾರಿಕೆಯ ನಡೆಸುತ್ತಿದ್ದ ವೇಳೆ ಮೀನುಗಾರರೋರ್ವರಿಗೆ ತಲೆ ಸುತ್ತು ಬಂದು ಬಿದ್ದು ಸಾವನ್ನಪ್ಪಿರುವ ಘಟನೆ ಅ. 9ರಂದು ಸಂಭವಿಸಿದೆ. ಜಯ ಬಂಗೇರ (57) ಮೃತಪಟ್ಟವರು. ಬೋಟಿನಲ್ಲಿ ದುಡಿಯುತ್ತಿದ್ದ ಅವರು ಸೋಮವಾರ ಸಂಜೆ ಇತರ 32 ಮಂದಿ ಜನರೊಂದಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಲೆ ತಿರುಗಿದ ಹಾಗೆ ಆಗಿ ಬೀಳುತ್ತಿರುವ ಸಮಯದಲ್ಲಿ ಪಕ್ಕದಲ್ಲಿದ್ದ ರಮೇಶ ಬಂಗೇರ ಅವರು ಜಯ ಬಂಗೇರ ಅವರ ಕೈಯನ್ನು ಹಿಡಿದು ಮೇಲೆತ್ತಿ ಬೋಟಿನಲ್ಲಿ ಮಲಗಿಸಿದರು. ತತ್ಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಆದಾಗಲೇ ಮೃತ ಪಟ್ಟಿರುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವ ವಿವಾಹಿತೆ ಅನುಮಾನಸ್ಪದ ಸಾವು
ಉಳ್ಳಾಲ : ತೌಡುಗೋಳಿ ನಿವಾಸಿ ನಾಲ್ಕು ತಿಂಗಳ ಹಿಂದೆಯಷ್ಟೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠ ಎಂಬಲ್ಲಿ ನಡೆದಿದೆ. ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಎಂಬವರ ಪುತ್ರಿ ಸುಜಾತ ಶೆಟ್ಟಿ (38) ಎಂಬವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತೆ. ಪಜೀರು ಪಾನೇಲ ನಿವಾಸಿ ಪುಣೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಸುರೇಶ್ ಕೈಯ್ಯ ಎಂಬವರಿಗೆ ನಾಲ್ಕು ತಿಂಗಳ ಹಿಂದೆಯಷ್ಟೇ ಸುಜಾತಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. 9.8 ರಂದು ಸುಜಾತ ಮೃತದೇಹ ಭಾರತೀಯ ವಿದ್ಯಾಪೀಠದಲ್ಲಿರುವ ಮನೆಯೊಳಗೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಶವಮಹಜರಿಗೆ ಕಳುಹಿಸಲಾಗಿತ್ತು. ಅ.9 ರಂದು ತೌಡುಗೋಳಿ ಸಮೀಪ ಸುಜಾತ ಅವರ ಅಂತಿಮ ಸಂಸ್ಕಾರ ನೆರವೇರಿದ್ದು, ಮನೆಮಂದಿ ಸುರೇಶ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಸ್ಸಿನಲ್ಲಿ ಮಹಿಳೆಗೆ ನಿಂದನೆ: ಕಂಡಕ್ಟರ್ ಅರೆಸ್ಟ್!
ಕದ್ರಿ: ಬಸ್ಸಿನಲ್ಲಿ ಮಹಿಳೆಗೆ ನಿಂದನೆ ಮಾಡಿ ಕಂಡಕ್ಟರ್ ಅರೆಸ್ಟ್ ಆದ ಘಟನೆ ನಡೆದಿದೆ. ದೇರಳಕಟ್ಟೆ ಸಮೀಪದ ಜಲಾಲ್ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವಕೀಲೆಯಾಗಿದ್ದು, ಸೋಮವಾರ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ತಾನು ಬಸ್ಸಿಗೆ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ. ಈ ವೇಳೆ ಕೆಳಗೆ ಬೀಳುವಂತಾಗಿ ಬೊಬ್ಬೆ ಹಾಕಿದೆ. ಆದರೂ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ಈ ವೇಳೆ ಬಸ್ ಕಂಡೆಕ್ಟರ್ ನನ್ನ ಕೈ ಹಿಡಿದೆಳೆದು ನಿಮಗೆ ಬೇಗ ಬಸ್ಸಿಗೆ ಹತ್ತಲು ಆಗುವುದಿಲ್ಲವಾ? ಬಿದ್ದು ಸಾಯುತ್ತೀಯಾ? ಎಂದು ಬೈದಿದ್ದಾನೆ. ಇದಕ್ಕೆ ನಾನು ಪ್ರತಿರೋಧ ತೋರಿದಾಗ ನಾನು ಬಸ್ಸಿನಿಂದ ಇಳಿಯುವವರೆಗೆ ನನಗೆ ಅವಾಚ್ಯ ಶಬ್ದದಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿದ್ದಾನೆ ಎಂದು ವಕೀಲೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಬಸ್ ಚಾಲಕ ಮತ್ತು ಕಂಡೆಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗೂಡ್ಸ್ ರೈಲಿನಲ್ಲಿದ್ದ ಲಾರಿಯೊಂದರಲ್ಲಿ ಆಕಸ್ಮಿಕ ಬೆಂಕಿ
ಬೈಂದೂರು : ಮುಂಬೈ ಕೋಲಾಡ್ ನಿಂದ ಮಂಗಳೂರು ಸುರತ್ಕಲ್ ಕಡೆಗೆ ಲಾರಿಗಳನ್ನು ಹೊತ್ತು ಸಾಗುತ್ತಿದ್ದರೋ ರೋ ಗೂಡ್ಸ್ ರೈಲು ಮಂಗಳವಾರ ಮುಂಜಾನೆ ಬೈಂದೂರು ತಾಲೂಕಿನ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಬಂದಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಲಾರಿಯೊಂದರಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿದ ಸಿಬಂದಿ ತಕ್ಷಣ ಗೂಡ್ಸ್ ರೈಲು ನಿಲ್ಲಿಸಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಬೈಂದೂರು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದ್ದಾರೆ. ಲಾರಿಯೊಳಗಿದ್ದ ತಿಂಡಿ ತಿನಿಸುಗಳು ಭಾಗಶಃ ಸುಟ್ಟು ಹೋಗಿದೆ