ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್: ಓರ್ವ ಅರೆಸ್ಟ್!
– ಸಿಎಂ ಸಿದ್ದರಾಮಯ್ಯ ಬಗ್ಗೆ ಹಾಕಿದ್ದೇನು ಗೊತ್ತಾ..?
– ಮಂಗಳೂರು: ಸ್ಕಿಡ್ ಆಗಿ ಬಿದ್ದ ಯುವಕನ ಮೇಲೆ ಹಾರಿದ ಕಾರು
ಮಂಗಳೂರು : ಮರಳು ಕದ್ದವರು ಅಂದರ್
ಮಣಿಪಾಲ: ಪಟಾಕಿ ದಾಸ್ತಾನು ಮೇಲೆ ದಾಳಿ: ಪಟಾಕಿ ವಶ
NAMMUR EXPRESS NEWS
ಮಂಗಳೂರು: ಸ್ಕಿಡ್ ಆಗಿ ಬಿದ್ದ ಆಕ್ಟಿವಾ ಸ್ಕೂಟರ್ ಸವಾರನ ಮೇಲೆ ಕಾರೊಂದು ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಕುಂಟಿಕಾನ ಬಳಿ ಬುಧವಾರ ರಾತ್ರಿ ಸಂಭವಿಸಿದೆ. ಕಾವುರು ನಿವಾಸಿ ಕೌಶಿಕ್ (21) ಮೃತ ದುರ್ದೈವಿ. ಎಜೆ ಆಸ್ಪತ್ರೆಯಿಂದ ಕೌಶಿಕ್ ಸ್ಕೂಟರ್ ನಿಂದ ಹೊರ ಬರುತ್ತಿರುವಾ ಆಟೋ ರಿಕ್ಷಾ ಒಂದು ಕೌಶಿಕ್ ಸ್ಕೂಟರ್ ಗೆ ತಾಗಿದೆ, ಈ ವೇಳೆ ಕೌಶಿಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ ಬಿದ್ದಿದ್ದಾರೆ. ಇದೇ ಸಂದರ್ಭ ಕೌಶಿಕ್ ಮೇಲೆ ವೇಗವಾಗಿ ಬಂದ ಕಾರೊಂದು ಹರಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರುಳು ಸಾಗಾಟ ಮಾಡುತ್ತಿದ್ದ ಇಬ್ಬರು ಅಂದರ್
ಮಂಗಳೂರು: ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ಮಿನಿ ಟಿಪ್ಪರ್ ಲಾರಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಫ್ರಿದ್ ಮತ್ತು ಅಬ್ದುಲ್ ಸತ್ತಾರ್ ಎಂದು ಗುರುತಿಸಲಾಗಿದೆ. ಮಿನಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 10 ಟನ್ ಮರಳನ್ನು ಆರೋಪಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂತು. ತಕ್ಷಣ 11 ಸಾವಿರದ ಮೌಲ್ಯದ ಮರಳು ಮತ್ತು 5 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್
ಬಂಟ್ವಾಳ: ಮುಖ್ಯಮಂತಿ ಸಿದ್ದರಾಮಯ್ಯ ಅವರನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಸೋಮನಗೌಡ ಎಂಬಾತ ಜೈ ಕರ್ನಾಟಕ ಎಂಬ ವಾಟ್ಸ ಆಪ್ ಗ್ರೂಪ್ ನಲ್ಲಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿ ಚಿತ್ರಿಸಿ ಹರಿಯಬಿಟ್ಟಿದ್ದಾನೆ ಎಂದು ಆರೋಪಿಸಿ ಪಾಣೆ ಮ೦ಗಳೂರು ಬ್ಲಾಕ್ ಕಾಂಗ್ಸ್ ಪ್ರಧಾನ ಕಾರ್ಯದರ್ಶಿ ಮಹ್ಮದ್ ನಂದಾವರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಣಿಪಾಲ: ಅಕ್ರಮ ಪಟಾಕಿ ದಾಸ್ತಾನು ಮೇಲೆ ರೈಡ್
ಮಣಿಪಾಲ: ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ ಲಕ್ಷಾಂತರ ರೂ. ಮೌಲ್ಯದ ಪಟಾಕಿಯನ್ನು ಮಣಿಪಾಲ ಪೊಲೀಸರು ವಶಪಡಿಸಿಕೊಂಡ ಘಟನೆ ಮಣಿಪಾಲ ಸಮೀಪದ ಪರ್ಕಳದಲ್ಲಿ ನಡೆದಿದೆ. ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದ ತಂಡ ಪರ್ಕಳ ಮುಖ್ಯಪೇಟೆಯ ದಿನಸಿ ಅಂಗಡಿಯ ಹಿಂಬದಿಯಲ್ಲಿದ್ದ ಶಿವಪ್ರಸಾದ್ ಠಾಕೂರು ಎಂಬವರ ಗೋಡಾನ್ಗೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 760 ಕೆ.ಜಿ. ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಲಾದ ಪಟಾಕಿ ಮೌಲ್ಯ ಸುಮಾರು 1.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.ಶಿವಪ್ರಸಾದ್ ಠಾಕೂರು ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.