ನಾಡ ಬಾಂಬ್ ಸ್ಫೋಟಕ್ಕೆ ನಾಯಿ ಛಿದ್ರ ಛಿದ್ರ!
– ಹಂದಿ ಶಿಕಾರಿ ಮಾಡಲು ಇಟ್ಟಿದ್ದ ನಾಡ ಬಾಂಬ್
– ಕಾಪು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಮಹಿಳೆ!
– ಪುತ್ತೂರು: ಬೈಕಿಗೆ ಕಾರು ಡಿಕ್ಕಿ: ಎಸ್ಕೇಪ್
– ಉಡುಪಿ: ತಾಯಿ, ಇಬ್ಬರು ಮಕ್ಕಳು ನಾಪತ್ತೆ
– ಕಾಸರಗೋಡು: ಮೊಬೈಲ್ ಮಾತಾಡಬೇಡ ಎಂದಿದ್ದಕ್ಕೆ ಹಲ್ಲೆ
– ಕಾಪು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಮಹಿಳೆ!
NAMMUR EXPRESS NEWS
ಪುತ್ತೂರು: ಆಕ್ಟಿವಾ ಸ್ಕೂಟರಿಗೆ ಮಾರುತಿ 800 ಕಾರು ಡಿಕ್ಕಿಯಾಗಿ ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ ಹಾಗೂ ಚಿತ್ರ ಗಾಯಗೊಂಡಿರುವ ಘಟನೆ ನಡೆದಿದೆ. ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ಸಂದರ್ಭ ಕುಂಬ್ರ ಸಮೀಪ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತಕ್ಕೆ ಸ್ಕೂಟರ್ ಪಲ್ಟಿಯಾಗಿದ್ದು ಕಾರು ಚಾಲಕ ತನ್ನ ಕಾರನ್ನು ನಿಲ್ಲಿಸದೆ ಎಸ್ಕೆಪ್ ಆಗಿದ್ದಾನೆಂದು ತಿಳಿದು ಬಂದಿದೆ. ಗಾಯಾಳುಗಳಿಬ್ಬರೂ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಡು ಹಂದಿಗಳಿಗೆ ಇಟ್ಟಿದ್ದ ನಾಡಾ ಬಾಂಬ್ ನಾಯಿಯನ್ನೇ ಕೊಂದಿತು!
ಬ್ರಹ್ಮಾವರ: ಕಚ್ಚಾ ನಾಡಾ ಬಾಂಬ್ ಸಿಡಿದು ಸಾಕು ನಾಯಿ ಮೃತಪಟ್ಟ ಘಟನೆ ಮಂದಾರ್ತಿ ಸಮೀಪದ ಹಾಡಿಯಲ್ಲಿ ನಡೆದಿದೆ. ಕಾಡು ಹಂದಿಗಳನ್ನು ಕೊಲ್ಲಲು ಬಾಂಬ್ಗಳನ್ನು ಇಟ್ಟು ಅದರ ಮೇಲೆ ಸೊಪ್ಪು ಮುಚ್ಚಿಡಲಾಗಿತ್ತು ಎನ್ನಲಾಗಿದೆ. ಪರಿಸರದಲ್ಲಿ 17 ಬಾಂಬ್ ಪತ್ತೆಯಾಗಿದೆ. ಬುಧವಾರ ಸಂಜೆ ಹಾಡಿಯಲ್ಲಿ ಪಟಾಕಿ ಸಿಡಿಸಿದ ಶಬ್ದ ಕೇಳಿಸಿತ್ತು. ಗುರುವಾರ ಬೆಳಗ್ಗೆ ನೋಡುವಾಗ ನಾಯಿ ವಿಕಾರವಾಗಿ ಮೃತಪಟ್ಟಿರುವುದು ಕಂಡು ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ, ಇಬ್ಬರು ಮಕ್ಕಳು ನಾಪತ್ತೆ!
ಉಡುಪಿ: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಾಸ್ ಬಾರದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ನಾಪತ್ತೆಯಾಗಿರುವ ಮಹಿಳೆಯನ್ನು ಪುತ್ತೂರು ಗ್ರಾಮದ ಕೊಡಂಕೂರು ನಿವಾಸಿ ಅಕ್ಷತಾ , ಹೆಣ್ಣು ಮಕ್ಕಳಾದ ವಿದ್ಯಾಶ್ರೀ , ಮಲ್ಲು ಎನ್ನಲಾಗಿದೆ. ಅಕ್ಷತಾ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ಆ.6ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸ್ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಎಂದು ದೂರು ದಾಖಲಾಗಿದೆ.
ಮೊಬೈಲ್ ನಲ್ಲಿ ಮಾತು ಪ್ರಶ್ನಿಸಿದ್ದಕ್ಕೆ ತಾಯಿ ಮೇಲೆ ಹಲ್ಲೆ
ಕಾಸರಗೋಡು: ಮಧ್ಯರಾತ್ರಿ ಕಳೆದರೂ ಮೊಬೈಲ್ ಫೋನ್ ನಲ್ಲೇ ತಲ್ಲೀನನಾಗಿದ್ದ ಮಗನನ್ನು ಪ್ರಶ್ನಿಸಿದ ತಾಯಿಯನ್ನು ಮಗ ಮರದ ಹಲಗೆಯಿಂದ ತಲೆಗೆ ಹೊಡೆದು ಕೊಲೆಯತ್ನ ನಡೆಸಿದ ಘಟನೆ ನಡೆದಿದೆ. ನೀಲೇಶ್ವರ ಕಣಿಚ್ಚಿರಕಾವುನಲ್ಲಿ ರಾಜನ್ ಅವರ ಪತ್ನಿ ರುಕ್ಕಿಣಿ(64) ಅವರು ಗಂಭೀರ ಗಾಯಗೊಂಡಿದ್ದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪುತ್ರ ಸುಚಿತ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಮಹಿಳೆ!
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿಯಲ್ಲಿ ಬಸ್ ಇಳಿಯುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ ಉಳಿಯಾರಗೋಳಿ ಕೋತಲಕಟ್ಟೆ ನಿವಾಸಿ ಸುಲೋಚನಾ ಶೆಟ್ಟಿ (61) ಗಾಯಾಳು ಮಹಿಳೆ. ಮಂಗಳೂರು – ಉಡುಪಿ ರಸ್ತೆಯಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಸರ್ವೀಸ್ ಬಸ್ ಉಳಿಯಾರಗೋಳಿಯಲ್ಲಿ ನಿಂತಿದ್ದು ಈ ವೇಳೆ ಪ್ರಯಾಣಿಕರು ಬಸ್ಸಿನಿಂದ ಕೆಳಗೆ ಇಳಿಯುತ್ತಿರುವಾಗಲೇ ಬಸ್ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದನು. ಈ ಪರಿಣಾಮ ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದ ಸುಲೋಚನಾ ಶೆಟ್ಟಿ ಅವರು ರಸ್ತೆಗೆ ಬಿದ್ದು, ಅವರ ಮುಖಕ್ಕೆ ಗಂಭೀರ ಗಾಯಗಳುಂಟಾಗಿವೆ. ಗಾಯಾಳು ಮಹಿಳೆಯನ್ನು ಬಸ್ ಚಾಲಕ ಮತ್ತು ಸಾರ್ವಜನಿಕರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.