ಹಾವು ಹಿಡಿಯುವ ವೇಳೆಯೇ ಉರಗತಜ್ಞನಿಗೆ ಹಾವು ಕಚ್ಚಿತು!
– ಹೊನ್ನಾವರದಲ್ಲಿ ನಡೆದ ಘಟನೆ: ಆಸ್ಪತ್ರೆಗೆ ದಾಖಲು
– ಗಂಗೊಳ್ಳಿ: ಗೋಹತ್ಯೆ ಮಾಡುತ್ತಿದ್ದವರ ಮೇಲೆ ದಾಳಿ
– ಕಾಪು: ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಳವು
NAMMUR EXPRESS NEWS
ಹೊನ್ನಾವರ: ಮನೆಯೊಂದರಲ್ಲಿ ಬಂದಿದ್ದ ನಾಗರ ಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದ ಪರಿಣಾಮ ಆಸ್ಪತ್ರೆಗೆ ದಾಖಲಿಸಿದ ಘಟನೆ ಹೊನ್ನಾವರ ತಾಲೂಕಿನ ಗುಂಡಬಾಳ ಹತ್ತಿರ ಸಂಭವಿಸಿದೆ. ಹಾವುಕಚ್ಚಿ ಗಂಭೀರ ಸ್ಥಿತಿಯಲ್ಲಿರುವ ಉರಗತಜ್ಞ ಅಬುತಲಾ ಎಂದು ತಿಳಿದು ಬಂದಿದೆ. ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ನಾಗರಹಾವು ಹೋಗದೆ ಇರುವುದರಿಂದ ಉರಗತಜ್ಞ ಅಬು ತಲಾ ಇವರಿಗೆ ಮಾಹಿತಿ ನೀಡಿದರು. ಅದರಂತೆ ಹಾವು ಹಿಡಿಯಲು ಮುಂದಾದ ಉರಗತಜ್ಞರು ಹಾವನ್ನು ಹಿಡಿಯುವಾಗ ಆಕಸ್ಮಿಕವಾಗಿ ಕೈ ಭಾಗಕ್ಕೆ ಹಾವು ಕಚ್ಚಿದೆ. ಆದರು ಹಾವನ್ನು ಹಿಡಿದ್ದಾರೆ ನಂತರ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಸ್ಥಿತಿ ಗಂಭೀರವಾಗಿರುವುದರಿಂದ ಕೂಡಲೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಸ್ಥಿತಿ ಗಂಭೀರವಾಗಿದ್ದು, ಗುಣಮುಖ ಆಗಲಿ ಎಂದು ತಾಲೂಕಿನ ಜನತೆಯು ಪ್ರಾರ್ಥಿಸುತ್ತಿದ್ದಾರೆ.
ಬೋಟ್ ಟೆಂಡರಿನಲ್ಲಿ ಭ್ರಷ್ಟಾಚಾರ ಆರೋಪ!
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಟೆಂಡರ್ ನಲ್ಲಿ ಅಕ್ರಮ ಆರೋಪಗಳ ಬಗ್ಗೆ ಕೇಳಿ ಬರುತ್ತಿದೆ. ಅಧಿಕಾರಿಗಳು ಕೆಲವು ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹೊರ ಜಿಲ್ಲಾ ಗುತ್ತಿಗೆದಾರರಿಗೆ ಬೇಕಾಗು ರೀತಿಯಲ್ಲಿ ಬದಲಾಯಿಸಿ ಟೆಂಡರ್ ಪಡೆಯಲು ಸಹಕರಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸುವರ್ಣ ಆರೋಪಿಸಿದ್ದಾರೆ.
ಇನ್ನು ಪ್ರಾರಂಭವಾಗದ ಮಲ್ಪೆ ಬೀಚ್ ನಲ್ಲಿ ಜಲ ಕ್ರೀಡಾ ಚಟುವಟಿಕೆಗಳು, ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವ ಬೋಟ್ ಇನ್ನು ಪ್ರಾರಂಭವಾಗದೆ ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದು ಸೆಪ್ಟೆಂಬರ್ 15ಕ್ಕೆ ಪ್ರಾರಂಭವಾಗಬೇಕಾಗಿದ್ದ ಚಟುವಟಿಕೆಗಳು, ಅ. 5ಕ್ಕೆ ಟೆಂಡರ್ ನೀಡಿದ್ದು. ಟೆಂಡರ್ ಪಡೆದವರಲ್ಲಿ ಬೇಕಾದ ಬೋಟ್, ಪ್ಯಾರಸೈಕ್ಲಿಂಗ್, ಮುಂತಾದ ಸಲಕರಣೆಗಳು ಲಭ್ಯವಿಲ್ಲದಿರುವ ಕಾರಣ ಹತ್ತು ದಿನ ಕಳೆದರು ಯಾವುದೇ ಚಟುವಟಿಕೆ ಆರಂಭವಾಗಿದೆ ಇರುವುದರಿಂದ ಟೆಂಡರ್ ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಗೋಹತ್ಯೆ ಮಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ
ಗಂಗೊಳ್ಳಿ: ನಾಡ ಗ್ರಾಮದ ಬಳಿ ಜಾನುವಾರು ವಧೆ ಮಾಡಿ ಮಾಂಸ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ಹಳೆಯ ಪಾಳುಬಿದ್ದ ಮನೆಯಲ್ಲಿ ಗೋಮಾಂಸ ಮಾಡುತ್ತಿದ್ದ ಶೀನ, ಗಜೇಂದ್ರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರು ಸುಧೀರ್ ಎಂಬಾತನ ಜತೆ ಸೇರಿ ಜಾನುವಾರು ವಧೆ ಮಾಡಿರುವುದಾಗಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.
ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಳವು
ಕಾಪು: ಉಳಿಯಾರಗೋಳಿ ದಂಡತೀರ್ಥ ಶಾಲೆ ಬಳಿಯ ಮನೆಯೊಂದರಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದನ್ನು ಕಳ್ಳರು ಕದ್ದೊಯ್ದ ಘಟನೆ ಅ. 13ರಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಪ್ರವೀಣ್ ಎಂಬವರ ಮಗ ತೇಜಸ್ ಕೆಎ 20 ಇಡಿ 6652 ಸಂಖ್ಯೆಯ ಹೋಂಡಾ ಆಕ್ಟಿವಾ ಸ್ಕೂಟಿಯನ್ನು ಅ. 12ರಂದು ರಾತ್ರಿ ತಮ್ಮ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು ಅ. 13ರಂದು ಬೆಳಿಗ್ಗೆ ಬಂದು ನೋಡುವಾಗ ಕಾಣೆಯಾಗಿತ್ತು. ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಹೋಂಡಾ ಆಕ್ಟಿವಾ ಸ್ಕೂಟಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಹಿಳಿಸಿದ್ದಾರೆ