ಜಲಪಾತ ಸಿನಿಮಾಕ್ಕೆ ಮಲೆನಾಡಲ್ಲಿ ರೆಸ್ಪಾನ್ಸ್!
– ಮಲೆನಾಡಿನ ಸೊಗಸನ್ನು ಹಿಡಿದಿಡುವಲ್ಲಿ ಯಶಸ್ವಿ
– ಮಲೆನಾಡ ಕಲಾವಿದರೆ ಹೆಚ್ಚು: ಯಾರು ಯಾರು ಇದ್ದಾರೆ..ಇಲ್ಲಿ ನೋಡಿ!
– ಮಲೆನಾಡ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ
NAMMUR EXPRESS NEWS
ರಮೇಶ್ ಬೇಗಾರ್ ನಿರ್ದೇಶಕರಾಗಿ, ರವೀಂದ್ರ ತುಂಬರಮನೆ ನಿರ್ಮಾಪಕರಾಗಿರುವ ಜಲಪಾತ ಸಿನಿಮಾಕ್ಕೆ ಮಲೆನಾಡಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯದ ಎಲ್ಲೆಡೆ ಶುಕ್ರವಾರ ತೆರೆ ಕಂಡ ಸಿನಿಮಾ ಮಲೆನಾಡಿನ ಸೊಗಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಮಲೆನಾಡ ಕಲಾವಿದರೆ ಹೆಚ್ಚು ನಟನೆ ಮಾಡಿ ಸಿನಿಮಾದ ಎಲ್ಲಾ ಭಾಗದಲ್ಲೂ ಕೆಲಸ ಮಾಡಿದ್ದಾರೆ. ಮಲೆನಾಡ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದೆ.
ವಿಮರ್ಶೆ ಹೇಗಿದೆ…?
ಪರಿಸರ ಕಾಳಜಿಯ ಜೊತೆಗೆ ಸಂಬಂಧಪಟ್ಟ ಸೂಕ್ಷ್ಮತೆ, ನವಿರಾದ ಪ್ರೇಮ, ಮಲೆನಾಡ ಬದುಕನ್ನು ಸಹಜವಾಗಿ ಒಳಗೊಂಡ ಪ್ರೇಕ್ಷಕರನ್ನು ಒಳಗೊಳಿಸುವ ಸಿನಿಮಾ ಜಲಪಾತ. ಇಡೀ ಚಿತ್ರದಲ್ಲಿ ಮಲೆನಾಡ ಬದುಕಿನ ಸ್ಥಿತ್ಯಂತರವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಲೆನಾಡಿನವರೆ ಆದ ನಿರ್ದೇಶಕ ರಮೇಶ್ ಬೇಗಾರ್ ಮಾಡಿದ್ದಾರೆ. ಆದರೆ ಅಲ್ಲಲ್ಲಿ ಬರುವ ಭಾಷಣದಂತ ಮಾತುಗಳಿಂದ ಚಿತ್ರಕ್ಕೆ ಡಾಕ್ಯುಮೆಂಟರಿ ಸ್ಪರ್ಶ ನೀಡಿದಂತೆ ಅನಿಸುತ್ತದೆ.
ಕಥೆಯ ವಿಚಾರಕ್ಕೆ ಬಂದರೆ ಝರಿ, ಜಲಪಾತಗಳ ಮಧ್ಯೆ ಇರುವ ಅಪ್ಪಟ ಮಲೆನಾಡು, ಅರಣ್ಯ ಒತ್ತುವರಿ, ಕಾಡು ಕಡಿದು ಆಕೆಶಿಯ ತೋಪು ಮಾಡುವ ದುರಲೋಚನೆ, ಮಲೆನಾಡ ಗಿಡ್ಡ ತಳಿ ಹಸುಗಳ ಕಣ್ಮರೆ, ಪ್ಲಾಸ್ಟಿಕ್ ರುದ್ರನರ್ತನ ಇತ್ಯಾದಿ ಎಲ್ಲಾ ಹಳ್ಳಿಗಳಲ್ಲೂ ಎದುರಿಸುವ ಸಮಸ್ಯೆಗಳು ಇಲ್ಲೂ ಇವೆ.
ಈ ದುರಂತವನ್ನು ಕೆಣ್ಣೆದುರು ತರುತ್ತದೆ. ಹಿತ್ತಲುಗಳಲ್ಲಿ ಇನ್ನು ಉಳಿದುಕೊಂಡಿರುವ ಮಾನವ ಪ್ರೀತಿ, ಸಂಬಂಧಗಳ ಗಟ್ಟಿತನವನ್ನು ಸಹಜವಾಗಿ ಕಟ್ಟಿಕೊಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಜೊತೆಗೆ ಆಶಾವಾದವು ಇದೆ. ಸಾದ್ವಿನಿ ಕೊಪ್ಪ ಸಂಗೀತ ನೀಡಿರುವ ಹಾಡುಗಳು ಮನಸ್ಸಲ್ಲಿ ಉಳಿಯುತ್ತದೆ. ಶಿಶಿರ ಅವರ ಸಿನಿಮಾಟೊಗ್ರಾಫಿ ಮಲೆನಾಡಿನ ಸೊಗಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಸಿನಿಮಾ ನೋಡಿದಾಗ ಮಲೆನಾಡಲ್ಲಿ ಇದ್ದು ಬಂದಂಥ ಅನುಭವ. ಅಲ್ಲಿಗೆ ಈ ಪ್ರಯತ್ನ ಯಶಸ್ವಿ ಅನ್ನುವುದರಲ್ಲಿ ಎರಡು ಮಾತಿಲ್ಲ.
ಮಲೆನಾಡ ಕಲಾವಿದರ ಸಮಾಗಮ!
ಮಲೆನಾಡು ಭಾಗದ ಹವ್ಯಾಸಿ ರಂಗಭೂಮಿ ಕಲಾವಿದರು ಬಣ್ಣ ಹಚ್ಚಿದ ಜಲಪಾತ ಚಲನಚಿತ್ರ ಇದಾಗಿದ್ದು,ಇದೇ ಮೊದಲಬಾರಿಗೆ ಪೂರ್ಣ ಪ್ರಮಾಣದಲ್ಲಿ ಮಲೆನಾಡು ಭಾಷೆಯನ್ನು ಚಿತ್ರದಲ್ಲಿ ಬಳಸಿದ್ದು ಬಹುತೇಕ ಆಯಾ ಕಲಾವಿದರೇ ಡಬ್ಬಿಂಗ್ ನೀಡಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ. ಎಲ್. ರವಿಕುಮಾರ್, ಸಾರ್ವಜನಿಕ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ಎ. ಎಸ್. ನಯನ, ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯೆ ರೇಖಾ ಪ್ರೇಮ್ ಕುಮಾರ್ , ನೀನಾಸಂ ಪದವೀಧರ ನಟರಾಜ್ ರಾವ್ ತೋರಣ ಗದ್ದೆ , ಅರೆಹಳ್ಳ ರಾಧಾಕೃಷ್ಣ , ನೃತ್ಯ ಕಲಾವಿದೆ ಸುನೀತಾ ನವೀನ್ , ಶುದ್ಧ ಸಾವೇರಿ ಖ್ಯಾತಿಯ ವೈಶಾಲಿ ನಟಶೇಖರ್ ,
ಸ್ವಾತಿ ಶಶಿ ಭೂಷಣ್ , ಜ್ಯೋತಿ ಕಾಮತ್ , ಜನಪದ ಕಲಾವಿದ ವಿಶ್ವನಾಥ್ ಶೆಟ್ಟಿ ಗಂಡಘಟ್ಟ , ಹಿರಿಯ ರಂಗ ಕಲಾವಿದರಾದ ಎಸ್ ಎನ್ ವಿಶ್ವನಾಥ್ , ಸಸಿಮನೆ ಕೃಷ್ಣಮೂರ್ತಿ, ನಾಗೇಶ್ ಕಾಮತ್ , ಚಗತೆ ರಾಮದಾಸ್ ,ಉಮೇಶ್ ಕಾಸರವಳ್ಳಿ, ಡಾ ಉದಯಶಂಕರ್ , ಹರ್ಷ ಜೆ ಎಮ್ , ರಾಘವೇಂದ್ರ ಭಟ್ , ಟಿ.ಕೆ.ಮಂಜುನಾಥ್ , ಟಿ ವಿ ಶ್ರೀಮತಿ , ಪ್ರಸನ್ನ ಕೊಪ್ಪ , ಉದ್ಯಮಿ, ಸುಜನ ಟ್ರಸ್ಟ್ ಅಧ್ಯಕ್ಷರಾದ ಎಂ ಆರ್ ಸುರೇಶ್, ಲೇಖಕ ಚಿದಾನಂದ ಹೆಗ್ಗಾರ್ , ಯುವ ಕಲಾವಿದರಾದ ಕಾರ್ತಿಕ್ , ಅಭಿಷೇಕ್ , ದೀಪಕ್ , ರಮಂತ , ನಂದೀಪ , ದಿಲೀಪ್ ಹೊಕ್ಕಳಿಕೆ , ಸಂತೋಷ್ ಚಗತೆ , ಹರಿಪ್ರಸಾದ್ ಚಗತೆ , ಶಂಕರ್ ವೈಕುಂಠಪುರ , ತೀರ್ಥಹಳ್ಳಿ ಯ ಹಿರಿಯ ರಂಗ ಕಲಾವಿದ ಚಂದ್ರಶೇಖರ ತುಂಬರಮನೆ ,ರಂಗ ಕಲಾವಿದ , ನೀನಾಸಂ ಪದವೀಧರ ಪ್ರಶಾಂತ್ ಶೆಟ್ಟಿ ರಂಗ ಕಲಾವಿದ ,
ಅತಿಥಿನಟರಾಗಿ ಶಂಕರಮೂರ್ತಿ ( ಕಿರಿಕ್ ಪಾರ್ಟಿ ಖ್ಯಾತಿಯ ) ರಾಘವೇಂದ್ರ ಅಂಬುತೀರ್ಥ , ಮಧು ಕವಿಲುಕೊಡಿಗೆ ವಿನಯ್ ರೇ ಆರುಶ್ , ರತ್ನಾಕರ ತಾಳ್ಕೋಡು ,ಸ್ಕಂದ ಶಂಕರ , ಆರುಣಿ , ಮಲೆನಾಡು ಮೂಲದ ಗಾನಮೂರ್ತಿ ಸಂಪಗೋಡು , ರಶ್ಮಿ ಹೇರ್ಳೆ , ಯಶ್ವಂತ್ , ಪ್ರದೀಪ ಬಾಳೆಹೊನ್ನೂರು ,ಸುಧಾಕರ ಶೆಟ್ಟಿ ಹೊನ್ನೇಕೆರೆ , ವಿಜಯಲಕ್ಷ್ಮ್ಮೀ , ದತ್ತಾತ್ರಿ ಎಂ ಎನ್ , ಶಶಾಂಕ್ , ಇರ್ಫಾನ್ ಮತ್ತು ಗೆಳೆಯರು ವೆಂಕಟೇಶ್ ಭಟ್ ತಾಳ್ಕೋಡು , ರೂಪೇಶ್ , ಅಭಿ ,ಮತ್ತು ಕೊಪ್ಪ – ಹರಿಹರ ಪುರದ ರೋಟರಿ ಸದಸ್ಯರು ಅಭಿನಯಿಸಿದ್ದಾರೆ. ಶುಕ್ರವಾರ “ಜಲಪಾತ’ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿದ್ದು ಸಿನಿಮಾ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.