ಬಸ್ಸಲ್ಲಿ ಕೋಳಿ ಮಾಂಸ ತಂದಿದ್ದಕ್ಕೆ ಬಸ್ಸೇ ಠಾಣೆಗೆ ಹೋಯ್ತು!
– ಬಂಟ್ವಾಳ ವ್ಯಾಪ್ತಿಯಲ್ಲಿ ನಡೆದ ಘಟನೆ.. ಏನಿದು?
ಪುತ್ತೂರು: ಈಜಲು ಹೋದ ಬಾಲಕ ಕಣ್ಮರೆ!
ದಕ್ಷಿಣ ಕನ್ನಡ: ಉಡ ಕೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದವನಿಗೆ ಕಾದಿತ್ತು ಶಾಕ್!
ಬಂಟ್ವಾಳ: ಕೂಲಿ ಕಾರ್ಮಿಕನ ತಲೆ ಮೇಲೆ ಸಿಮೆಂಟ್ ಕಂಬ ದೂಡಿ ಹಾಕಿ ಹಲ್ಲೆ: ಕೇಸ್ ದಾಖಲು
NAMMUR EXPRESS NEWS
ಬಸ್ಸಿನೊಳಗೆ ಕೋಳಿ ಮಾಂಸ ತಂದ ಪ್ರಯಾಣಿಕನಿಗೆ ಕಂಡಕ್ಟರ್ ಅವ್ಯಾಚ್ಚ ಶಬ್ದದಿಂದ ನಿಂದಿಸಿದ ಕಾರಣಕ್ಕೆ ಬಸ್ ಅನ್ನೇ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ. ಸುರೇಶ್ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ ಪುತ್ತೂರು ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿದ್ದಾರೆ. ಈ ವೇಳೆ ವೇಳೆ ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಈತನ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾನೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದ್ದಾನೆ, ಅಷ್ಟು ಕೇಳಿದ್ದೆ ತಡ ಪ್ರಯಾಣಿಕನನ್ನು ಬಸ್ ನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ. ಕೋಳಿ ಮಾಂಸ ಬಸ್ಸಿನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು. ಆದರೆ ಕೂಲಿ ಕಾರ್ಮಿಕನಿಗೆ ಇದರ ಅರಿವಿಲ್ಲದೆ, ಬಸ್ ನಿಂದ ಇಳಿಯಲು ಒಪ್ಪಲಿಲ್ಲ.
ಇವರಿಬ್ಬರ ನಡುವೆ ಕೆಲ ಹೊತ್ತು ವಾಗ್ವಾದ ನಡೆದ ಬಳಿಕ ನಿರ್ವಾಹಕ ಪ್ರಯಾಣಿಕನಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಕಡೆಗೂ ಪ್ರಯಾಣಿಕ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ಸನ್ನೇ ಪೋಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿದ್ದಾನೆ. ಠಾಣೆಯಲ್ಲಿದ್ದ ಎಸ್.ಐ.ರಾಮಕೃಷ್ಣ ಅವರು ಕೆ.ಎಸ್. ಆರ್.ಟಿ.ಸಿ.ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ.
ಕೂಲಿ ಕಾರ್ಮಿಕನ ವಾದ ಏನು?
ಕೂಲಿ ಕಾರ್ಮಿಕರು ಬಸ್ ನಲ್ಲಿ ಮಾಂಸ, ಮೀನು ಕೊಂಡುಹೋಗಲು ಅವಕಾಶ ವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಈತ ಮಾಡಿದ್ದಾನೆ. ಒಂದು ಕೆ.ಜಿ.ಕೋಳಿಗೋಸ್ಕರ ಕಾರು ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕಾ ಎಂಬ
ಪ್ರಶ್ನೆಯನ್ನು ಕೇಳಿದ್ದಾರೆ.
ಕೋಳಿ,ಮೀನು ತರುವಂತಿಲ್ಲ!
ಬಸ್ ನಲ್ಲಿ ಕೋಳಿ, ಮೀನು ಮಾಂಸ ತರುವಂತಿಲ್ಲ, ಜೀವ ಇರುವ ವಸ್ತುಗಳನ್ನು ತರಬಹುದು, ಮಾಂಸವಾದರೆ ಇತರರಿಗೆ ವಾಸನೆ ಬರುತ್ತದೆ, ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆ.ಎಸ್. ಆರ್.ಟಿ.ಸಿ.ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಮಾಹಿತಿ ನೀಡಿದ್ದಾರೆ.
ಈಜಲು ಹೋದ ಬಾಲಕ ಕಣ್ಮರೆ!
ಪುತ್ತೂರು: ಈಜಲು ಹೋದ ಯುವಕರ ಗುಂಪಿನ ಓರ್ವ ಬಾಲಕ ನೀರಿನಲ್ಲಿ ಕಣ್ಮರೆಯಾಗಿದ್ದು ರಾತ್ರಿಯಾದರೂ ಬಾಲಕನ ಮೃತದೇಹ ಪತ್ತೆಯಾಗಿಲ್ಲ . ಹದಿನೇಳು ವರ್ಷದ ಬಾಲಕ ತಸ್ಲಿಮ್ ಎಂದು ಗುರುತಿಸಲಾಗಿದೆ. ತನ್ನ ಗೆಳಯರ ಬಳಗದೊಂದಿಗೆ ಸಂಜೆ ಸಮಯ ಅರಿಕ್ಕಿಲ ಸಮೀಪದ ಎರಕ್ಕಳ ಎಂಬಲ್ಲಿರುವ ಹೊಳೆಗೆ ಈಜಲು ತೆರಳಿದ್ದು ಈ ಸಂದರ್ಭದಲ್ಲಿ ತಸ್ಲಿಮ್ ಎಂಬ ಯುವಕ ನೀರೊಳಗೆ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ ಸ್ಥಳದಲ್ಲಿ ನೂರಾರು ಮಂದಿ ಸೇರಿ ಹುಡುಕಾಟ ನಡೆಸುತ್ತಿದ್ದು ರಾತ್ರಿಯಾದರೂ ಬಾಲಕನ ಮೃತದೇಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ
ಉಡ ಕೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದವನಿಗೆ ಕಾದಿತ್ತು ಶಾಕ್
ಬಂಟ್ವಾಳ : ಉಡಾವನ್ನು ಬೇಟೆ ಮಾಡಿ ಬಳಿಕ ಅದರೊಂದಿಗೆ ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಗ್ಗೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ. ಉಡಾವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗ ನಿವಾಸಿ ಸುಧಾಕರ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯಿದೆ1972 ಅನ್ವಯ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ ಅಕ್ಟೋಬರ್ 11 ರಂದು ಘಟನೆ ಬೆಳಕಿಗೆ ಬಂದಿದ್ದು ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು ಸಾಯಿಸಿ ಬಳಿಕ ಅದನ್ನು ತೆಗೆದುಕೊಂಡು ವಿಜೃಂಭಿಸುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಜೊತೆಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್. ಮರಿಯಪ್ಪ ಮಾಹಿತಿ ನೀಡಿದ್ದಾರೆ.
ತಲೆ ಮೇಲೆ ಸಿಮೆಂಟ್ ಕಂಬ ದೂಡಿ ಹಾಕಿ ಹಲ್ಲೆ!
ಬಂಟ್ವಾಳ: ಕೂಲಿ ಕಾರ್ಮಿಕನ ತಲೆ ಮೇಲೆ ಸಿಮೆಂಟ್ ಕಂಬ ದೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸೇನೆರೆಕೋಡಿ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸೇನೆರೆ ಕೋಡಿ ರವಿಶಂಕರ್ ಎಂಬವರ ಹೆಂಡತಿ ಹೆಸರಿನಲ್ಲಿರುವ ತೋಟಕ್ಕೆ ಗಾಡ್ ಪಾಷನ, ರೂಪ ಪ್ರಿಯ ದಿ ಸೋಜಾ, ಗ್ಲೆನ್ಶಾ ರಿಶಾನ್, ಗ್ರೇಶನ್ ಪಾಷನ ಎಂಬವರು ಅಕ್ರಮ ಪ್ರವೇಶ ಮಾಡಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ಕೆಲಸಗಾರರ ಪೈಕಿ ರಾಮಾಕಾಂತ ಎಂಬವರನ್ನು ದೂಡಿ ಹಾಕಿ, ಕೊಲೆ ಮಾಡುವ ಉದ್ದೇಶದಿಂದ ಸಿಮೆಂಟ್ ಕಂಬವನ್ನು ಆತನ ತಲೆ ಮೇಲೆ ದೂಡಿ ಹಾಕುವ ಸಂದರ್ಭದಲ್ಲಿ ರಾಮಾಕಾಂತ ತಲೆಯನ್ನು ತಪ್ಪಿಸಿದಾಗ ಬೆನ್ನಿಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಸರಕಾರಿ ಆಸ್ಪತ್ರೆ ಬಂಟ್ವಾಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.