ಪುಸ್ತಕ ಮನೆ ಪುಸ್ತಕ ಸೇವೆ ಪಯಣ ಶುರು!
– ಕಾರ್ಕಳದಲ್ಲಿ ಪುಸ್ತಕ ಮನೆ ಉದ್ಘಾಟಿಸಿದ ಶಾಸಕ ಸುನೀಲ್ ಕುಮಾರ್
– ಮೊದಲೇ ದಿನವೇ ಪುಸ್ತಕ ಪ್ರಿಯರ ಖರೀದಿ ಜೋರು
NAMMUR EXPRESS NEWS
ಕಾರ್ಕಳ: ಕನ್ನಡ ಪುಸ್ತಕ ಲೋಕದಲ್ಲಿ “ಪುಸ್ತಕ ಮನೆ” ಪಯಣ ಶುರುವಾಗಿದೆ. ಬೃಹತ್ ಆಫ್ ಲೈನ್, ಆನ್ಲೈನ್ ಪುಸ್ತಕ ಮಳಿಗೆ ಅ.16ರಂದು ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಉದ್ಘಾಟನೆಗೊಂಡಿದೆ. ಪುಸ್ತಕ ಮನೆ ಉದ್ಘಾಟನೆ ಮಾಡಿದ ಕಾರ್ಕಳ ಶಾಸಕರು, ಮಾಜಿ ಸಚಿವ ಸುನಿಲ್ ಕುಮಾರ್, ಕಾರ್ಕಳದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ತನ್ನ ಕಾಲೇಜನ್ನು ಪ್ರಾರಂಭ ಮಾಡಿದ ನಂತರ ಕೇವಲ ಕಾಲೇಜಿಗೆ ಮಾತ್ರ ಸೀಮಿತವಾಗಲಿಲ್ಲ. ಬದಲಾಗಿ ಇಡೀ ಕಾರ್ಕಳ ತಾಲೂಕಿನ ಜನರಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಿದೆ. ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು, ದಾರಿದೀಪ ಆಗಬೇಕು ಅನ್ನುವಂತಹ ದೂರದೃಷ್ಟಿ ಇಟ್ಟುಕೊಂಡು “ಪುಸ್ತಕ ಮನೆ ” ಎಂಬ ಒಂದು ವಿಶೇಷವಾದ ಕಲ್ಪನೆಯನ್ನು ಇಟ್ಟುಕೊಂಡು ಪುಸ್ತಕ ಮನೆ ಲೋಕಾರ್ಪಣೆ ಮೂಲಕ ಆ ಆಶಯವನ್ನು ಸಕಾರಗೊಳಿಸಿದ್ದಾರೆ. ಇದು ಮಲೆನಾಡು, ಕರಾವಳಿ ಸೇರಿ ಐದು ಆರು ಜಿಲ್ಲೆಯಲ್ಲಿ ಒಂದು ವಿಶಿಷ್ಟವಾದ ಮಳಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ಮನೆಯಲ್ಲಿ ಎಲ್ಲಾ ರೀತಿಯ ಪುಸ್ತಕಗಳು ಸಿಗಬೇಕು ಎನ್ನುವ ಕಲ್ಪನೆ ಇದೆ. ಅಭ್ಯಾಸ ಮಾಡುವಂತವರಿಗೆ ಅಭ್ಯಾಸ ಮಾಡಲು ಎಲ್ಲಾ ವ್ಯವಸ್ಥೆ ಒಳಗೊಂಡಂತ ಮಳಿಗೆ ಇದಾಗಿದೆ. ಎಲ್ಲಾ ಪುಸ್ತಕಗಳು ಒಂದೇ ಕಡೆ ದೊರಕುವಂತೆ ಆಗಬೇಕು ಎಂಬ ಪರಿಕಲ್ಪನೆಯೇ ವಿಶಿಷ್ಟವಾದುದು. ನಮ್ಮ ತಾಲೂಕಿನ 7-8 ಕಾಲೇಜಿನಲ್ಲಿ ಇತ್ತೀಚಿಗೆ ರಾಜ್ಯದಲ್ಲೇ ಒಳ್ಳೆಯ ಫಲಿತಾಂಶಗಳು ಬರುತ್ತಿವೆ. ನಮ್ಮೂರಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಆ ಸಾಧನೆಗೆ ಬೇಕಾದಂತ ಒಳ್ಳೆಯ ಪುಸ್ತಕಗಳು ಸಿಕ್ಕರೆ ಇನ್ನಷ್ಟು ಸಾಧನೆ ಮಾಡಲು ನಮ್ಮ ಮನೆಯ ಮಕ್ಕಳಿಗೆ ಸಾಧ್ಯ ಆಗುತ್ತದೆ. ಆ ರೀತಿ ಒಳ್ಳೆಯ ವ್ಯವಸ್ಥೆಯನ್ನು ಕ್ರಿಯೇಟಿವ್ ಬಳಗ ಮಾಡಿರುವುದು ಕಾರ್ಕಳದ ಬೆಳವಣಿಗೆಗೆ ಒಂದು ಮುಕುಟ ಪ್ರಾಯವಾದ ಪುಸ್ತಕಮನೆ ಎಂದು ನಾನು ಭಾವಿಸುತ್ತೇನೆ ಎಂದರು. ತಾವು ಪುಸ್ತಕ ಖರೀದಿ ಮಾಡುವ ಜತೆಗೆ ತಮ್ಮಲ್ಲಿದ್ದ ಪುಸ್ತಕಗಳನ್ನು ಓದುಗರಿಗೆ ಪುಸ್ತಕ ಮನೆ ಮೂಲಕ ನೀಡಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್, ಡಾ.ಗಣನಾಥ ಶೆಟ್ಟಿ, ಅಶ್ವಥ್ ಎಸ್. ಎಲ್, ವಿಮಲ್ ರಾಜ್, ಆದರ್ಶ ಕೆ. ಎಸ್, ಅಮೃತ್ ರೈ, ಗಣಪತಿ ಕೆ.ಎಸ್ ಸೇರಿದಂತೆ ಪುಸ್ತಕ ಮನೆ ಪ್ರಮುಖರು, ಸಿಬ್ಬಂದಿ ಇದ್ದರು.
ಮೊದಲೇ ದಿನವೇ ಐನೂರು ಮಂದಿ ಭೇಟಿ: ಪುಸ್ತಕ ಖರೀದಿ ಜೋರು
ಪುಸ್ತಕ ಸೇರಿ ಅಧ್ಯಯನ, ಬೃಹತ್ ಶೈಕ್ಷಣಿಕ, ಸಾಹಿತ್ಯ, ಗಿಫ್ಟ್, ಪುಸ್ತಕ ಮಳಿಗೆ ಇದಾಗಿದೆ. ಇನ್ಮುಂದೆ ಒಂದೇ ಸೂರಿನಲ್ಲಿ ಎಲ್ಲಾ ಪುಸ್ತಕಗಳು ಪುಸ್ತಕ ಮನೆಯಲ್ಲಿ ಲಭ್ಯವಾಗಲಿದೆ. ಉದ್ಘಾಟನೆ ದಿನವೇ ಸುಮಾರು 500ಕ್ಕೂ ಹೆಚ್ಚು ಮಂದಿ ಆಗಮಿಸಿ ಪುಸ್ತಕ, ಗಿಫ್ಟ್ಸ್, ಅಧ್ಯಯನ ಸಾಮಾಗ್ರಿ ಖರೀದಿಸಿದರು.
Discover the world of books with Pustaka Mane on WhatsApp! Join our official group for the latest book arrivals and updates.
https://chat.whatsapp.com/DsRbeVXVX2eJQZzK7M9
ವೆಬ್: Pustakamane.com