ಕರಾವಳಿಯಲ್ಲಿ ಭಾರಿ ಮಳೆ!
– ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ
– ಮೀನುಗಾರಿಕೆ ನಡೆಸದಂತೆ ಆದೇಶ
NAMMUR EXPRESS NEWS
ಕರಾವಳಿ: ಕಳೆದ ಎರಡು ದಿನಗಳಿಂದ ಕರಾವಳಿಯ ಅನೇಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಲಕ್ಷದ್ವೀಪ, ನೈರುತ್ಯ ಅರಬ್ಬಿ ಸಮುದ್ರ ಮತ್ತು ಕೇರಳ ಕರಾವಳಿಯ ಮಧ್ಯೆ ಸಮುದ್ರ ಮಟ್ಟದಿಂದ ಮೂರು ಕಿಮೀ ಎತ್ತರದಲ್ಲಿ ಚಂಡಮಾರುತ ಮಾದರಿ ವರ್ತುಲ ಉಂಟಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಉತ್ತರ ಭಾಗದತ್ತ ಚಲಿಸಲಿದೆ ಎಂದು ಮಂಗಳೂರಿನ ಬಂದರು ಪ್ರಾಧಿಕಾರ(ಎನ್ಎಂಪಿಎ) ಕೇಂದ್ರ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡದ ಕೇಂದ್ರ ಹವಾಮಾನ ಇಲಾಖೆ
ಹೀಗಾಗಿ ಎನ್ಎಂಪಿಎ ಬಂದರಿಗೆ ಆಗಮಿಸುವ ಹಡಗು, ಇನ್ನಿತರ ಎಲ್ಲ ರೀತಿಯ ಕಾರ್ಗೋ ಹಡಗುಗಳು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಅಲ್ಲದೆ, ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಮುಂಜಾಗ್ರತೆ ವಹಿಸಬೇಕು. ಎನ್ಎಂಪಿಎಂ ಬಂದರಿನಲ್ಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.