ಕರಾವಳಿ ಮೀನುಗಾರಿಕೆ ಮಹಿಳೆಯರಿಗೆ ಸಿಹಿ ಸುದ್ದಿ
– ಸ್ವ ಉದ್ಯೋಗಕ್ಕಾಗಿ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
– ಏನಿದು ಯೋಜನೆ… ಸಿಎಂ ಹೇಳಿದ್ದೇನು..?
NAMMUR EXPRESS NEWS
ಕರಾವಳಿ: ಮೀನುಗಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕರಾವಳಿ ಮಹಿಳೆಯರ ಸ್ವ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಘೋಷಿಸಿದ್ದು, ಇದೀಗ ಯೋಜನೆ ಜಾರಿ ಮಾಡುತ್ತಿದೆ. ಮೀನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡ ಜನರಿಗೆ ವರ್ಷವಿಡೀ ಉದ್ಯೋಗ ಮತ್ತು ಆದಾಯವಿರದು. ಹೀಗಾಗಿ ಮಳೆಗಾಲ, ಹವಾಮಾನ ವೈಪರಿತ್ಯ ಮುಂತಾದ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಒಳಗಾಗುವ ಮೀನುಗಾರ ಕುಟುಂಬಗಳಿಗೆ ಇತರೆ ತಾತ್ಕಾಲಿಕ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಅಥವಾ ಅವರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು ರೂ.50,000 ದಿಂದ ರೂ.3 ಲಕ್ಷಕ್ಕೆ ಹೆಚ್ಚಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದು, ಈ ಸಮುದಾಯದ ಮಹಿಳೆಯರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.