ಮನೆಗೆ ನುಗ್ಗಿ ಮಹಿಳೆಯ ಸ್ಪರ್ಶಿಸಿ ಅಸಭ್ಯ ವರ್ತನೆ!
– ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು
– ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ
– ಮಂಗಳೂರು ಯುವಕ ದುಬೈ ಅಲ್ಲಿ ಸಾವು
– ಬ್ಯಾನರ್ ವಿವಾದ : ವ್ಯಕ್ತಿಗೆ ಚೂರಿ ಇರಿತ
NAMMUR EXPRESS NEWS
ಕೊಣಾಜೆ : ಹಂಚು ತೆಗೆದು ಮನೆಯೊಳಗೆ ನುಗ್ಗಿದ ಕಿರಾತಕನೋರ್ವ ಎರಡು ಮಕ್ಕಳ ತಾಯಿಗೆ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳದ ಹೆಬ್ಬೇಲಿ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಇಂದು ಬಂಧಿಸಲಾಗಿದೆ. ಡೆಬ್ಬೇಲಿ ನಿವಾಸಿ ನೌಫಾಲ್ (38) ಬಂಧಿತ ಆರೋಪಿ, ನೆರೆಮನೆಯ ಮಹಿಳೆ ತನ್ನ ಮಕ್ಕಳಿಬ್ಬರ ಜೊತೆಗೆ ಮಲಗಿರುವ ಸಂದರ್ಭ ಹಂಚು ತೆಗೆದು ಒಳನುಗ್ಗಿದ ಆರೋಪಿ ನೌಫಾಲ್ ಮಹಿಳೆ ಮೈ ಸ್ಪರ್ಶಿಸಿದ್ದಾನೆ. ತಕ್ಷಣ ಎಚ್ಚೆತ್ತ ಮಹಿಳೆ ಬೊಬ್ಬೆ ಹಾಕಿದ್ದು ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಮಹಿಳೆ ಪತಿ ರಾತ್ರಿಪಾಳಯ ಕೆಲಸ ನಡೆಸುವವರಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯರು ಆರೋಪಿಗಾಗಿ ಹುಡುಕಾಟ ನಡೆಸುವಾಗ ಮನೆಯೊಳಗೆ ಆರೋಪಿ ನೌಫಾಲನ ಮೊಬೈಲ್ ಪತ್ತೆಯಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುವಡಿಸಲಾಗಿದೆ.
ಬಂಧಿತ ಈ ಹಿಂದೆಯೂ ಸ್ಥಳೀಯ ಹಲವು ಮನೆಗಳ ಬಚ್ಚಲು ಮನೆಗೆ ನುಗ್ಗಿ ಪೆಟ್ಟು ತಿಂದಿದ್ದಾನೆ. ಅಲ್ಲದೆ ಮಹಿಳೆಯರಿಗೂ ಕಿರುಕುಳ ನೀಡಿದ್ದರೂ, ಪ್ರಕರಣಕ್ಕೆ ಅಂಚೆ ದೂರು ದಾಖಲಿಸಲು ಹಿಂದೇಟು ಹಾಕಿದ್ದರು. ವಿವಾಹಿತನಾಗಿರುವ ಈತ ಎರಡು ಮಕ್ಕಳ ತಂದೆಯಾಗಿದ್ದಾನೆ, ಸರಿಯಾಗಿ ಕೆಲಸಕ್ಕೂ ಹೋಗದೆ ದಿನವಿಡೀ ತನ್ನ ಚಾಳಿ ನಡೆಸುತ್ತಾ ಬಂದಿದ್ದಾನೆ.
ಮಹಿಳಾ ಕಬಡ್ಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ
ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಅರಿಶಿನಕುಂಟೆಯಲ್ಲಿ ವರದಿಯಾಗಿದೆ. ಅರಿಶಿನಕುಂಟೆಯ ಆದರ್ಶನಗರದ ಮನೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ(25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಮ್ನಲ್ಲಿ ನೇಣು ಬಿಗಿದುಕೊಂಡಿದ್ದು, ಅನುಮಾನಗೊಂಡ ತಂದೆ ರೂಮ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರದ ಧನಲಕ್ಷ್ಮೀ ಕುಟುಂಬ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ಬಾಡಿಗೆಗೆ ಮಾಡಿಕೊಂಡು ವಾಸವಿದ್ದರು.
ಮಂಗಳೂರು ಯುವಕ ದುಬೈ ಅಲ್ಲಿ ಸಾವು
ಮಂಗಳೂರು. ಮೃತರನ್ನು ಕೂಳೂರು ಪಂಜಿಮೊಗರು ವಿದ್ಯಾನಗರ ನಿವಾಸಿ ಮುಹಮ್ಮದ್ ಎಂಬವರು ಪುತ್ರ ಅಖರ್ (27) ಎಂದು ಗುರುತಿಸಲಾಗಿದೆ. ಅಖರ್ ಕಳೆದ ಭಾನುವಾರ ಕರ್ತವ್ಯ ಮುಗಿಸಿ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಲ್ಲೆ ಮೃತಪಟ್ಟಿದ್ದಾರೆ. ಅವರ ಮೃತದೇಹ ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಬ್ಯಾನರ್ ವಿವಾದ : ವ್ಯಕ್ತಿಗೆ ಚೂರಿ ಇರಿತ
ಬಂಟ್ವಾಳ: ಮೆಲ್ಕಾರಿನಲ್ಲಿ ಕೆಲದಿನಗಳ ಹಿಂದೆ ನಡೆದ ಬ್ಯಾನರ್ ಪ್ರಾರಂಭವಾಗಿರುವ ಬ್ಯಾನರ್ ವಿವಾದ ಒಳಗಿಂದೊಳಗೆ ಹೊಗೆಯಾಡುತ್ತಿದ್ದು, ಗುರುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಇರಿಯಲಾಗಿದೆ. ತಂಡವೊಂದು ಮೆಲ್ಕಾರ್ ಪೇಟೆಯಲ್ಲಿ ಚೂರಿಯಿಂದ ಇರಿದಿದೆ. ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ದೇವದಾಸ್ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ರೈಲ್ವೇಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ!
ಕಾಸರಗೋಡು: ಮಿಲಿಟರಿ ಅಧಿಕಾರಿಯೆಂದು ತಿಳಿಸಿ ರೈಲ್ವೇಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ನಂಬಿಸಿ 7 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆಮ್ಯಾಡ್ ನಿವಾಸಿಯಾಗಿರುವ ಈತನನ್ನು ಬಂಧಿಸಲು ಮೇಲ್ಪರಂಬ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.
ಹಣ ಪಡೆದುಕೊಂಡ ಬಳಿಕ ಪ್ರವೇಶ ಪರೀಕ್ಷೆಗೆ ಯುವಕನನ್ನು ಚೆನ್ನೈಗೆ ಬರುವಂತೆ ತಿಳಿಸಿದ್ದನು. ಅದರಂತೆ ಅಲ್ಲಿಗೆ ಹೋದರೂ ಅಲ್ಲಿ ಯಾವುದೇ ಪ್ರವೇಶ ಇರಲಿಲ್ಲ.