ರಾಜಧಾನಿಯಲ್ಲಿ ಮಲೆನಾಡು, ಕರಾವಳಿ ಜನರ ದನಿ..!
– ಅ.31 ಬೆಂಗಳೂರಲ್ಲಿ ಬೃಹತ್ ಸಭೆ
– ಸರ್ವರಿಗೂ ಸ್ವಾಗತಿಸಿದ ಸುಧೀರ್ ಕುಮಾರ್ ಮುರೊಳ್ಳಿ
NAMMUR EXPRESS NEWS
ಮಲೆನಾಡು ಹಾಗೂ ಕರಾವಳಿಯ ಹಲವಾರು ಸಮಸ್ಯೆಗಳು ಇದ್ದು ಅವೆಲ್ಲವನ್ನೂ ಪರಿಹರಿಸುವ ಸಲುವಾಗಿ ಮಲೆನಾಡ ಕರಾವಳಿ ಜನಪರ ಒಕ್ಕೂಟದಿಂದ ಅಕ್ಟೋಬರ್ 31ರಂದು ಬೆಂಗಳೂರಿನ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೃಹತ್ ಸಭೆ ನಡೆಯಲಿದೆ. ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಕೊಪ್ಪ ಶೃಂಗೇರಿ ಸೇರಿ ಕರಾವಳಿ ಜಿಲ್ಲೆಗಳ ಹಲವು ತಾಲೂಕುಗಳ ಸಮಸ್ಯೆಗಳು ಏಕರೂಪದಲ್ಲಿವೆ. ಭೂ ಮಂಜೂರಾತಿ ಗ್ರಾಮಪಂಚಾಯಿತಿಯ ನಿವೇಶನ ರಹಿತ ಸಮಸ್ಯೆ, ಆಟೋ ಚಾಲಕರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಾಗಿ ಹಾಕ್ಕೋತ್ತಾಯ ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮಲೆನಾಡು ಹಾಗೂ ಕರಾವಳಿಯ ಹಲವು ಸಂಘಟನೆಗಳು ಒಗ್ಗೂಡಿ ಸಮಾಲೋಚನೆ ಸಭೆ ನಡೆಯಲಿದೆ.
ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದ್ದರೂ ಉದ್ಯೋಗ ಸಮಸ್ಯೆ ಬಗೆ ಹರಿದಿಲ್ಲ. ಮಲೆನಾಡು ಹಾಗೂ ಕರಾವಳಿಯ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ವಕೀಲರು, ನ್ಯಾಯವಾದಿ ಸುಧೀರ್ ಕುಮಾರ್ ಮೊರಳ್ಳಿ, ಅನಿಲ್ ಹೊಸಕೊಪ್ಪ ಸೇರಿದಂತೆ ಹಲವರು ಸಾರತ್ಯ ವಹಿಸಿದ್ದಾರೆ.