ಹೆಬ್ರಿ ಅಮೃತಭಾರತಿ ವಿದ್ಯಾಲಯದಲ್ಲಿ ರಾಜ್ಯೋತ್ಸವ ಸಂಭ್ರಮ
– ಪ್ರೌಢ ಶಾಲಾ ವಿಭಾಗದ ಮಕ್ಕಳಿಗೆ ವಿವಿಧ ಸ್ಪರ್ಧೆ
– ಕನ್ನಡ ಹಬ್ಬದ ಸಂಭ್ರಮದ ಆಚರಣೆ
NAMMUR EXPRESS NEWS
ಹೆಬ್ರಿ: ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕನ್ನಡ ಶಿಕ್ಷಕ ಮಹೇಶ್ ಹೈಕಾಡಿ ಮಾತನಾಡಿ, ಕನ್ನಡ ಭಾಷೆಗೆ ನೂರಾರು ವರ್ಷಗಳ ಇತಿಹಾಸ ಇದೆ. ನಮ್ಮ ಋಷಿ ಮುನಿಗಳಿಂದ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಭಾಷೆಯಾಗಿದೆ. ಕನ್ನಡವನ್ನು ಸಂರಕ್ಷಣೆ ಮಾಡುವ ದೀಕ್ಷೆ ನಮ್ಮ ಮೇಲಿದೆ. ಅಲ್ಲದೆ ಕನ್ನಡ ರಾಜ್ಯದ ಉದಯವಾಗಲು ಕನ್ನಡಿಗರ ಹೋರಾಟ ನಡೆದಿದೆ, ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು ಎಂದರು.
ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಆಂಗ್ಲ ಭಾಷಾ ಶಿಕ್ಷಕಿ ಸಾವಿತ್ರಿ ಮಾತಾಜಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರೂಜಿ ಮಾತಾಜಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿ ಸವಿತಾ ಮಾತಾಜಿ, ವೇದವ್ಯಾಸ ತಂತ್ರಿ ಮಡಾಮಕ್ಕಿ ಬಹುಮಾನ ಪಟ್ಟಿ ವಾಚಿಸಿದರು.