ಬಿ.ಪಿ.ಎಲ್ ಕಾರ್ಡ್ ವಿತರಣೆ ಪುನರಾರಂಭ
– ನ.3ರಿಂದ ರಾಜ್ಯದಲ್ಲಿ ವಿತರಣೆ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ
– ನಕಲಿ ಕಾರ್ಡ್ ಬಗ್ಗೆ ಸರ್ಕಾರ ಅಲರ್ಟ್
NAMMUR EXPRESS NEWS
ಹುಬ್ಬಳ್ಳಿ: ವಿವಿಧ ಕಾರಣಗಳಿಂದ ಹಿಂದಿನ ಸರಕಾರ ಸ್ಥಗಿತಗೊಳಿಸಿದ್ದ ಬಿಪಿಎಲ್ ಕಾರ್ಡ್ ವಿತರಣೆ ಕಾರ್ಯ ನ.3ರಿಂದ ಪುನರಾರಂಭವಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಚುನಾವಣೆ ಸಹಿತ ಇತರ ಕಾರಣಗಳಿಂದ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆಯನ್ನು ಸ್ಥಗಿತಗೊಳಿಸಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿ ಪುನರಾರಂಭಿಸಲಾಗಿದೆ. ಇದುವರೆಗೆ ಬಿಪಿಎಲ್ ಕಾರ್ಡ್ಗಳಿಗೆ ಸುಮಾರು 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ ಅರ್ಹರಿಗೆ ವಿತರಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಕಾರ್ಡ್ಗಳು ದೊರೆಯಬೇಕಾಗಿದೆ. ನಕಲಿ ಕಾರ್ಡ್ಗಳ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಹೊಸ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಈ ಮೂಲಕ ಸರ್ಕಾರ ಸಿಹಿ ಸುದ್ದಿ ನೀಡಿದೆ.