ಕಾರ್ಕಳದಲ್ಲೊಂದು ಪುಸ್ತಕ ಮನೆ..!
– ಒಂದೇ ಕಡೆ ಸಿಗಲಿದೆ ಸಾಹಿತ್ಯ ಕೃತಿ ಭಂಡಾರ
– ಚಿನ್ನರ ಅಚ್ಚುಮೆಚ್ಚಿನ ತಾಣ.. ಏನೇನಿದೆ..?
NAMMUR EXPRESS NEWS
ಕಾರ್ಕಳ: ಸಾಹಿತ್ಯದ ಕಡೆಯ ಒಲವು ಹೆಚ್ಚಳ ಹಾಗೂ ಒಂದೇ ಕಡೆ ಲಭ್ಯವಾಗಲಿರುವ ಪುಸ್ತಕ ಸಂಗ್ರಹಗಳಿಗೆ ಅವಕಾಶ ಕಲ್ಪಿಸುವ ವಿನೂತನ ಯೋಜನೆಯನ್ನು ಕಾರ್ಕಳ ಪುಸ್ತಕ ಮನೆ ಆರಂಭಿಸಿದೆ. ಕಾರ್ಕಳದ ಕುಕ್ಕುಂದೂರು ಜೋಡು ರಸ್ತೆಯ ಆದಿಧನ್ ಎನ್ ಕ್ಲೇವ್ ನಲ್ಲಿ ಪುಸ್ತಕ ಮತ್ತು ಸ್ಟೇಷನರಿ ವಸ್ತುಗಳನ್ನೊಳಗೊಂಡ ಪುಸ್ತಕ ಮನೆ ಆರಂಭಗೊಂಡಿದೆ. ಇದೀಗ ಕಾರ್ಕಳ ಸೇರಿ ರಾಜ್ಯದ ಹಲವೆಡೆಗೂ ಪುಸ್ತಕ ನೀಡುತ್ತಿದೆ. ಸೇವಾ ಮನೋಭಾವನೆ ಜೊತೆಗೆ ಎಲ್ಲರೂ ಪುಸ್ತಕ ಪ್ರೀತಿ ಹೊಂದುವುದೇ ಈ ಪರಿಕಲ್ಪನೆಯ ಹಿಂದಿರುವ ಉದ್ದೇಶ. ಎಲ್ಲಾ ವಯೋಮಾನದ ವ್ಯಕ್ತಿಗಳಿಗೆ ಪುಸ್ತಕಪ್ರಿಯರಿಗೂ ಅಲ್ಲಿಯೇ ಓದುವ ಅವಕಾಶವನ್ನು ಗ್ರಂಥಾಲಯದ ರೂಪದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ದೊಡ್ಡ ಮಟ್ಟದ ಪುಸ್ತಕ ಸಂಗ್ರಹವೇ ಅಲ್ಲಿದೆ. ದೂರದ ಊರುಗಳಿಂದ ಪುಸ್ತಕ ಅಥವಾ ಸಾಮಗ್ರಿಗಳನ್ನು ತರಲು ಅನುಕೂಲವೆನಿಸಿದ ಸಂದರ್ಭ ಕಾರ್ಕಳದಲ್ಲಿಯೇ ಹೊಸ ಪರಿಕಲ್ಪನೆಯ ಸೃಷ್ಟಿ ಈ ಪುಸ್ತಕ ಮನೆ.
ಕ್ರಿಯೇಟಿವ್ ಸಂಸ್ಥೆಯ ಕನಸಿನ ಕೂಸು
ಕಾರ್ಕಳ ಪುಸ್ತಕ ಮನೆ ಕ್ರಿಯೇಟಿವ್ ಸಂಸ್ಥೆಯ ಸಂಸ್ಥಾಪಕ ಕನಸಿನ ಕೂಸು. ಆಸು ಪಾಸಿನ ಜನತೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಯಾವುದೇ ಲೇಖಕರ ಕೃತಿಗಳ ಓದು ಸುಲಭ ಸಾಧ್ಯವಾಗಬೇಕು ಮತ್ತು ಮುಂದಿನ ಪೀಳಿಗೆಯ ಜನರನ್ನು ಸಾಹಿತ್ಯಸಕ್ತರನ್ನಾಗಿಸಿ, ಕೃತಿ ಪರಿಚಯ ಮಾಡಿಸಬೇಕೆಂಬ ಉದ್ದೇಶ ಹೊಂದಲಾಗಿದೆ. ಇಲ್ಲಿ ಕೇವಲ ಪುಸ್ತಕಗಳಷ್ಟೇ ಅಲ್ಲದೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಕ್ರಿಯಾಶೀಲ ಆಟದ ವಸ್ತುಗಳು, ಸ್ಟೇಷನರಿ, ಉಡುಗೊರೆಯ ಬೃಹತ್ ಸಂಗ್ರಹವೇ ಇದೆ. ಗ್ರಂಥಾಲಯಗಳಿಗೆ ಅಗತ್ಯವಿರುವ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಆನ್ಲೈನ್ ಪುಸ್ತಕ ಖರೀದಿಗೂ ಅವಕಾಶ ಮಾಡಿಕೊಡಲಾಗಿದೆ.
ಬಡ ಮಕ್ಕಳಿಗೆ ಪುಸ್ತಕ ಒದಗಿಸಲು ಯೋಜನೆ
ಪುಸ್ತಕ ಪೋಷಕ ಯೋಜನೆ : ಈ ಯೋಜನೆಯಲ್ಲಿ ತಾವು ಓದಿದ ಯಾವುದೇ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಕಾರ್ಕಳ ತಾಲ್ಲೂಕಿನ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ಕೊಡ ಮಾಡುವ ಹಾಗೂ ಅವರಿಗೆ ಬೇಕಾದ ಪುಸ್ತಕಗಳನ್ನು ಒದಗಿಸುವ ಸಮಾಜ ಮುಖಿ ಚಿಂತನೆಯ ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಯಾವ ವಿದ್ಯಾರ್ಥಿಯು ಪಠ್ಯ ಪುಸ್ತಕದ ವೆಚ್ಚವನ್ನು ಬರಿಸಲಾಗದೆ ವಿದ್ಯಾಭ್ಯಾಸ ಮುಂದುವರಿಸಲಾಗದಿದ್ದಲ್ಲಿ ಈ ಯೋಜನೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಪರಿಣಮಿಸಲಿದೆ. ಇದಕ್ಕಾಗಿ ತಾವು ಓದಿ, ತಮಗೆ ಬೇಡವೆನಿಸಿದ ಪುಸ್ತಕಗಳನ್ನು ದಾನ ರೂಪದಲ್ಲಿ ಪುಸ್ತಕ ಪೋಷಕ ಯೋಜನೆಗೆ ನೀಡಬಹುದಾಗಿದೆ.
ಪುಸ್ತಕ ಮನೆ ಸದಸ್ಯತ್ವ ಕಾರ್ಡ್
ಪುಸ್ತಕ ಮನೆಯಲ್ಲಿ ಯಾವುದೇ ವಿಧದ ವಸ್ತು ಅಥವಾ ಪುಸ್ತಕಗಳನ್ನು ಖರೀದಿಸಿದಲ್ಲಿ ಶೇ.10ರಿಂದ 15 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. ವಾರ್ಷಿಕ ಸದಸ್ಯತ್ವ ಕಾರ್ಡಿನ ರೂಪದಲ್ಲಿ ಪ್ರತಿ ಖರೀದಿಗೂ ಆಕರ್ಷಕ ದರ ಕಡಿತ ಸಿಗಲಿದೆ.
ಚಿಣ್ಣರ ಅಚ್ಚುಮೆಚ್ಚಿನ ತಾಣ!
ಚಿಣ್ಣರಿಗೆ ಇಲ್ಲಿ ಎಲ್ಲಾ ತರಹದ ಪಠ್ಯ ಪುಸ್ತಕಗಳೊಂದಿಗೆ ಆಟೋಟದ ವಸ್ತುಗಳು, ಕಥೆ ಪುಸ್ತಕಗಳು, ಡ್ರಾಯಿಂಗ್ ಸಾಧನಗಳು, ಸ್ಟೇಷನರಿ ವಸ್ತುಗಳು ಒಂದೇ ಮಳಿಗೆಯಲ್ಲಿ ದೊರಕಲಿದೆ. ವಿಶೇಷವಾಗಿ ಮಕ್ಕಳು ಇಷ್ಟಪಡುವ ಬೇಬಿ ಡಾಲ್ ನ ಬೃಹತ್ ಸಂಗ್ರಹವಿದೆ. ಮಕ್ಕಳ ಕ್ರಿಯಾಶೀಲ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ಕಿಟ್ ಇಲ್ಲಿ ವಯೋಮಾನಕ್ಕೆ ಅನುಗುಣವಾಗಿ ರೂಢಿಸಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲ ಮನೋವಿಕಾಸದ ಪೂರಕ ವ್ಯವಸ್ಥೆಗಳು ಲಭ್ಯವಿದೆ.
ಸಂಪರ್ಕಿಸಿ
9606474289
Visit : Pustakamane.com