- ವರ್ಷವಾದರೂ ಪತ್ತೆಯಾಗದ ಸ್ಫೋಟದ ಆರೋಪಿಗಳು
- “ನೋ ಬಿಜೆಪಿ, ನೋ ಆರ್ಎಸ್ಎಸ್” ಬರೆದಿದ್ದ ಬರಹ ಪತ್ತೆ!
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ರೈಲು ನಿಲ್ದಾಣದ ಮೊದಲ ಪ್ಲಾಟ್ ಫಾರ್ಮ್ನಲ್ಲಿ ನಿಗೂಢ ವಸ್ತು ಸ್ಪೋಟಗೊಂಡು ಅ.21ಕ್ಕೆ ಒಂದು ವರ್ಷವಾದರೂ ಆರೋಪಿಗಳ ಪತ್ತೆಯಾಗಿಲ್ಲ. ಸ್ಫೋಟಕ ವಸ್ತು ಇದ್ದ ಪ್ಲಾಸ್ಟಿಕ್ ಬಕೆಟ್ ಮೇಲೆ “ನೋ ಬಿಜೆಪಿ, ನೋ ಆರ್ಎಸ್ಎಸ್” ಎಂದು ಬರೆಯಲಾಗಿತ್ತು. ಸ್ಪೋಟದಿಂದ ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಲಗೈ ಸುಟ್ಟು ಕರಕಲಾಗಿತ್ತು. ಆದರೂ ಈ
ಕಡಿಮೆ ತೀವ್ರತೆಯ ಸ್ಫೋಟಕ ಹೊಂದಿದ್ದ, ಹಂದಿಗಳ ಹಾವಳಿ ತಪ್ಪಿಸಲು ಬಳಸುವ ಫೀಲ್ಡ್ ಬಾಂಬ್ ಸ್ಫೋಟವಾಗಿತ್ತು ಎನ್ನುವುದು ತನಿಖೆಯ ಬಳಿಕ ಪತ್ತೆಯಾಗಿತ್ತು. ಆದರೆ, ಘಟನೆಗೆ ಕಾರಣರಾದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಇನ್ನೂ ಆಗಿಲ್ಲ.
ರೈಲ್ವೆ ಪೆÇಲೀಸ್ ವರಿಷ್ಠಾಧಿಕಾರಿ ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಸ್ಫೋಟದ ತನಿಖೆಗಾಗಿ ನಮ್ಮ ತಂಡ ಹಲವು ಬಾರಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದೆ. ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಕೈಬಿಟ್ಟಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ’ ಎಂದಿದ್ದಾರೆ.