ಗೋವಿಂದ ಬಾಬು ಪೂಜಾರಿ ಕೇಸ್: ಹಾಲಶ್ರೀ ಸ್ವಾಮೀಜಿಗೆ ಜಾಮೀನು
– ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ
– ಕಾರ್ಕಳದಲ್ಲಿ ಮುಂದುವರಿದ ಚಿರತೆ ಕಾಟ!
NAMMUR EXPRESS NEWS
ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ವಂಚನೆ ಪ್ರಕರಣ ಸಂಬಂಧಿಸಿದಂತೆ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಚೈತ್ರಾ ಕುಂದಾಪುರ ಹಾಗೂ ಅಭಿನವ ಶ್ರೀ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂಬ ಘಟನೆಗೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಇವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಜಾಮೀನು ಲಭಿಸಿದೆ. ಅಭಿನವ ಹಾಲಶ್ರೀ ಸ್ವಾಮೀಜಿ ಪರ ಖ್ಯಾತ ಹಿರಿಯ ಹೈಕೋರ್ಟ್ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದರು. ನ್ಯಾಯವಾದಿ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.
ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಪುತ್ತೂರಿನ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ನವೆಂಬರ್ 22ರ ತನಕ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಆರೋಪಿಗಳಾದ ಚೇತನ್, ಮನೀಶ್, ಕೇಶವ, ಮಂಜುನಾಥ್ ಎಂಬವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನವೆಂಬರ್ 22 ರ ತನಕ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಮಂಗಳವಾರ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರು ಪಡಿಸಲಾಗಿತ್ತು. ಆದ್ರೆ ನ್ಯಾಯಾಧೀಶರ ಆದೇಶ ಮೇರೆಗೆ ಬುಧವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ನವೆಂಬರ 22ರ ತನಕ ನ್ಯಾಯಾಂಗ ಕಸ್ಟಡಿಗೊಳಪಡಿಸಿ ಆದೇಶ ನೀಡಿದ್ದಾರೆ. ಸೋಮವಾರ ತಡರಾತ್ರಿ ಅಕ್ಷಯ್ ಕಲ್ಲೇಗ ಅವರನ್ನು ನಾಲ್ವರ ತಂಡ ತಲವಾರಿನಿಂದ ಹತ್ಯೆ ಮಾಡಿತ್ತು. ಅದಾದ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು.ಪುತ್ತೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಾರ್ಕಳದಲ್ಲಿ ಮುಂದುವರಿದ ಚಿರತೆ ಕಾಟ!
ಕಾರ್ಕಳ ತಾಲ್ಲೂಕಿನ ಮುಂಡೂರು ಗ್ರಾಮದ ಜಾಫರ್ ಎಂಬುವರ ಮನೆಯ ಕಾಂಪೌಂಡ್ ಹತ್ತಿ ಚಿರತೆಯೊಂದು ಕುಳಿತಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ತಾಲ್ಲೂಕಿನಾದ್ಯಂತ ಚಿರತೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು ಕತ್ತಲಾಗುತ್ತಿದ್ದಂತೆ ಮನೆಯಂಗಳಕ್ಕೆ ಚಿರತೆಗಳು ಲಗ್ಗೆಯಿಡುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಹಲವಾರು ಜಾನುವಾರುಗಳು ಚಿರತೆ ಪಾಲಾಗಿವೆ. ಬೋನು ಇಟ್ಟು ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಕಾಲೇಜಿಗೆ ಹೋದ ಯುವತಿ ನಾಪತ್ತೆ!
ಕಾರ್ಕಳ: ನಂದಳಿಕೆ ಗ್ರಾಮದ ಮಾವಿನಕಟ್ಟೆ ದರ್ಖಾಸು ನಿವಾಸಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ದೀಪಾ (21) ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರ ದಿಲೀಪ್ ಪೂಜಾರಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನ. 6ರಂದು ಬೆಳಗ್ಗೆ ಕಾಲೇಜಿಗೆಂದು ಹೋದವಳು ಮನೆಗೆ ವಾಪಸ್ ಬಂದಿಲ್ಲ, ಆಕೆಯನ್ನು ಸಂಬಂಧಿಕರ ಮನೆಯಲ್ಲೆಲ್ಲ ಹುಡುಕಾಡಿದ್ದು ಪತ್ತೆಯಾಗದ ಹಿನ್ನೆಲೆಯಲ್ಲಿ ನಾಪತ್ತೆ ಬಗ್ಗೆ ದೂರು ಸಲ್ಲಸಲಾಗಿದೆ. ನೀಲಿ ಬಣ್ಣದ ಚೂಡಿ ಧರಿಸಿದ್ದು, ಕಪ್ಪು ಬಿಳುಪು ಗೋಧಿ ಮೈಬಣ್ಣ ಕೋಲು ಮುಖದ ಚಹರೆ ಹೊಂದಿದ್ದಾಳೆ. ಈ ಚಹರೆಯ ಹುಡುಗಿ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.