ಹಸುಗೂಸನ್ನು ಕೊಂದು ತಾಯಿ ಆತ್ಮಹತ್ಯೆ!
– ಮಂಗಳೂರಲ್ಲಿ ನಡೆದ ದುರಂತ ಕಥೆ
– ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಸಹೋದರಿ ಮದುವೆಗೆಂದು ಜಾಮೀನು!
– ಸುಳ್ಯ: ರಸ್ತೆಯಲ್ಲೆ ಕುಸಿದು ಬಿದ್ದು ಓರ್ವನ ಸಾವು
NAMMUR EXPRESS NEWS
ಮಂಗಳೂರು: ನಾಲ್ಕೂವರೆ ತಿಂಗಳ ಮಗನನ್ನು ಕೊಲೆಗೈದು, ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜ್ಜರಕೆರೆ ಬಳಿಯ – ಅಪಾರ್ಟ್ಮೆಂಟ್ನಲ್ಲಿ ಶನಿವಾರ ನಡೆದಿದೆ. ಫಾತಿಮಾ ರುಕಿಯಾ(23) ತನ್ನ ಮಗ ಅಬ್ದುಲ್ಲಾ ಹೂದ್ ನನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಡ್ರೂಮ್ನ ಗ್ಯಾಲರಿಯಲ್ಲಿ ಟಬ್ನಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆ ಬಳಿಕ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಖತಿಜಾತುಲ್ ಕುಬ್ರ ಅವರ ಪುತ್ರಿ ಫಾತಿಮಾ ರುಕಿಯಾಳನ್ನು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಜು.7ರಂದು ಹೆರಿಗೆಯಾಗಿತ್ತು. ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ನಡುವೆ ಈ ಕೃತ್ಯ ಎಸಗಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ: ರಸ್ತೆಯಲ್ಲೆ ಕುಸಿದು ಬಿದ್ದು ಓರ್ವನ ಸಾವು
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರು ಕುಸಿದು ಬಿದ್ದು, ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಸಂಭವಿಸಿದೆ. ಸಂಪಾಜೆ ಗ್ರಾಮದ ಎಡ್ವಾಣೆ ತಿಮ್ಮಪ್ಪ ಪೂಜಾರಿ (65) ತಮ್ಮ ಮನೆಗೆ ನಡೆದುಕೊಂಡು ಹೋಗುವ ದಾರಿಯ ಮದ್ಯೆ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ತಿಮ್ಮಪ್ಪ ಪೂಜಾರಿ ಅವರ ಮೃತದೇಹವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಸಹೋದರಿ ಮದುವೆಗೆಂದು ಜಾಮೀನು!
ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಓರ್ವ ಆರೋಪಿಗೆ ಎರಡು ದಿನಗಳ ಪೆರೋಲ್ ದೊರಕಿದೆ. ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ಎಂಬಾತನನ್ನು ಪ್ರವೀಣ್ ಹತ್ಯೆ ಪ್ರಕರಣದಲ್ಲಿ 15ನೇ ಆರೋಪಿಯಾಗಿ ಪೊಲೀಸರುಬಂಧಿಸಿದ್ದರು. ಸುಳ್ಯದಲ್ಲಿ ಆತನ ತಂಗಿಯ ಮದುವೆ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ.ಮೈಸೂರು ಜೈಲಿನಲ್ಲಿದ್ದ ಈತನನ್ನು ಶನಿವಾರ ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ವಿವಾಹ ಸಮಾರಂಭದ ಸ್ಥಳಕ್ಕೆ ಕರೆತರಲಾಗಿದೆ. ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ.
2022 ಜುಲೈ 26ರಂದು ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಿದ್ದು, ದೇಶದಲ್ಲೇ ಸಂಚಲನ ಮೂಡಿಸಿದ್ದ ಪ್ರಕರಣ ಇದಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಐಎ (ರಾಷ್ಟ್ರೀಯ ತನಿಖಾ ದಳ) ಹಲವರನ್ನು ಬಂಧಿಸಿತ್ತು.ಈಗಲೂ ಕೆಲವು ಆರೋಪಿಗಳಿಗಾಗಿ ಎನ್ಐಎ ಶೋಧ ನಡೆಸುತ್ತಿದೆ.