ಕರಾವಳಿ ರೈತನಿಗೆ ಸಿಗ್ತು ಬಿಲಿಯನೇರ್ ರೈತ ಪ್ರಶಸ್ತಿ
– ಕುಂದಾಪುರದ ತೆಕ್ಕಟ್ಟೆಯ ರಮೇಶ್ ನಾಯಕ್ ಸಾಧನೆ
– ಡಿ.7ರಂದು ಪ್ರಶಸ್ತಿ: ಮೆಚ್ಚುಗೆ ಮಹಾಪೂರ
NAMMUR EXPRESS NEWS
ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಿದ ಉಡುಪಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕ ಹಾಗೂ ಪ್ರಗತಿಪರ ರೈತ ರಮೇಶ್ ನಾಯಕ್ ಅವರಿಗೆ ಕೇಂದ್ರ ಸರ್ಕಾರದ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ತೆಕ್ಕಟ್ಟೆ ವ್ಯವಸಾಯ ಮತ್ತು ವ್ಯವಸಾಯ ಆಧಾರಿತ ಉದ್ಯಮವನ್ನು ಮಾಡಿ ಮಿಲಿಯನ್ ಹಾಗೂ ಬಿಲಿಯನ್ ವಹಿವಾಟು ಹೊಂದಿದ ರೈತರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ತೆಕ್ಕಟ್ಟೆಯ ಪ್ರತಿಪರ ರೈತ ಟಿ. ರಮೇಶ್ ನಾಯಕ್ ಇವರು ಬಿಲಿಯನೇರ್ ಫಾರ್ಮರ್ ಎಂಬ ಪ್ರಶಸ್ತಿ ಸ್ವೀಕರಿಸಿದರು
ಗುಜರಾತ್ ರಾಜ್ಯದ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ರಮೇಶ್ ನಾಯಕ್ ಅವರಿಗೆ ದೆಹಲಿಯ ಮೇಳ ಗೌಂಡ್ ಐಎಆರ್ ಐನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಚಾರ್ಯ ದೇವವ್ರತ್ ಅವರು, ಕೃಷಿ ಎಂದರೆ ಕೇವಲವಾಗಿ ಕಾಣುವ ಈ ದಿನಗಳಲ್ಲಿ ದೇಶದಾದ್ಯಂತ ಇರುವ ಲಕ್ಷ ಕೋಟಿಗಳಲ್ಲಿ ಕೃಷಿ ಸಂಬಂಧಿತ ವ್ಯವಸಾಯ ನಡೆಸುವವರನ್ನು ಗುರುತಿಸುವುದರಿಂದ ಇತರ ಕೃಷಿಕರಿಗೆ ಹುಮ್ಮಸ್ಸು ಬರುತ್ತದೆ. ಮತ್ತು ಕೃಷಿಕರು ಈ ರೀತಿಯ ಗೌರವವನ್ನು ಪಡೆಯಲು ನಿಜವಾಗಿಯೂ ಅರ್ಹರು ಎಂದು ಅಭಿಪ್ರಾಯಪಟ್ಟರು.