ಮೇರು ನಟಿ ಲೀಲಾವತಿ ವಿದಾಯ!
– ತುಳು ನಾಡಿನ ಪ್ರತಿಭೆಯ ಸಾಧನೆಯ ಹಾದಿ
– ಇಂದು ಅಂತ್ಯಕ್ರಿಯೆ: ಸಿನಿಮಾ ರಂಗದ ಕಣ್ಣೀರು
– ತಾಯಿ ಮಗನ ಸಂಬಂಧಕ್ಕೆ ಇವರೇ ಸ್ಪಷ್ಟ ನಿದರ್ಶನ!
NAMMUR EXPRESS NEWS
ಮಂಗಳೂರು: ಬಹುಭಾಷಾ ನಟಿ, ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದು ಶನಿವಾರ ಅಂತ್ಯಕ್ರಿಯೆ ನಡೆಯಲಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸಿನಿಮಾ, ರಾಜಕೀಯ, ಎಲ್ಲಾ ಕ್ಷೇತ್ರದ ಗಣ್ಯರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಮಧ್ಯಾಹ್ನ 2:30ಕ್ಕೆ ನೆಲಮಂಗಲದ ಸೋಲದೇವನಹಳ್ಳಿಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕರಾವಳಿಯ ಮೇರು ಕಲಾವಿದೆ
ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಲೀಲಾವತಿ ಅವರು ಹುಟ್ಟಿದ್ದು 1937 ರಲ್ಲಿ ಚಿಕ್ಕವಯಸ್ಸಿನಿಂದಲೇ ನಾಟಕ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಹಲವಾರು ನಾಟಕಗಳಲ್ಲಿ ಬಣ್ಣಹಚ್ಚಿದ್ದರು. ಬಳಿಕ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿದ ಅವರು, ಅಲ್ಲಿಯೂ ಸಹ ಹಲವಾರು ನಾಟಕದಲ್ಲಿ ನಟಿಸಿದರು. ಮೈಸೂರಿನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ ಅವರು ಸಿನಿರಂಗದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಈ ಮೂಲಕ ಜೀವನ ಸಾಗಿಸುತ್ತಿದ್ದರು.
ಸಿನಿಮಾಕ್ಕೂ ಸೈ.. ಸಿನಿಮಾ ನಿರ್ಮಾಣಕ್ಕೂ ಸೈ!
ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದಾರೆ. ಲೀಲಾವತಿ ಕೇವಲ ನಟಿಯಾಗಿ ಅಷ್ಟೇ ಅಲ್ಲದೇ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. ಅವರು ‘ಅಷ್ಟಲಕ್ಷ್ಮೀ ಕಂಬೈನ್ಸ್’ ‘ಲೀಲಾವತಿ ಕಂಬೈನ್ಸ್’ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಸಮಾಜ ಸೇವೆಯಲ್ಲಿ ಮುಂಚೂಣಿ
ಲೀಲಾವತಿ ಹಾಗೂ ಅವರ ಮಗ ತೋಟಗಾರಿಕೆ ಮತ್ತು ಕೃಷಿ ಚಟುವಟಿಗಳಲ್ಲಿ ಸಕ್ರಿಯರಾಗಿದ್ದರು. ಸಮಾಜ ಸೇವೆಯಲ್ಲಿ ತಾಯಿ-ಮಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಕನಸಿನ ಪಶು ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿತ್ತು.
ತುಳು ಸಿನಿಮಾಕ್ಕೂ ತಮ್ಮದೇ ಕೊಡುಗೆ
ಖ್ಯಾತ ನಟಿ ಆದರೂ ತಾಯಿ ನೆಲದ ಮೇಲಿನ ಒಲವು , ತುಳು ಭಾಷೆಯ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ :
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ “ಲೀಲಾಕಿರಣ್ ಅವರು ಕಂಕನಾಡಿಯಲ್ಲಿರುವ ಸೈಂಟ್ ಜೋಸೆಫ್ ಎಲಿಮೆಂಟರಿ ಸ್ಕೂಲ್ನಲ್ಲಿ 2ನೇ ತರಗತಿ ವರೆಗೆ ಕಲಿತವರು. ಕಡು ಬಡತನದಲ್ಲಿ ಬೆಳೆದ ಇವರು ಕನ್ನಡ ಸಿನೆಮಾದಲ್ಲಿ ಅವರು ತೊಡಗಿಸಿಕೊಂಡ ಬಳಿಕ, ಮಾತೃ ನೆಲದ ಭಾಷೆಯ ಪ್ರೀತಿಯಲ್ಲಿ ತುಳು ಭಾಷಾ ಚಲನಚಿತ್ರದ ಆರಂಭಕ್ಕೆ ಲೀಲಾವತಿ ಅವರು ಮೊದಲು ಸಹಾಯಹಸ್ತ ನೀಡಿದ್ದರು. ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನದೇ ಆದ ರೀತಿಯಲಿ ಬೆಂಬಲ-ಸಹಾಯ ನೀಡಿದರು
.ತುಳುವಿನ “ದಾರೆದ ಬುಡೆದಿ’ಯಿಂದ ಆರಂಭವಾಗಿ ಹಲವು ತುಳು ಸಿನೆಮಾಗಳ ನಿರ್ಮಾಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲ-ಸಹಾಯ ನೀಡಿದ್ದರು.ತುಳು 2ನೇ ಸಿನೆಮಾ 1971ರಲ್ಲಿ ತೆರೆಕಂಡ “ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ “ಪಗೆತ ಪುಗೆ’ ಹಾಗೂ ಬಿಸತ್ತಿ ಬಾಬು, 1973ರಲ್ಲಿ ತೆರೆಕಂಡ “ಯಾನ್ ಸನ್ಯಾಸಿ ಆಪೆ’. 1976ರಲ್ಲಿ ಬಂದ “ಸಾವಿರಡೊರ್ತಿ ಸಾವಿತ್ರಿ’, 1981ರಲ್ಲಿ “ಭಾಗ್ಯವಂತೆದಿ’, 1983ರಲ್ಲಿ “ಬಲ್ಕೆರೆ ಬುಡ್ಡೆ’ ಹಾಗೂ 1984ರಲ್ಲಿ “ದಾರೆದ ಸೀರೆ’ ಸಿನೆಮಾಗಳಲ್ಲಿ ಅದ್ಭುತವಾಗಿ ಅಭಿನಯಿಸಿ ತುಳುನಾಡಿನ ಮನಸ್ಸು ಗೆದ್ದವರು.
“ಮನೆಯಲ್ಲಿಯೂ ಅವರು ತುಳುವಿನಲ್ಲಿಯೇ ಹೆಚ್ಚಾಗಿ ಮಾತನಾಡುತ್ತ ತುಳು ಭಾಷಾ ಪ್ರೇಮ ಮೆರೆದವರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ.ಪ್ರತೀ ಸಿನೆಮಾದಲ್ಲಿಯೂ ತನ್ನ ಅಭಿನಯದ ಮೂಲಕವೇ ಮನಸೆಳೆದ ಲೀಲಾವತಿ ಅವರು ಕರಾವಳಿಯಲ್ಲಿ ನಡೆದ ತುಳು ಭಾಷಾ ಕುರಿತಾದ ಕೆಲವು ಕಾರ್ಯಕ್ರಮ, ತುಳು ಸಿನೆಮಾ ಸಂಭ್ರಮದಲ್ಲಿ ಹಿಂದೆ ಭಾಗವಹಿಸಿದ್ದರು. ಹಲವು ವರ್ಷಗಳ ಹಿಂದೆ ನಿರಂತರವಾಗಿ ಕರಾವಳಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು.
ಗಣ್ಯರ ದರ್ಶನ: ಸಾಂತ್ವನ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಸಿನಿಮಾ ಕ್ಷೇತ್ರದ ಗಣ್ಯರು ಆಗಮಿಸಿ ದರ್ಶನ ಪಡೆದಿದ್ದಾರೆ.
ತಾಯಿ ಮಗನ ಸಂಬಂಧಕ್ಕೆ ಇವರೇ ಸ್ಪಷ್ಟ ನಿದರ್ಶನ!
ಲೀಲಾವತಿ -ವಿನೋದ್ ರಾಜ್ ತಾಯಿ ಮಗನಾಗಿ ಎಲ್ಲರಿಗೂ ಮಾದರಿ. ಕ್ಷಣ ಕ್ಷಣವೂ ಅಮ್ಮ ಮಗ ಒಟ್ಟಿಗೆ ಇದ್ದರು. ಇಬ್ಬರ ಅಸೆ, ಕನಸಿಗೆ ಇಬ್ಬರೂ ಜತೆಯಾಗಿದ್ದರು. ತಾಯಿ ಮಗನ ಸಂಬಂಧ ಆದರ್ಶಮಯ ವ್ಯಕ್ತಿತ್ವ ಇವರದ್ದಾಗಿದೆ.