ಅಂಗವಿಕಲ ಕುಟುಂಬಕ್ಕೆ ಬೇಕಿದೆ “ಸಹಾಯ ಹಸ್ತ”!
– ಮನೆಯಲ್ಲಿರುವ ಮೂವರು ಕೂಡ ಅಂಗವಿಕಲರು
– ದುಡಿಯಲು ಆಗದೆ ಬದುಕು ಸಾಗಿಸಲು ಸಂಕಷ್ಟ
NAMMUR EXPRESS NEWS
ತೀರ್ಥಹಳ್ಳಿ: ಮನೆಯಲ್ಲಿ ಮೂವರು ಅಂಗವಿಕಲರು. ದುಡಿಯಲು ಕೂಡ ಆಗುತ್ತಿಲ್ಲ. ಇದಲ್ಲದೆ ದಿನ ನಿತ್ಯದ ಖರ್ಚು, ಅರೋಗ್ಯ ನಿರ್ವಹಣೆಗಾಗಿ ಮಾಡಿದ ಸಾಲ. ಈಗ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಇದೀಗ ಈ ಕುಟುಂಬ ಸಹಾಯಕ್ಕಾಗಿ ಇದೀಗ ದಾನಿಗಳ ನೆರವನ್ನು ಕೋರಿದ್ದಾರೆ.
ಹೌದು. ತೀರ್ಥಹಳ್ಳಿಯ ಸರ್ಕಾರಿ ಪಿಯು ಕಾಲೇಜ್ ಹಿಂಭಾಗದಲ್ಲಿರುವ ರಾಜೇಶ್ ಎಂಬುವರ ಕುಟುಂಬ ಈಗ ಸಂಕಷ್ಟದಲ್ಲಿದೆ. ರಾಜೇಶ್, ಆತನ ಅಕ್ಕ ಅಂಗವಿಕಲರು. ರಾಜೇಶ್ ಕಾಲು ಅಂಗವಿಕಲರಾಗಿದ್ದರೂ ಅಲ್ಲಿ ಇಲ್ಲಿ ಕೆಲಸ ಮಾಡಿ ಅಕ್ಕ, ತಾಯಿಯನ್ನು ಸಾಕುತ್ತಿದ್ದಾರೆ. ದಿನೇ ದಿನೇ ಬದುಕು ಭಾರ ಆಗುತ್ತಿದೆ. ಬೇರೆಯವರ ಆಟೋವನ್ನು ದಿನದ ಬಾಡಿಗೆ ಆಧಾರದಲ್ಲಿ ಓಡಿಸುತ್ತಿರುವ ರಾಜೇಶ್ ಕೂಡ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಅಕ್ಕ ಕೂಡ ಕಾಲು ಸ್ವಾಧೀನ ಕಳೆದುಕೊಂಡಿದ್ದು ಅಂಗವಿಕಲರಾಗಿ ಕಳೆದ ಅನೇಕ ದಶಕಗಳಿಂದ ಜೀವನ ಮಾಡುತ್ತಿದ್ದಾರೆ. ತಾಯಿ ವಯಸಸ್ಸಿನ ಕಾರಣ ಕೆಲಸ ಮಾಡಲಾಗುತ್ತಿಲ್ಲ. ಆದರೆ ಇತ್ತೀಚೆಗೆ ಅವರಿಗೆ ದುಡಿಮೆ ಇಲ್ಲದ ಕಾರಣ ಬದುಕು ಸಾಗಿಸಲು ಸಂಕಷ್ಟವಾಗಿದ್ದು. ಇದೀಗ ಅವರು ಸಹಕಾರವನ್ನು ಕೋರಿದ್ದಾರೆ. ಇರುವ ಮನೆಯೂ ಬೀಳುವ ಹಂತದಲ್ಲಿದೆ. ಒಂದು ಹೊತ್ತು ಊಟಕ್ಕೂ ಕೂಡ ಕಷ್ಟಕರ ಪರಿಸ್ಥಿತಿ ಇದ್ದು, ಇದರ ನಡುವೆ ಅನಾರೋಗ್ಯ ಕಾಡುತ್ತಿದೆ. ಬದುಕು ಸಾಗಿಸಲು ಸಂಘ ಸಂಸ್ಥೆಗಳಲ್ಲಿ ಮಾಡಿದ ಸಾಲ ಇಡೀ ಕುಟುಂಬವನ್ನು ಪ್ರತಿ ಕ್ಷಣ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ತಮ್ಮ ಕೈಯಲ್ಲಾದ ಸಹಾಯ ಮಾಡಿರಿ
ಅಂಗವಿಕಲ ಕುಟುಂಬದ ನೋವಿಗೆ ತಮ್ಮ ಕೈಯಲ್ಲಿ ಆಗುವ ಸಹಾಯ ಮಾಡಬೇಕಿದೆ. ಸಂಘ ಸಂಸ್ಥೆಗಳು, ಎನ್. ಜಿ. ಓ, ಉದ್ಯಮಿಗಳು, ಜನಪ್ರತಿನಿಧಿಗಳು, ದಾನಿಗಳು ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡಬೇಕು ಎಂದು ಮಾಡಬಹುದಾಗಿದೆ.
ಬ್ಯಾಂಕ್ ಮತ್ತು ಡಿಜಿಟಲ್ ಖಾತೆ ಮಾಹಿತಿ
Name: Rajesh
Bank Name: Indian Overseas Bank
Account Number : 331701000000648
IFSC Code : IOBA0003317
Branch : Thirthahalli